AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sun Transit 2026: ಸೂರ್ಯ ಪೂರ್ವಾಷಾಢಾ ನಕ್ಷತ್ರದಿಂದ ಉತ್ತರಾಷಾಢಾಕ್ಕೆ ಸಂಚಾರ; ಈ ರಾಶಿಗೆ ಅದೃಷ್ಟದ ಸುರಿಮಳೆ!

ಸೂರ್ಯನು ಧನು ರಾಶಿಯ ಪೂರ್ವಾಷಾಢಾ ನಕ್ಷತ್ರದಿಂದ ಉತ್ತರಾಷಾಢಾ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಈ ಉತ್ತಮ ಸ್ಥಿತಿಯಿಂದಾಗಿ ಅನೇಕ ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ. ಆತ್ಮವಿಶ್ವಾಸ, ಆರೋಗ್ಯ, ಆರ್ಥಿಕ ವೃದ್ಧಿ, ಉದ್ಯೋಗ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ವಿಶೇಷವಾಗಿ ಮೇಷ, ಮಿಥುನ, ಸಿಂಹ, ಧನು ರಾಶಿಯವರಿಗೆ ಉತ್ತಮ ಪ್ರಭಾವ ಬೀರಲಿದೆ.

Sun Transit 2026: ಸೂರ್ಯ ಪೂರ್ವಾಷಾಢಾ ನಕ್ಷತ್ರದಿಂದ ಉತ್ತರಾಷಾಢಾಕ್ಕೆ ಸಂಚಾರ; ಈ ರಾಶಿಗೆ ಅದೃಷ್ಟದ ಸುರಿಮಳೆ!
ರವಿಯ ಸಂಚಾರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 11, 2026 | 11:31 AM

Share

ಸೂರ್ಯನು ಸದ್ಯ ಧನು ರಾಶಿಯ ಪೂರ್ವಾಷಾಢಾ ನಕ್ಷದಲ್ಲಿ ಇದ್ದು ಉತ್ತರಾಷಾಢಾ ನಕ್ಷತ್ರಕ್ಕೆ ಹೋಗುವನು. ಶುಕ್ರನ ಆಧಿಪತ್ಯದಿಂದ ತನ್ನ ಆಧಿಪತ್ಯಕ್ಕೆ ಹೋಗುವನು. ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಫಲವೂ ಉತ್ತಮವಾಗಿರಲಿದೆ. ಸೂರ್ಯನು ಯಾವೆಲ್ಲ ರಾಶಿಗೆ ಶುಭವನ್ನು ಕೊಡುವನು ಎನ್ನುವುದನ್ನು ನೋಡಬಹುದು. ಮುಖ್ಯವಾಗಿ, ಆತ್ಮವಿಶ್ವಾಸ, ಆರೋಗ್ಯ, ಸರ್ಕಾರಿ ಕಾರ್ಯ, ಸಂಪತ್ತು, ತಂದೆಗೆ ಸಂಧಿಸಿದ ಕಾರ್ಯಗಳು ಅಗುವ ಕಾರಣ ಸೂರ್ಯಾನುಗ್ರಹ ಬೇಕಾಗುತ್ತದೆ. ಗುರುವಿನ ದೃಷ್ಟಿಯೂ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.

ಮೇಷ ರಾಶಿ:

ಸರ್ಕಾರ ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ. ಹಂತ ಹಂತವಾಗಿ ಆದಾಯ ಹೆಚ್ಚಳ. ಅತಿವ್ಯಯ ತಪ್ಪಿಸಿ ಭೂಮಿ ಅಥವಾ ಮನೆ, ಕಚೇರಿ, ಜಾಗ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ತೊಡೆ, ಸೊಂಟದ ಬಗ್ಗೆ ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಹೊಸ ವಿಷಯಗಳಿಗೆ ಒತ್ತು, ಪರೀಕ್ಷೆಯಲ್ಲಿ ಯಶಸ್ಸು ಆತ್ಮವಿಶ್ವಾಸದಿಂದ ಧೈರ್ಯ, ನಿರ್ಧಾರದಲ್ಲಿ ಸ್ಪಷ್ಟತೆ ಸಿಗಕಿದೆ.

ಮಿಥುನ ರಾಶಿ:

ಸಂಘಟನೆ, ಮಾರ್ಗದರ್ಶನ, ತರಬೇತಿಯ‌ ಉದ್ಯೋಗದಿಂದ ಲಾಭ. ಹಣಕಾಸಿಗೆ ಸಂಬಂಧಿಸದಂತೆ ಆದಾಯದಲ್ಲಿ ಸ್ಥಿರತೆ. ಭೂಮಿಯ ದಾಖಲೆ ಪರಿಶೀಲನೆ ಅಗತ್ಯ, ಲಾಭವೂ ಸಾಧ್ಯ. ಆರೋಗ್ಯ ರಕ್ಷಣೆಗೆ ವ್ಯಾಯಾಮ, ಆಹಾರ ಸಮತೋಲನವಿರಲಿ. ವಿದ್ಯಾಭ್ಯಾಸದಲ್ಲಿ ಹಳೆಯ ವಿಚಾರಗಳು ಗಟ್ಟಿಯಾಗಲಿದೆ. ಆತ್ಮವಿಶ್ವಾಸ ಬೆಳವಣಿಗೆಯಾಗಿ ನಿರ್ಧಾರದಲ್ಲಿ ಸ್ಪಷ್ಟತೆ, ಪ್ರಶಂಸೆ ಪ್ರಾಪ್ತಿ.

ಸಿಂಹ ರಾಶಿ:

ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಹಣಕಾಸು ಸ್ಥಿರವಾಗುವ ಕಾರಣ ಮನಸ್ಸೂ ಸ್ಥಿರವಾಗಲಿದೆ. ಕೃಷಿ ಭೂಮಿ ಮತ್ತು ಮನೆ ಖರೀದಿಗೆ ಯಶಸ್ಸಿನ ಹೆಜ್ಜೆ.ಆರೋಗ್ಯದಲ್ಲಿ ಉಷ್ಣತೆ, ಸೊಂಟ, ಹೆಗಲು ನೋವಾಗಲಿದ್ದು ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಪರೀಕ್ಷೆ ಫಲಕಾರಿಯಾಗಲಿದೆ. ಆತ್ಮವಿಶ್ವಾಸವಿದ್ದರೆ ಸಾಮಾಜಿಕ ಗೌರವದಿಂದ ತೃಪ್ತಿ.

ಧನು ರಾಶಿ:

ಉದ್ಯೋಗದಲ್ಲಿ ನಾಯಕತ್ವ, ಹೊಣೆಗಾರಿಕೆಯನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಹಣಕಾಸಿನಲ್ಲಿ ಹಂತ ಹಂತವಾಗಿ ವೃದ್ಧಿಯಿಂದ ನೆಮ್ಮದಿ ನಿಮ್ಮದು. ಚರಾಸ್ತಿಯ ಖರೀದಿಯನ್ನು ಮಾಡಲು ಒತ್ತಡ ಬರಲಿದೆ. ಆರೋಗ್ಯದಲ್ಲಿ ಉಷ್ಣತೆ, ರಕ್ತದೊತ್ತಡ ಅಧಿಕವಗಲಿದ್ದು, ಆಹಾರದ ಬಗ್ಗೆ ಜಾಗ್ರತೆ ಇರಲಿ. ವಿದ್ಯಾಭ್ಯಾಸದಲ್ಲಿ ಅಧ್ಯಯನ ಸುಸಂಪನ್ನವಗಲಿದೆ. ಆತ್ಮವಿಶ್ವಾಸವಿದ್ದು ಧೈರ್ಯ, ಒತ್ತಡವಿಲ್ಲದೇ ಎಲ್ಲವನ್ನೂ ಸಾಧಿಸುವಿರಿ.

– ಲೋಹಿತ್ ಹೆಬ್ಬಾರ್