ಯಾದಗಿರಿ: ಜಿಲ್ಲೆಯ ಕರ್ನಾಳ್ ಗ್ರಾಮದ ಬಳಿ ಕೋಳಿ ಪಂದ್ಯ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 10 ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಶೇಧವಿದ್ದರೂ ಬೆಟ್ಟಿಂಗ್ ಕಟ್ಟುವ ಮೂಲಕ ಕೋಳಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಸದ್ಯ ಸುರಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು, ಕೋಳಿಗಳ ಸಮೇತ ಕೋಳಿ ಪಂದ್ಯ ನಡೆಸುತ್ತಿದ್ದ ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.