ಮುಂಬೈನಲ್ಲಿ ಪೆಟ್ರೋಲ್​ ಬೆಲೆ 92 ರೂಪಾಯಿ!: ಕರ್ನಾಟಕದಲ್ಲಿ ನಾಳೆ ಎಷ್ಟಾಗಲಿದೆ ದರ?

|

Updated on: Jan 22, 2021 | 6:33 PM

ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ಲೀಟರ್​ಗೆ 25 ಪೈಸೆ ಏರಿಕೆ ಆಗಿದೆ. ಈ ಮೂಲಕ ಪೆಟ್ರೋಲ್​ ದರ ಲೀಟರ್​ಗೆ 92.04 ರೂಪಾಯಿ ಆಗಿದೆ. ಡೀಸೆಲ್​ ದರ ಲೀಟರ್​ಗೆ 82.40 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್​ ಬೆಲೆ 92 ರೂಪಾಯಿ!: ಕರ್ನಾಟಕದಲ್ಲಿ ನಾಳೆ ಎಷ್ಟಾಗಲಿದೆ  ದರ?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕಚ್ಚಾ ತೈಲದ ಬೆಲೆ ಇಳಿಕೆ ಆದರೂ ಕೇಂದ್ರ ಸರ್ಕಾರ ಪೆಟ್ರೋಲ್​ ದರವನ್ನು ಕಡಿಮೆ ಮಾಡಿಲ್ಲ. ದಿನದಿಂದ ದಿನಕ್ಕೆ ಪೆಟ್ರೋಲ್​ ಬೆಲೆ ಹೆಚ್ಚುತ್ತಲೇ ಇದ್ದು, ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಮುಂಬೈನಲ್ಲಿ ಇದೆ ಮೊದಲ ಬಾರಿಗೆ ಪೆಟ್ರೋಲ್​ ದರ ಲೀಟರ್​ಗೆ 92 ರೂಪಾಯಿ ದಾಟಿದೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ಲೀಟರ್​ಗೆ 25 ಪೈಸೆ ಏರಿಕೆ ಆಗಿದೆ. ಈ ಮೂಲಕ ಪೆಟ್ರೋಲ್​ ದರ ಲೀಟರ್​ಗೆ 92.04 ರೂಪಾಯಿ ಆಗಿದೆ. ಡೀಸೆಲ್​ ದರ ಲೀಟರ್​ಗೆ 82.40 ರೂಪಾಯಿ ಆಗಿದೆ.

ಬೆಂಗಳೂರಿನಲ್ಲೂ ಪೆಟ್ರೋಲ್​ ದರ ಇಂದು ಲೀಟರ್​ಗೆ 26 ಪೈಸೆ ಏರಿಕೆ ಆಗಿದೆ. ಈ ಮೂಲಕ ಲೀಟರ್​ಗೆ 88.33 ರೂಪಾಯಿ ತಲುಪಿದೆ. ಲೀಟರ್​ ಡೀಸೆಲ್​ ದರ 26 ಪೈಸೆ ಏರಿಕೆ ಕಂಡು 80.20 ರೂಪಾಯಿ ಆಗಿದೆ.

ಕೊರೊನಾ ವೈರಸ್​ ಕಾಣಿಸಿಕೊಂಡ ಸರ್ಕಾರ ಲಾಕ್​ಡೌನ್​ ಮಾಡಿತ್ತು. ಈ ಅವಧಿಯಲ್ಲಿ ಪೆಟ್ರೋಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಆದರೆ, ಲಾಕ್​ಡೌನ್​ ಪೂರ್ಣಗೊಂಡ ನಂತರ ನಿರಂತರವಾಗಿ ಪೆಟ್ರೋಲ್​ ದರ ಹೆಚ್ಚುತ್ತಲೇ ಇದೆ.

ಜನರಿಗೆ ಬರೆ.. ಆದರೆ ಪೆಟ್ರೋಲ್, ಡೀಸೆಲ್ ಮಾರಾಟದಿಂದ ಕೇಂದ್ರಕ್ಕೆ ಭರ್ಜರಿ ಲಾಭ!