ರಾತ್ರಿ ವೇಳೆ ದೇವಾಲಯದ ಬೀಗ ಮುರಿದು ಗರ್ಭ ಗುಡಿಯಲ್ಲಿದ್ದ ಶಿವಲಿಂಗ ಕಳ್ಳತನವಾಗಿದ್ದು, ಬೆಳಗ್ಗೆ ಅರ್ಚಕರು ಪೂಜೆ ಮಾಡಲು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ದಿನವೇ ಶಿವಲಿಂಗ ಕಳವು ಆಗಿರುವುದಕ್ಕೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಮಲ್ಲೇಶ್ವರಸ್ವಾಮಿ ದೇಗುಲದ ಹುಂಡಿ ಒಡೆದು ಕಳ್ಳರು ಹಣ ದೋಚಿದ್ದಾರೆ. ದೇವಾಲಯದ ಮೂರು ಬಾಗಿಲಿನ ಬೀಗ ಮುರಿದು ಕಳ್ಳರು ಹಣವನ್ನು ಕದ್ದಿದ್ದಾರೆ.
ಕೆರೆ ಮಣ್ಣು ಲೂಟಿ
ಆನೇಕಲ್: ಪಿಡಿಓ ಮತ್ತು ಪಂಚಾಯತಿಯ ಕೆಲ ಅಧಿಕಾರಿಗಳು ಕೆರೆ ಮಣ್ಣನ್ನು ಲೂಟಿ ಮಾಡಿ ಲಕ್ಷ ಲಕ್ಷ ಹಣವನ್ನು ಅಕ್ರಮವಾಗಿ ಸಂಪಾದಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದು ಟ್ರ್ಯಾಕ್ಟರ್ ಲೋಡ್ ಕೆರೆ ಮಣ್ಣನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ. ಆನೇಕಲ್ ತಾಲೂಕಿನ ಎರಡು ಗ್ರಾಮಗಳಾದ ನೆರಳೂರಿನ ಪಿಡಿಒ ಷರೀಫ್, ಕಾರ್ಯದರ್ಶಿ ಬಸವರಾಜ್ ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯ ಪಿಡಿಒ ಕೃಷ್ಣಪ್ಪ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀನಿವಾಸ್ನವರಿಂದ ವಂಚನೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಇದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಸೂಕ್ತ ಕ್ರಮಗಳು ತೆಗೆದುಕೊಂಡಿಲ್ಲ. ಕೆರೆಯ ಸಂರಕ್ಷಣೆ ಮಾಡುವವರೇ ಈ ರೀತಿ ಮಾಡಿದರೆ ಗತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ
ಟ್ಯಾಂಕರ್ ಮೂಲಕ ನೀರು ತುಂಬಿಸುವಾಗ ಸಂಪ್ಗೆ ಬಿದ್ದ ಮಗು.. ಒಂದೂವರೆ ನಿಮಿಷದ ಬಳಿಕ ರಕ್ಷಣೆ
Ugadi 2021: ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕು; ಮಾಂಸಾಹಾರ ಪ್ರಿಯರಿಗೆ ಭರ್ಜರಿ ಊಟ