ಬೆಂಗಳೂರು: ಇನ್ಮುಂದೆ ಮುಖ್ಯಮಂತ್ರಿ ಸಹಿಯ ಮೂಲಕ ಅಧಿಕಾರಿಗಳ ವರ್ಗಾವಣೆ ಅಷ್ಟು ಸುಲಭವಲ್ಲ. ರಾಜ್ಯದಲ್ಲೂ ಸಹ ಪ್ರಧಾನಿ ಕಚೇರಿ ಮಾದರಿ ಅಧಿಕಾರಿಗಳನ್ನ ವರ್ಗಾವಣೆ ಮಾಡುವ ಪ್ರಸ್ತಾಪ ಮುಂದಿದೆ.
ಯಾವುದೇ ಅಧಿಕಾರಿಯ ವರ್ಗಾವಣೆಗೆ ಚೆಕ್ ಲಿಸ್ಟ್ ಭರ್ತಿ ಮಾಡಿ ಪ್ರತ್ಯೇಕ ಕಡತ ಪಾಲಿಸಬೇಕು. ಭರ್ತಿ ಮಾಡಿದ 11 ಕಾಲಂಗಳ ಪ್ರತ್ಯೇಕ ಕಡತವಿರಬೇಕು. ವರ್ಗಾವಣೆ ಸಂಬಂಧ ಶ್ಯಾಡೋ ಫೈಲ್ ಸಂರಕ್ಷಿಸಿಡಬೇಕು. ಬೇರೆ ಇಲಾಖೆಗಳಿಗೆ ವರ್ಗಾವಣೆ ಸಂದರ್ಭದಲ್ಲಿ ಸಹಮತಿ ಪಡೆದ ಬಳಿಕ ವರ್ಗಾವಣೆ ಪ್ರಸ್ತಾವ ಮಂಡಿಸಬೇಕಿದೆ.
ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಸಹಿ ಕಡ್ಡಾಯ:
15 ದಿನಗಳಿಗೊಮ್ಮೆ ಕಡತ ಒಟ್ಟುಗೂಡಿಸಿ ಮಂಡಿಸಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಅಧಿಕಾರಿ ವರ್ಗಾವಣೆಯ ಒಂದು ಕಡತ ಸಿಎಂ ಕಚೇರಿಗೆ ಕಳುಹಿಸಬೇಕು. ಎಲ್ಲಾ ಕಡತಗಳಲ್ಲೂ ಸಿಎಂ ಕಚೇರಿ ನೀಡಿರುವ ಚೆಕ್ ಲಿಸ್ಟ್ ಭರ್ತಿ ಮಾಡಿ ಕಾರ್ಯದರ್ಶಿ ಸಹಿ ಹಾಕಬೇಕು. ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಸಹಿ ಕಡ್ಡಾಯವಾಗಿದೆ. ಆದ್ರೆ, ಒಬ್ಬರ ಹೆಸರಿನಲ್ಲಿ 2 ಅಥವಾ 3 ಕಡತ ಕಳುಹಿಸುವಂತಿಲ್ಲ. ಒಂದೇ ಸ್ಥಳಕ್ಕೆ 2-3 ಹೆಸರು ಪ್ರಸ್ತಾಪಿಸುವುದನ್ನು ತಡೆಯಲು ಶ್ಯಾಡೋ ಫೈಲ್ ಸೃಷ್ಟಿಸಬೇಕೆಂದು ಹೊಸ ನಿಯಮ ಜಾರಿ.
ನಿಗದಿತ ವರ್ಗಾವಣೆ ಸಮಯದಲ್ಲಿ ಸಚಿವರಿಂದ ಅನುಮೋದನೆಗೊಂಡ ಕಡತಗಳನ್ನು ಆದೇಶ ಹೊರಡಿಸಿ ನಂತರ ಘಟನೋತ್ತರ ಅನುಮೋದನೆಗೆ ಸಿಎಂಗೆ ಕಳುಹಿಸುವಂತಿಲ್ಲ. ಸಿಎಂ ಸಹಿಯೊಂದಿಗೆ ನೋಟ್ ಶೀಟ್ ರೂಪದಲ್ಲಿ ಬರುವ ಆದೇಶಗಳಿಗೆ ವರ್ಗಾವಣೆ ಆದೇಶಗಳನ್ನು ಕಡತ ರೂಪದಲ್ಲಿ ಮಂಡಿಸಿ ನಂತರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಜಾರಿಗೊಳಿಸಬೇಕು.
Published On - 4:05 pm, Wed, 20 November 19