ಹಾಸನ: ನಿಧಿ ಆಸೆಗೆ ಪುರಾತನ ಕಾಲದ ದೇವಾಲಯದ ಗರ್ಭಗುಡಿಯನ್ನು ಅಗೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಲೂರು ಠಾಣೆ ಪೊಲೀಸರು ಸುಮಾರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನ ಸಹಕಾರಿ ಸಂಘಗಳ ಉಪ ನಿಬಂಧಕ ನಾರಾಯಣ್, ಅರ್ಚಕ ತಿಪ್ಪೇಸ್ವಾಮಿ, ಜ್ಯೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ಮೂಲದ ಜಯರಾಮ್, ಚೇತನ್, ಮಂಜುನಾಥ್, ಹಾಸನ ಮೂಲದ ಕುಮಾರ್ ಬಂಧಿತ ಆರೋಪಿಗಳು. ಜಿಲ್ಲೆಯ ಆಲೂರು ತಾಲೂಕಿನ ಕೆ.ಹೊಸಕೋಟೆ ಸಮೀಪದ ಪಾರ್ವತಮ್ಮನ ಬೆಟ್ಟದಲ್ಲಿರುವ ದೇಗುಲದಲ್ಲಿ ಬಂಧಿತರು ಕೃತ್ಯವೆಸಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನು ಅಗೆದಿರುವ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರನ್ನು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ತನಿಖೆ ವೇಳೆ ಆರೋಪಿಗಳು ನಾಲ್ಕು ದಿನಗಳ ಹಿಂದೆ ರಾತ್ರೊ ರಾತ್ರಿ ಬೆಟ್ಟದ ಮೇಲೆ ಶೋಧ ನಡೆಸಿರುವುದು ಬೆಳಕಿಗೆ ಬಂದಿದೆ.
ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ
ಕಲಬುರಗಿ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಚೌಹಾಣ್ ಮತ್ತು ಸಂತೋಷ್ ಜಾಧವ್ ಎಂಬುವವರು ಬಂಧನಕ್ಕೊಳಗಾದವರು. ಆಳಂದ ತಾಲೂಕಿನ ಜಿರೋಳ್ಳಿ ತಾಂಡಾ ನಿವಾಸಿಗಳು ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರು ಲಕ್ಷ ಮೌಲ್ಯದ ಗಾಂಜಾ, ಸ್ಕಾರ್ಪಿಯೋ ಕಾರ್ನ ಜಪ್ತಿ ಮಾಡಿದ್ದಾರೆ. ಈ ಪ್ರಕರಣ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ
Father’s Day 2021: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಿ? ಇಲ್ಲಿದೆ ಕೆಲವು ಸಲಹೆಗಳು
ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ
(Police arrested the accused who dug the sanctum for treasure hunt in hassan)