ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ರಾಜ ಮಹರಾಜರು ಆಳಿದ ಗದಗದ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಮನೆ ಕಟ್ಟಲು ಪಾಯ ಆಗೆಯುವಾಗ ತಂಬಿಗೆಯಲ್ಲಿ ತುಂಬಿಡಲಾಗಿದ್ದ ನಿಧಿ ಪತ್ತೆಯಾಗಿದೆ. ಸುಮಾರು 466 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು, ಕುಟುಂಬವದರು ಜಿಲ್ಲಾಡಳಿತಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಚಿನ್ನ ಪತ್ತೆಯಾದ ಲಕ್ಕುಂಡಿ ಗ್ರಾಮಕ್ಕೆ ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ್ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯನವರೇ ಮಾಹಿತಿ ಪಡೆದು ಚಿನ್ನ ರಕ್ಷಿಸುವಂತೆ ಸೂಚನೆ ನೀಡಿದ್ರು. ಹೀಗಾಗಿ ಜಿಲ್ಲಾಡಳಿತ ಚಿನ್ನ ರಕ್ಷಿಸಿದೆ. ಸದ್ಯ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ 11 ಅಥವಾ 12ನೇ ಶತಮಾನದ ಚಿನ್ನಾಭರಣ ಅಂತಾ ಅಂದಾಜಿಸಲಾಗಿದೆ.
ಗದಗ, (ಜನವರಿ 11): ರಾಜ ಮಹರಾಜರು ಆಳಿದ ಗದಗದ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಮನೆ ಕಟ್ಟಲು ಪಾಯ ಆಗೆಯುವಾಗ ತಂಬಿಗೆಯಲ್ಲಿ ತುಂಬಿಡಲಾಗಿದ್ದ ನಿಧಿ ಪತ್ತೆಯಾಗಿದೆ. ಸುಮಾರು 466 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು, ಕುಟುಂಬವದರು ಜಿಲ್ಲಾಡಳಿತಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಚಿನ್ನ ಪತ್ತೆಯಾದ ಲಕ್ಕುಂಡಿ ಗ್ರಾಮಕ್ಕೆ ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ್ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯನವರೇ ಮಾಹಿತಿ ಪಡೆದು ಚಿನ್ನ ರಕ್ಷಿಸುವಂತೆ ಸೂಚನೆ ನೀಡಿದ್ರು. ಹೀಗಾಗಿ ಜಿಲ್ಲಾಡಳಿತ ಚಿನ್ನ ರಕ್ಷಿಸಿದೆ. ಸದ್ಯ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ 11 ಅಥವಾ 12ನೇ ಶತಮಾನದ ಚಿನ್ನಾಭರಣ ಅಂತಾ ಅಂದಾಜಿಸಲಾಗಿದೆ. ಚಿನ್ನಾಭರಣ ಸ್ವರೂಪ ನೋಡಿದ್ರೆ ಸಾಮಾನ್ಯ ಕುಟುಂಬಕ್ಕೆ ಸೇರಿದ್ದು ಎಂದು ಸಂಶೋಧಕರು ಹೇಳ್ತಿದ್ದಾರೆ. ಇನ್ನು ಈ ಬಗ್ಗೆ ಧಾರವಾಡದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ರಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿದ್ದು ನಿಧಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಗ್ರಾಮಸ್ಥರು ಆ ಚಿನ್ನವನ್ನು ನಮಗೆ ಕೊಡಿ ಎಂದು ಪಟ್ಟು ಹಿಡಿದ್ದಾರೆ. ಅದು ನಮ್ಮ ಪುರ್ವಜರು ಇಟ್ಟಿದ್ದ ಚಿನ್ನ . ಹೀಗಾಗಿ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬಸ್ಥರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

