Airtel Payments Bank: ಚಿನ್ನ ಖರೀದಿಗೆ ಡಿಜಿಗೋಲ್ಡ್ ಎಂಬ ಹೊಸ ಪ್ರಾಡಕ್ಟ್ ಆರಂಭಿಸಿದ ಏರ್​ಟೆಲ್​ ಪೇಮೆಂಟ್ ಬ್ಯಾಂಕ್

ಏರ್​ಟೆಲ್ ಪೇಮೆಂಟ್ಸ್​ ಬ್ಯಾಂಕ್​​ನಿಂದ ಡಿಜಿಗೋಲ್ಡ್ ಎಂಬ ಚಿನ್ನ ಖರೀದಿ ಪ್ರಾಡಕ್ಟ್ ಆರಂಭಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

Airtel Payments Bank: ಚಿನ್ನ ಖರೀದಿಗೆ ಡಿಜಿಗೋಲ್ಡ್ ಎಂಬ ಹೊಸ ಪ್ರಾಡಕ್ಟ್ ಆರಂಭಿಸಿದ ಏರ್​ಟೆಲ್​ ಪೇಮೆಂಟ್ ಬ್ಯಾಂಕ್
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 14, 2021 | 7:49 PM

ಡಿಜಿಟಲ್ ಸೇವೆ ವಿಸ್ತರಣೆ ಭಾಗವಾಗಿ ಏರ್​ಟೆಲ್​ ಪೇಮೆಂಟ್ಸ್​ ಬ್ಯಾಂಕ್​ನಿಂದ ಗುರುವಾರ ಡಿಜಿಗೋಲ್ಡ್ ಆರಂಭಿಸಲಾಗಿದೆ. ಯಾರು ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸುತ್ತಾರೋ ಅವರಿಗೆ ಈ ಪ್ಲಾಟ್​ಫಾರ್ಮ್ ಉಪಯೋಗ ಆಗಲಿದೆ. ಡಿಜಿಟಲ್ ಆಗಿ ಚಿನ್ನ ಒದಗಿಸುವ SafeGold ಜತೆಗೆ ಸಹಭಾಗಿತ್ವ ವಹಿಸಿ, ಈ ಸೇವೆಯನ್ನು ಒದಗಿಸಲಾಗುತ್ತದೆ. ಡಿಜಿಗೋಲ್ಡ್​ನೊಂದಿಗೆ ಏರ್​ಟೆಲ್​ ಪೇಮೆಂಟ್ಸ್​ ಬ್ಯಾಂಕ್​ನ ಉಳಿತಾಯ ಖಾತೆ ಗ್ರಾಹಕರು 24 ಕ್ಯಾರಟ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಅದು ಏರ್​ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕವಾಗಿ. ಅಷ್ಟೇ ಅಲ್ಲ, ಏರ್​ಟೆಲ್ ಪೇಮೆಂಟ್ಸ್​ ಬ್ಯಾಂಕ್​ನಲ್ಲಿ ಖಾತೆ ಇರುವ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಡಿಜಿಗೋಲ್ಡ್​ ಮೂಲಕವಾಗಿ ಉಡುಗೊರೆಯನ್ನು ಸಹ ನೀಡಬಹುದು.

ನಮ್ಮ ನಿಯೋ ಬ್ಯಾಂಕಿಂಗ್​ಗೆ ಡಿಜಿಗೋಲ್ಡ್ ಸೇರ್ಪಡೆಯು ಸರಳ, ಸುರಕ್ಷಿತ ಮತ್ತು ಮೌಲ್ಯಯುತ ಪ್ರಾಡಕ್ಟ್​ ಎಂದು ಬ್ಯಾಂಕ್​ನ ಸಿಒಒ ಗಣೇಶ್ ಅನಂತ್​ನಾರಾಯಣನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಗ್ರಾಹಕರು ಈಗ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನಮ್ಮ ಆ್ಯಪ್​ ಮೂಲಕ ಯಾವುದೇ ತಡೆಯಿಲ್ಲದ ಡಿಜಿಟಲ್ ಪಯಣ ಮಾಡಬಹುದು. ನಿರಂತರವಾಗಿ ನಮ್ಮ ಗ್ರಾಹಕರು ಹೂಡಿಕೆ ಮಾಡಲು ಅನುಕೂಲ ಆಗುವಂತೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್​ ಪ್ಲಾನ್​ಗಳನ್ನು​ ಕೂಡ ಪರಿಚಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರು ಖರೀದಿ ಮಾಡಿದ ಚಿನ್ನವನ್ನು ಸೇಫ್​ಗೋಲ್ಡ್​ನಿಂದ ಸುರಕ್ಷಿತವಾಗಿ ಇಡಲಾಗುತ್ತದೆ. ಈ ರೀತಿ ಸಂಗ್ರಹಿಸಿಡುವುದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಆಗುವುದಿಲ್ಲ. ಜತೆಗೆ ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​ ಮೂಲಕ ಯಾವುದೇ ಸಂದರ್ಭದಲ್ಲಾದರೂ ಕೆಲವೇ ಕ್ಲಿಕ್​ಗಳಲ್ಲಿ ಮಾರಾಟ ಮಾಡಬಹುದು. ಕನಿಷ್ಠ ಇಷ್ಟೇ ಹೂಡಿಕೆ ಮಾಡಬೇಕು ಎಂಬ ಯಾವ ಅಗತ್ಯ ನಿಯಮ ಇಲ್ಲ ಮತ್ತು ಗ್ರಾಹಕರು ಕನಿಷ್ಠ ಮೊತ್ತದೊಂದಿಗೆ ಹೂಡಿಕೆಯನ್ನು ಆರಂಭಿಸಬಹುದು. ಸೇಫ್​ಗೋಲ್ಡ್​ನಿಂದ ಅಂತರರಾಷ್ಟ್ರೀಯ ಗುಣಮಟ್ಟದ 24 ಕ್ಯಾರಟ್ ಚಿನ್ನವನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ. ಅನುಕೂಲ ಮತ್ತು ಇಂಟರ್​ನೆಟ್ ವೇಗ ಎರಡರ ಜತೆಗೆ ಸೆಬಿಯಿಂದ ನೋಂದಾಯಿತವಾದ ಟ್ರಸ್ಟಿಯ ಸುರಕ್ಷತೆಯೂ ಇದೆ. ಸಾಂಪ್ರದಾಯಿಕ ಚಿನ್ನದ ಖರೀದಿಗಿಂತ ಹೆಚ್ಚು ಸುರಕ್ಷವಾಗಿರುತ್ತದೆ.

ಇದನ್ನೂ ಓದಿ: ಏರ್​ಟೆಲ್​ ಪೇಮೆಂಟ್ಸ್ ಬ್ಯಾಂಕ್​ನಲ್ಲಿ 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತದ ಠೇವಣಿಗೆ ವರ್ಷಕ್ಕೆ ಶೇ 6ರಷ್ಟು ಬಡ್ಡಿ

(Airtel Payments Bank launched product called DigiGold to buy gold)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್