ಕೊಡಗು ತೋಟದಲ್ಲಿ ಮತ್ತೊಂದು ಹೆಬ್ಬಾವು ಪತ್ತೆ, ಸೀದಾ ಅರಣ್ಯಕ್ಕೆ ಶಿಫ್ಟ್
ಕೊಡಗು: ಇಲ್ಲಿನ ಗುಡ್ಡೆಹೊಸೂರು ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ ಸಿಕ್ಕಿದೆ. ಸೋಮವಾರಪೇಟೆ ತಾ. ಗುಡ್ಡೆಹೊಸೂರಿನಲ್ಲಿ ಆಹಾರ ಅರಸಿ ಕಾಡಿನಿಂದ ಬಂದಿದ್ದ ಹೆಬ್ಬಾವು ಸುಮಾರು 15 ಅಡಿ ಉದ್ದವಿತ್ತು. ಉರಗತಜ್ಞ ಪುರುಷೋತ್ತಮ ಅವರು ಹೆಬ್ಬಾವು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆನೆ ಕಾಡು ಸಮೀಪದ ಕಾವೇರಪ್ಪ ಎಂಬುವವರ ತೋಟದಲ್ಲಿ ಈ ಹೆಬ್ಬಾವು ಸುಳಿದಾಡುತ್ತಿತ್ತು.
ಕೊಡಗು: ಇಲ್ಲಿನ ಗುಡ್ಡೆಹೊಸೂರು ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ ಸಿಕ್ಕಿದೆ. ಸೋಮವಾರಪೇಟೆ ತಾ. ಗುಡ್ಡೆಹೊಸೂರಿನಲ್ಲಿ ಆಹಾರ ಅರಸಿ ಕಾಡಿನಿಂದ ಬಂದಿದ್ದ ಹೆಬ್ಬಾವು ಸುಮಾರು 15 ಅಡಿ ಉದ್ದವಿತ್ತು.
ಉರಗತಜ್ಞ ಪುರುಷೋತ್ತಮ ಅವರು ಹೆಬ್ಬಾವು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆನೆ ಕಾಡು ಸಮೀಪದ ಕಾವೇರಪ್ಪ ಎಂಬುವವರ ತೋಟದಲ್ಲಿ ಈ ಹೆಬ್ಬಾವು ಸುಳಿದಾಡುತ್ತಿತ್ತು.




