ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ

| Updated By: ರಾಜೇಶ್ ದುಗ್ಗುಮನೆ

Updated on: Dec 26, 2020 | 4:31 PM

ಈವರೆಗೆ ಈ ಕೇಸ್ ಸಂಬಂಧ ಮೂವರನ್ನು ಬಂಧಿಸಿದ್ದು, ಲಾಕ್​ಡೌನ್ ವೇಳೆಯಿಂದ ಖೋಟಾನೋಟು ತಯಾರಿ ಆರಂಭಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.

ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖೋಟಾನೋಟುಗಳ ಮದ್ರಣ ಜಾಲ ಪತ್ತೆ ಆಗಿದೆ. ಈ ನೋಟುಗಳನ್ನು ಚಲಾವಣೆಗೆ ಯತ್ನಿಸಿದ ವ್ಯಕ್ತಿ ಸೇರಿ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಲಾಕ್​ಡೌನ್ ವೇಳೆಯಿಂದ ಖೋಟಾನೋಟು ತಯಾರಿ ಆರಂಭಿಸಿದ್ದಾಗಿ ಬಂಧಿತರು ತಪ್ಪು ಒಪ್ಪಿಕೊಂಡಿದ್ದಾರೆ.  ಇಬ್ಬರನ್ನು ಪೊಲೀಸರು  ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ​ ಮುಂದೆ ಹಾಜರುಪಡಿಸಿದ್ದಾರೆ.

ಆಟೋ ಚಾಲಕನಿಂದ ಬಣ್ಣ ಬಯಲು
ಆಟೋದಲ್ಲಿ ತೆರಳುತ್ತಿದ್ದ ಜಮಾಲ್ ಎಂಬುವವನು ಖೋಟಾನೋಟನ್ನು ಆಟೋ ಚಾಲಕನಿಗೆ ನೀಡಿದ್ದ. ನೋಟಿನ ಬಗ್ಗೆ ಅನುಮಾನಗೊಂಡ ಚಾಲಕ ನೋಟನ್ನು ಪೊಲೀಸ್ ಠಾಣೆಗೆ ತಂದಾಗ ಜಮಾಲ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಖೋಟಾನೋಟಿನ ದಂಧೆ ಬಗ್ಗೆ ಬಾಯಿಬಿಟ್ಟ ಜಮಾಲ್ ಸೇರಿದಂತೆ ಇಮ್ರಾನ್ ಹಾಗೂ ಮುಬಾರಕ್ ಎಂಬುವರನನ್ನು ಬಂಧಿಸಿದ್ದಾರೆ.

ಪ್ರಿಂಟರ್  ಬಳಸಿ ಬಿಲ್ ಪೇಪರ್ ಮುಖಾಂತರ 100 ರೂ. ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದರು. ಒಂದು ಶೀಟ್​ನಲ್ಲಿ 2ರಿಂದ 3 ಖೋಟಾನೋಟುಗಳ ಮುದ್ರಣ ಮಾಡುತ್ತಿದ್ದರು. ವಿಲ್ಸನ್​ಗಾರ್ಡನ್ ಠಾಣೆ ಪಿಐ ಶಂಕರಾಚಾರಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಸುಮಾರು 20 ಶೀಟ್ ಖೋಟಾನೋಟು ಪತ್ತೆಯಾಗಿದೆ.

ಪಾದರಾಯನಪುರದ ಅರಾಫತ್ ನಗರದ ನಿವಾಸಿಯಾದ ಆರೋಪಿ ಜಮಾಲ್ ಮನೆಯಲ್ಲಿ ಪ್ರಿಂಟರ್ ಬಳಸಿ 100 ರೂ. ಮುಖಬೆಲೆಯ ನಕಲಿ ನೋಟುಗಳು ತಯಾರಿಸುತ್ತಿದ್ದರು. ಸದ್ಯ ವಿಲ್ಸನ್ ಗಾರ್ಡನ್ ಪೊಲೀಸರು ಅರಾಫತ್ ನಗರದಲ್ಲಿ ದಾಳಿ ಮುಂದುವರೆಸಿದ್ದು, ಈವರೆಗೂ ಎಷ್ಟು ಖೋಟಾ ನೋಟು ತಯಾರಿಸಲಾಗಿದೆ ಎಂಬ ಲೆಕ್ಕಾಚಾರ ನಡೆಸುತ್ತಿದ್ದಾರೆ.

ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..