ದಕ್ಷಿಣದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಯಾತ್ರೆ: ಯಾತ್ರಿಕರಿಗೆ ಸಬ್ಸಿಡಿ ಆಫರ್; ಟಿಕೆಟ್ ಬುಕ್ ಹೇಗೆ?

| Updated By: Rakesh Nayak Manchi

Updated on: Jan 12, 2024 | 8:57 AM

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯು ದಕ್ಷಿಣ ಯಾತ್ರಾ ಯೋಜನೆ ಆರಂಭಿಸಿದ್ದು, ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಈ ಯಾತ್ರೆ ನಡೆಯಲಿದೆ. ಆಸಕ್ತರು ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಯಾತ್ರಿಕರಿಗೆ ಸಬ್ಸಿಡಿ ಆಫರ್ ಕೂಡ ನೀಡಲಾಗಿದೆ. ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ದಕ್ಷಿಣ ಯಾತ್ರೆ ನಡೆಯಲಿದೆ.

ದಕ್ಷಿಣದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಯಾತ್ರೆ: ಯಾತ್ರಿಕರಿಗೆ ಸಬ್ಸಿಡಿ ಆಫರ್; ಟಿಕೆಟ್ ಬುಕ್ ಹೇಗೆ?
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಯಾತ್ರೆ: ಯಾತ್ರಿಕರಿಗೆ ಸಬ್ಸಿಡಿ ಆಫರ್; ಆನ್​ಲೈನ್ ಮೂಲಕ ಟಿಕೆಟ್ ಬುಕ್
Follow us on

ಬೆಂಗಳೂರು, ಜ.12: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯು ದಕ್ಷಿಣ ಯಾತ್ರಾ (Dakshina Yatra) ಯೋಜನೆ ಆರಂಭಿಸಿದ್ದು, ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಈ ಯಾತ್ರೆ ನಡೆಯಲಿದೆ. ಆಸಕ್ತರು ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಯಾತ್ರಿಕರಿಗೆ ಸಬ್ಸಿಡಿ ಆಫರ್ ಕೂಡ ನೀಡಲಾಗಿದೆ.

ದಕ್ಷಿಣ ತೀರ್ಥಕ್ಷೇತ್ರಗಳಿಗೆ ನಡೆಯು ಯಾತ್ರೆಗೆ ಧಾರ್ಮಿಕ ದತ್ತಿ ಇಲಾಖೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು, ಆಸಕ್ತ ಜನರು IRCTC ರೈಲ್ವೇ ಆ್ಯಪ್ ಮೂಲಕ ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ದಕ್ಷಿಣ ಯಾತ್ರೆ ನಡೆಯಲಿದೆ.

ಇದನ್ನೂ ಓದಿ: ತೆಲಂಗಾಣದ ವೃದ್ಧ ಶ್ರೀನಿವಾಸ ಶಾಸ್ತ್ರಿ ಪಾದುಕೆ ಹೊತ್ತು ಅಯೋಧ್ಯೆಯತ್ತ ಪಾದಯಾತ್ರೆ

ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಒಟ್ಟು ಆರು ದಿನಗಳ ಯಾತ್ರೆ ನಡೆಯಲಿದೆ. ಇದಕ್ಕೆ ಒಟ್ಟು ತಗಲುವ ವೆಚ್ಚ 15 ಸಾವಿರ ರೂಪಾಯಿ ಆಗಿದ್ದು, ಸರ್ಕಾರದಿಂದ 5 ಸಾವಿರ ರೂಪಾಯಿ ಸಬ್ಸಿಡಿ ಸಿಗಲಿದೆ. ಯಾತ್ರೆಗೆ ಹೋಗುವವರು 10 ಸಾವಿರ ರೂಪಾಯಿ ಮಾತ್ರ ಪಾವತಿಸಬೇಕು. ದಕ್ಷಿಣದ ಯಾತ್ರೆ ಸಂಬಂಧ ಮೊದಲ ರೈಲು ಜನವರಿ 18 ರಂದು ಹೊರಡಲಿದೆ. ಜನವರಿ 30 ರಂದು ಎರಡನೇ ರೈಲು ಹೊರಡಲಿದೆ. 3 ಟೈಯರ್ ಎಸಿ ಕೋಚ್​​ಗಳಲ್ಲಿ ಈ ಯಾತ್ರೆ ನಡೆಯಲಿದೆ.

ಪ್ರಸಿದ್ಧ ತೀರ್ಥಕ್ಷೇತ್ರಗಳು

ರಾಮೇಶ್ವರ, ಕನ್ಯಾಕುಮಾರಿ, ಮಧುರೈ ಹಾಗೂ ತಿರುವನಂತಪುರಂನಲ್ಲಿರುವ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುವ ಯಾತ್ರೆ ಇದಾಗಿದೆ. ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ನಿಲ್ದಾಣಗಳಿಂದ ಯಾತ್ರಿಕರು ರೈಲು ಹತ್ತಬಹುದು.

ವಿಶೇಷ ವೈದ್ಯಕೀಯ ವ್ಯವಸ್ಥೆ

ದಕ್ಷಿಣ ತೀರ್ಥಕ್ಷೇತ್ರ ಯಾತ್ರೆ ವೇಳೆ ಕೆಲವು ಯಾತ್ರಿಕರು ಪ್ರಯಾಣದ ವೇಳೆ ಆಯಾಸ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುವ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆಯು ಯಾತ್ರಾರ್ಥಿಗಳಿಗೆ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ