Electric cars in India: ಭಾರತದಲ್ಲಿ 2021ರಲ್ಲಿ ಬಿಡುಗಡೆ ಆಗಲಿರುವ ಟಾಪ್ ಎಲೆಕ್ಟ್ರಿಕ್ ಕಾರುಗಳು

2021 Upcoming electric cars in India: ಭಾರತದಲ್ಲಿ 2021ರಲ್ಲಿ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಿವು. ಟಾಟಾ, ಟೆಸ್ಲಾ, ಔಡಿ, ಮರ್ಸಿಡೀಸ್. ಮಹೀಂದ್ರಾ ಕಾರುಗಳಿವು.

Electric cars in India: ಭಾರತದಲ್ಲಿ 2021ರಲ್ಲಿ ಬಿಡುಗಡೆ ಆಗಲಿರುವ ಟಾಪ್ ಎಲೆಕ್ಟ್ರಿಕ್ ಕಾರುಗಳು
ಟೆಸ್ಲಾ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: May 18, 2021 | 2:23 PM

ಭವಿಷ್ಯದ ಕಾರು ಅನ್ನಿಸಿಕೊಂಡಿರುವುದು ಎಲೆಕ್ಟ್ರಿಕ್ ಕಾರು. ಇವುಗಳು ಪರಿಸರಸ್ನೇಹಿ ಮಾತ್ರವಲ್ಲ, ಬಹಳ ಕಾಲ ಬಾಳಿಕೆ ಬರುವಂಥದ್ದು. ಎಲೆಕ್ಟ್ರಿಕ್ ಕಾರಿನ ಬಳಕೆಗೇ ಭವಿಷ್ಯ ಎಂದು ಬಹುತೇಕ ಕಾರು ತಯಾರಕರು ಅಂದಾಜು ಮಾಡಿದ್ದು, ಎಲೆಕ್ಟ್ರಿಕ್ ಕಾರು ತಯಾರಿಕೆಗಾಗಿ ಈಗ ಕೆಲಸ ಆರಂಭಿಸಿದ್ದಾರೆ. ಇಡೀ ಜಗತ್ತು ಕೊರೊನಾ ಬಿಕ್ಕಟ್ಟು ಎದುರಿಸುತ್ತಿದ್ದು, ಜಗತ್ತಿನ ಹಲವು ಪ್ರಮುಖ ಕಂಪೆನಿಗಳು ಇ- ಕಾರುಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. 2021ರಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿರುವ ಎಲೆಕ್ಟ್ರಿಕ್ ಕಾರುಗಳ ವಿವರ ಇಲ್ಲಿದೆ.

ಔಡಿ ಇ-ಟ್ರಾನ್ ವಿಲಾಸಿ ಕಾರು ತಯಾರಕ ಕಂಪೆನಿಯಾದ ಔಡಿ, ಇ-ಟ್ರಾನ್ ಹಾಗೂ ಇ-ಟ್ರಾನ್ ಸ್ಪೋರ್ಟ್​ಬ್ಯಾಕ್ ಅನ್ನು ಭಾರತದಲ್ಲಿ ಬಿಡುಗಡೆ ಆಗಲು ಯೋಜನೆ ರೂಪಿಸಿದೆ. ಆಡಿಯಿಂದ ಭಾರತದಲ್ಲಿ ಇದು ಮೊದಲ ಎಲೆಕ್ಟಿಕ್ ಕಾರು ಬಿಡುಗಡೆ. ಇಲ್ಲಿ ಹೇಳಲಾದ ಎರಡು ಕಾರುಗಳು ಈ 2 ಎಲೆಕ್ಟ್ರಿಕ್ ಕಾರುಗಳು 355 ಬಿಎಚ್​ಪಿ ಮತ್ತುಯ 561 ಎನ್​ಎಂ ಗರಿಷ್ಠ ಟಾರ್ಕ್ ಸೃಷ್ಟಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದಲ್ಲಿ 452 ಕಿ.ಮೀ. ಮೈಲೇಜ್ ನೀಡುತ್ತದೆ. 95 kWh ಬ್ಯಾಟರಿಯನ್ನು ಹೊಂದಿರಲಿದ್ದು, ಮಾಮೂಲಿ ಚಾರ್ಜರ್​ನಲ್ಲಿ ಎಂಟೂವರೆ ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಮಹೀಂದ್ತಾ eKUV100 ಭಾರತದ ಕಾರು ತಯಾರಕ ಕಂಪೆನಿಯಾದ ಮಹೀಂದ್ರಾದಿಂದ eKUV100 ಅನ್ನು ಆಟೋ ಎಕ್ಸ್​ಪೋ 2020 ಪ್ರದರ್ಶಿಸಲಾಗಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆ ಆಗಲಿದ್ದು, ರೂ. 8.25 ಲಕ್ಷಕ್ಕೆ (ಭಾರತದಲ್ಲಿ ಎಕ್ಸ್​ ಶೋ ರೂಮ್) ಸಿಗಲಿದೆ. ಈ ಕಾರಿನಲ್ಲಿ 40 kW ಬ್ಯಾಟರಿ ಹೊಂದಿರಲಿದ್ದು, 53 ಬಿಎಚ್​ಪಿ ಹಾಗೂ ಗರಿಷ್ಠ 120 ಎನ್​ಎಂ ಟಾರ್ಕ್ ಸೃಷ್ಟಿಸುತ್ತದೆ. ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ.ಗಳ ಮೈಲೇಜ್ ದೊರೆಯುತ್ತದೆ.

ಮರ್ಸಿಡೀಸ್ ಬೆಂಜ್ ಇಕ್ಯೂಎಸ್ ಕಳೆದ ತಿಂಗಳು (ಏಪ್ರಿಲ್) ಮರ್ಸಿಡೀಸ್ ಬೆಂಜ್ ಭಾರತದ ಅಧಿಕೃತ ವೆಬ್​ಸೈಟ್​ನಲ್ಲಿ ಈ ಕಾರು ಲಿಸ್ಟ್ ಆಗಿದೆ. ಫ್ಯಾನ್ಸಿ ಕಾರು ಖರೀದಿಸಲು ಇದೊಳ್ಳೆ ಆಯ್ಕೆ. ಮರ್ಸಿಡೀಸ್ ಬೆಂಜ್ ಇಕ್ಯೂಎಸ್ ಕಾರು ಎರಡು ಮಾಡೆಲ್​ನಲ್ಲಿ ಲಭ್ಯ ಇದೆ. EQS 450+ ಮತ್ತು EQS 580 4MATIC ಇವೆರಡು ಲಭ್ಯ ಇದೆ. EQS 450+ ಬೇಸ್​ ವೇರಿಯಂಟ್ ಮತ್ತು EQS 580 4MATIC ಟಾಪ್ ಎಂಡ್​.

ಪೋರ್ಶೆ ಟಯ್ಕಾನ್ ಇದು ಪೋರ್ಶೆ ಕಂಪೆನಿಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು. ಇದು ಬಹು ನಿರೀಕ್ಷಿತ ಪೋರ್ಶೆ ಮಿಶನ್ ಇ ಕಾನ್ಸೆಪ್ಟ್. ಇದು ಗರಿಷ್ಠ 600 ಬಿಎಚ್​ಪಿ ಉತ್ಪಾದಿಸುತ್ತದೆ. ಒಂದು ಬಾರಿಗೆ ಚಾರ್ಜ್ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಮೈಲೇಜ್​ನಿಂದಲೂ ಸಮಾಧಾನ ಆಗಲಿಲ್ಲ ಅಂದರೆ, ಇನ್ನೊಂದು ಸಂಗತಿ ಇದೆ. 0ಯಿಂದ 100 ಕಿ.ಮೀ. ವೇಗವನ್ನು 3.5 ಸೆಕೆಂಡ್​ನಲ್ಲಿ ತಲುಪುತ್ತದೆ.

ಟಾಟಾ ಅಲ್ಟ್ರೋಜ್ Z ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ವಾಹನವನ್ನು ಮೊದಲಿಗೆ 2019ರಲ್ಲಿ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಯಿತು. ಈ ಹ್ಯಾಚ್​ಬ್ಯಾಕ್ Agile Light Flexible Advanced (ALFA) ಆರ್ಕಿಟೆಕ್ಚರ್ ಮೇಲೆ ಆಧಾರಪಟ್ಟಿದೆ. ಇದರಲ್ಲಿ ಅತ್ಯಾಧುನಿಕ ಝಿಪ್​ಟ್ರಾನ್ ತಂತ್ರಜ್ಞಾನ ಬಳಸಲಾಗುತ್ತದೆ. ಮತ್ತು ಲಿಥಿಯಂ-ಐಯಾನ್ ಬ್ಯಾಟರಿ IP67 ಪ್ರಮಾಣಪತ್ರವನ್ನು ಹೊಂದಿದೆ.

ಟೆಸ್ಲಾ ಮಾಡೆಲ್ 3 ಇದು ಭಾರತದಲ್ಲಿ ಸಿಗುವ ಟೆಸ್ಲಾ ಕಂಪೆನಿಯ ಮೊದಲ ಎಲೆಕ್ಟ್ರಿಕ್ ಕಾರು. ಮುಖ್ಯ ಕಚೇರಿಯನ್ನು ಮುಂಬೈನಲ್ಲಿ ಆರಂಭಿಸಲಿದೆ. ಉತ್ಪಾದನೆ ಕರ್ನಾಟಕದಲ್ಲಿ ನಡೆಯಲಿದೆ. ಒಂದು ಸಲ ಚಾರ್ಜ್​ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡುತ್ತದೆ. 0ಯಿಂದ 100 kmph ಅನ್ನು 3.1 ಸೆಕೆಂಡ್​ನಲ್ಲಿ ತಲುಪುತ್ತದೆ.

ವೊಲ್ವೊ XC40 ರೀಚಾರ್ಜ್ ವೊಲ್ವೊ XC40 ರೀಚಾರ್ಜ್ ಭಾರತದಲ್ಲಿ 2021ರ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಈ ಕಾರು ಕಂಪ್ಲಿಟ್ಲಿ ಬಿಲ್ಟ್ ಯೂನಿಟ್ (CBU) ಮಾಡೆಲ್ ಜತೆಗೆ ಬರುತ್ತದೆ. ಡ್ಯುಯಲ್ ಮೋಟಾರ್ ಪವರ್​ಟ್ರೇನ್ ಜತೆಗೆ 150 kW ಎಲೆಕ್ಟ್ರಿಕ್ ಮೋಟಾರ್ಸ್ ಪ್ರತಿ ಆಕ್ಸಿಲ್ ಜತೆಗೆ ಬರುತ್ತದೆ. 402 ಬಿಎಚ್​ಪಿ ಮತ್ತು 660 ಎನ್​ಎಂ ಗರಿಷ್ಠ ಟಾರ್ಕ್ ಸೃಷ್ಟಿಸುತ್ತದೆ. 4.9 ಸೆಕೆಂಡ್​ನಲ್ಲಿ 0ಯಿಂದ 100 kmph ವೇಗ ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಬಡ್ಡಿ ದರ ಕಡಿಮೆ?

(Here is the top electrical company cars from Tata to Tesla expected to launch in India in 2021)

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ