AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 16 May : ಈ ರಾಶಿಯವರು ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ, ಶುಕ್ರವಾರ ತಾಳ್ಮೆ‌ಯ ಮಿತಿ ಮೀರುವುದು, ಕೈಲಾಗದ ಕಾರ್ಯ, ಕಾರ್ಯ ವಿಲಂಬ, ವಾಹನಾಪಘಾತ ಇದೆಲ್ಲ ಇರುವುದು ಈ‌ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 16 May : ಈ ರಾಶಿಯವರು ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ
ಜ್ಯೋತಿಷ್ಯ
TV9 Web
| Edited By: |

Updated on: May 16, 2025 | 2:20 AM

Share

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ವೃಷಭ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಶುಕ್ರವಾರ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಾಧ್ಯ, ಕರಣ : ಬವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 52 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:53 – 12:29, ಯಮಘಂಡ ಕಾಲ 15:41 – 17:16, ಗುಳಿಕ ಕಾಲ 07:42 – 09:18

ಮೇಷ ರಾಶಿ: :ಹೂಡಿಕೆಯ ಹಣದಿಂದ ಇಂದು ಉಪಯೋಗವಾಲಿದ್ದು, ನಿಮಗೆ ಒತ್ತಡ ಕಡಿಮೆಯಗಲಿದೆ. ಒಂದೇ ರೀತಿಯ ಕೆಲಸದಿಂದ ಆಸಕ್ತಿ ಕುಂದಬಹುದು.‌ ಮಧ್ಯ ಸಣ್ಣ ವಿರಾಮವನ್ನು ನೀವು ಬಯಸುವಿರಿ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಛೇರಿಯಲ್ಲಿ ನೀವು ಮೇಲಧಿಕಾರಿಗಳು ಹಾಗೂ ನೌಕರರ ನಡುವೆ ಸಿಕ್ಕಿಬೀಳುವಿರಿ. ಕುಟುಂಬದ ಬೆಂಬಲ ನಿಮಗೆ ಶಕ್ತಿ ನೀಡುತ್ತದೆ. ಪ್ರೀತಿಯಲ್ಲಿ ನಿಗೂಢತೆಯ ಬದಲಿಗೆ ಸ್ಪಷ್ಟತೆ ಅಗತ್ಯವಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಿಲಂಬಿತ ಕೆಲಸಗಳಿಂದ ದೂರವಿರಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಕೈಲಾಗುವ ಕೆಲಸವನ್ನು ಮಾಡಿ ಕಿಂಚಿತ್ ಆದಾಯವನ್ನು ಮಾಡಿಕೊಳ್ಳುವಿರಿ. ನಿಮ್ಮ ಪ್ರಗತಿಯ ಬಗ್ಗೆ ಇತರರು ಪ್ರಶಂಸಿಸಬಹುದು. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ.

ವೃಷಭ ರಾಶಿ: :ಯಾವುದೇ ಶರತ್ತನ್ನು ಸ್ವೀಕರಿಸಲಾರಿರಿ. ಇಂದು ನೀವು ಮನಸ್ಸಿಗೆ ಹಿಡಿಸಿದ್ಸನ್ನು ಮಾತ್ರ ಮಾಡುವಿರಿ. ನಿಮ್ಮ ಪೂರ್ವ ನಿಶ್ಚಿತ ಯೋಜನೆಯನ್ನು ಬದಲಾಯಿಸುವಿರಿ. ತಂಪಾದ ವಸ್ತುಗಳನ್ನು ಸೇವಿಸಿ ಆರೋಗ್ಯ ಕೆಡುವುದು. ನಿಮ್ಮ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಕೆಲಸದ ಮೆಚ್ಚುಗೆಗಳು ಸಂತೋಷವನ್ನುಂಟುಮಾಡುತ್ತವೆ. ಹಣಕಾಸು ವಿಷಯದಲ್ಲಿ ಜಾಗರೂಕತೆ ಅಗತ್ಯವಿದೆ. ಬದಲಿ ವ್ಯವಸ್ಥೆ ಮಾಡುವುದು ನಿಮಗೆ ಕಷ್ಟವಾಗುವುದು. ಕುಟುಂಬದಲ್ಲಿ ಸಣ್ಣ ಮನಸ್ತಾಪ ಉಂಟಾಗಬಹುದು. ಮಾತುಗಳಲ್ಲಿ ನಿಖರತೆ ಇರಲಿ. ನಿಮ್ಮ ನಿರ್ಧಾರಗಳಲ್ಲಿ ತಲೆಕೆಡಿಸಿಕೊಳ್ಳದೇ ಸಾಗುವುದು ಉತ್ತಮ. ಇನ್ನೊಬ್ಬರನ್ನು ನೀವು ನಯವಾಗಿ ವಂಚಿಸುವಿರಿ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಮನೆಯ ವಾಸವನ್ನು ಬದಲಾಯಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರ ಬನ್ನಿ.

ಮಿಥುನ ರಾಶಿ: :ಹರಿತವಾದ ವಸ್ತುಗಳನ್ನು ಬಳಸುವಾಗ ಜಾಗರೂಕತೆ ಬೇಕು. ನಿಮ್ಮ ಬಗ್ಗೆ ಯಾರಾದರೂ ಪ್ರೀತಿ ತೋರಿಸಿದರೆ ಮುಜುಗರವಾಗುವುದು. ಯಾರನ್ನೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ಬಾಂಧವ್ಯದಲ್ಲಿ ವ್ಯವಹಾರ ಕಷ್ಟವಾದೀತು. ನೆರೆಯವರು ನಿಮ್ಮ ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು. ಮನೆಯವರ ಜೊತೆ ಕಾಲ ಕಳೆಯುವುದರಿಂದ ಶಾಂತಿ ಪಡೆಯುವಿರಿ. ಹಳೆಯ ಗೆಳೆಯನ ಸಂಪರ್ಕ ಸಂತೋಷ ನೀಡಬಹುದು. ಆರೋಗ್ಯದಲ್ಲಿ ವಿಶ್ರಾಂತಿ ಮುಖ್ಯ. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ.

ಕರ್ಕಾಟಕ ರಾಶಿ: :ಅಕ್ರಮದ ವಸ್ತುಗಳು ಕೈ ತಪ್ಪಿಹೋಗುವುದು. ಇಂದು ನಿಮ್ಮ ಪ್ರೇಮವು ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ನಿಮಗೆ ಇಂದು ಬಹಳ ಸಮಯ ಇರುವಂತೆ ತೋರುತ್ತದೆ. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಯಾವ ಕಾರ್ಯಕ್ಕೂ ಮುಂಚಿತವಾಗಿ ಹಣ ಕೊಡುವುದು ಬೇಡ. ಆರ್ಥಿಕ ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಬಹುತೇಕವಾಗಿ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡದೆ ಶ್ರದ್ಧೆಯಿಂದ ಪೂರ್ಣಗೊಳಿಸಿ. ಸಹಕರಿಸುವ ಮನೋಭಾವನೆ ಇಂದು ಯಶಸ್ಸಿಗೆ ದಾರಿ ತೆಗೆಯುತ್ತದೆ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ನಿಮ್ಮ ಹಸ್ತಕ್ಷೇಪ ಇರಲಿ. ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸುವಿರಿ. ಇಂದು ತಲ್ಲೀನರಾಗಿ ಎಲ್ಲ ಕಾರ್ಯವನ್ನು ಮಾಡುವಿರಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು.

ಸಿಂಹ ರಾಶಿ: :ನೀವು ಖರೀದಿಸುವ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿಕೊಳ್ಳ ಇಂದು ಹಲವು ರೀತಿಯಲ್ಲಿ ಪ್ರಯತ್ನ ಮಾಡುವಿರಿ. ಇಂದು ನೀವು ಅನಾಯಾಸವಾಗಿ ವೃತ್ತಿಯಲ್ಲಿ ತೊಡಗುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ಓಡಾಟವಿರುವುದು. ಉತ್ತಮ ಯೋಚನಾ ಶಕ್ತಿಯಿಂದ ಮಾರ್ಗವನ್ನು ಹುಡುಕುವಿರಿ. ಜಾಣ್ಮೆಯಿಲ್ಲದೇ ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಗಂಭೀರತೆ ಬೆಳೆಯಲಿದೆ. ಪ್ರಭಾವಿಗಳ ಶಿಫಾರಸು ಇದ್ದರೂ ಕೆಲಸ ಸಾಧ್ಯವಾಗದು. ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ.

ಕನ್ಯಾ ರಾಶಿ: :ಅನಪೇಕ್ಷಿತರಿಂದ ಸಹಾಯ ಸಿಗಲಿದ್ದು, ಅಚ್ಚರಿಯಾಗಬಹುದು. ನೀವು ಇನ್ನೊಬ್ಬರನ್ನು ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ವಾಹನ ಸಂಚಾರದಲ್ಲಿ ನಿಮಗೆ ಅಡ್ಡಿಗಳು ಬರಬಹುದು. ಇಂದಿನ ಕೆಲಸಗಳು ಬೇಗ ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಔಷಧದಿಂದ ದುಷ್ಪರಿಣಾಮವಾಗಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಕಳೆದುಕೊಂಡಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ.

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್