Father’s Day 2021: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಿ? ಇಲ್ಲಿದೆ ಕೆಲವು ಸಲಹೆಗಳು
ಅಪ್ಪಂದಿರ ದಿನ: ನಿಮ್ಮ ಕೈಯಾರೆ ತಯಾರಿಸಿದ ಪುಷ್ಪಗುಚ್ಛ ನೀಡಿ ಅಪ್ಪನಿಗೆ ಮುಂಜಾನೆಯ ಶುಭಾಶಯ ತಿಳಿಸಿ. ಬಳಿಕ ದೇವರ ಮುಂದೆ ದೀಪ ಬೆಳಗಿ ಸಿಹಿ ತಿನ್ನಿಸುವ ಮೂಲಕ ಅಪ್ಪಂದಿರ ದಿನದ ಶುಭಾಶಯ ಹೇಳಿ.
ಪ್ರತಿಯೊಬ್ಬ ಮಕ್ಕಳಿಗೂ ಅಪ್ಪನೇ ಹೀರೋ.. ಅಪ್ಪನ ಬೆನ್ನ ಮೇಲೆ ಏರಿ ನಾನೇ ಎತ್ತರದಲ್ಲಿದ್ದೇನೆ ಎಂದು ಬೀಗುತ್ತಾ ನಡೆದಿದ್ದೇವೆ. ಅಪ್ಪನ ಕಿರುಬೆರಳ ಹಿಡಿದು ನಾನೇ ಧೈರ್ಯಶಾಲಿ ಅಂದಿದ್ದೇವೆ.. ದಿನವಿಡೀ ದುಡಿದು ಬೆವರ ಹನಿ ಸುರಿಸಿ ಮಕ್ಕಳಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟ ಅಪ್ಪನಿಗೆ ಇಂದು ಶುಭಾಶಯ ಹೆಳಲೇ ಬೇಕು. ಅಪ್ಪನ ಮುಂದೆ ನಿಂತು ಮಾಡಿದ ತಪ್ಪಿಗೆ ಕ್ಷಮೆ ಕೇಳಲೂ ಒಂದು ಅವಕಾಶವಿದೆ. ಜತೆಗೆ ತಾನು ಬಾಗಿ ಮಗನನ್ನು ಬೆನ್ನ ಮೇಲೆ ಹೇರಿ ಎತ್ತರಕ್ಕೆ ತಂದು ನಿಲ್ಲಿಸಿದ ವೀರನಿಗೆ ವಿಶೇಷವಾಗಿ ಶುಭಾಶಯ ತಿಳಿಸಲೇಬೇಕು. ಧನ್ಯವಾದ ಹೇಳಲೇಬೇಕು!
ಪ್ರತೀ ವರ್ಷ ಜೂನ್ ಮೂರನೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಪ್ಪಂದಿರ ದಿನಾಚರಣೆ ಈ ವಿಶೇಷವಾಗಿ ಅಪ್ಪನಿಗೆ ಏನಾದರೂ ಸರ್ಪ್ರೈಸ್ ಗಿಫ್ಟ್ ನೀಡಲೇ ಬೇಕಲ್ವೇ? ಅಪ್ಪನಿಗೆ ಖುಷಿ ಕೊಡುವ ವಿಚಾರದ ಕುರಿತಾಗಿ ಯೋಚಿಸಿ. ದಿನ ಪೂರ್ತಿ ಅಪ್ಪನಿಗಾಗಿಯೇ ಸಮಯಕೊಡಿ. ಹಾಗಿದ್ದಾಗ ಏನೆಲ್ಲಾ ಪ್ಲಾನ್ ಮಾಡಬೇಕು ಅಂತಿದ್ದೀರಿ? ಇಲ್ಲೊಂದಿಷ್ಟು ಸಲಹೆಗಳಿವೆ. ನಿಮಗಿಷ್ಟವಾದುದನ್ನು ಅಯ್ಕೆ ಮಾಡಿಕೊಳ್ಳಿ. ಈ ದಿನ ನಿಮಗೆ ಮರೆಯಲಾರದ ದಿನವಾಗಿರಬೇಕು.
ನಿಮ್ಮ ಕೈಯಾರೆ ತಯಾರಿಸಿದ ಪುಷ್ಪಗುಚ್ಛ ನೀಡಿ ಅಪ್ಪನಿಗೆ ಮುಂಜಾನೆಯ ಶುಭಾಶಯ ತಿಳಿಸಿ. ಬಳಿಕ ದೇವರ ಮುಂದೆ ದೀಪ ಬೆಳಗಿ ಸಿಹಿ ತಿನ್ನಿಸುವ ಮೂಲಕ ಅಪ್ಪಂದಿರ ದಿನದ ಶುಭಾಶಯ ಹೇಳಿ.
ಅಪ್ಪನಿಗೆ ಇಷ್ಟವಾಗುವ ಉಡುಗೊರೆಯನ್ನು ಯೋಚಿಸಿ ಅಥವಾ ಮನೆಯಲ್ಲಿಯೇ ಉಡುಗೊರೆಯನ್ನು ಸಿದ್ಧಪಡಿಸಿ. ನೀವು ಕೊಡುವ ಉಡುಗೊರೆ ತಂದೆಗೆ ಸರ್ಪ್ರೈಸ್ ಆಗಿರಲಿ.
ಅಪ್ಪ, ನಮಗಾಗಿ ಏನೆಲ್ಲಾ ಮಾಡಿದ್ದಾರೆ. ಅವುಗಳೆಲ್ಲವನ್ನೂ ನಾವು ಖುಷಿಯಿಂದ ಅನುಭವಿಸಿದ್ದೇವೆ. ಆದರೆ ಅಪ್ಪನಿಗಾಗಿ ಮಕ್ಕಳಾದ ನಾವು ವಿಶೇಷವಾಗಿ ಏನಾದರೂ ಮಾಡಬೇಕಲ್ಲವೇ? ಯಾವ ಅಪ್ಪಂದಿರೂ ಸಹ ಅದ್ದೂರಿಯ ಉಡುಗೊರೆಯನ್ನು ಎಂದೂ ಬಯಸುವುದಿಲ್ಲ. ಪ್ರತೀ ಹಂತದಲ್ಲಿಯೂ ಮಕ್ಕಳ ಯಶಸ್ಸನ್ನೇ ಬಯಸುತ್ತಾರೆ. ಹಾಗಾಗಿ ಅಪ್ಪನ ಬಗ್ಗೆ ಹೃದಯತುಂಬಿ ಮಾತನಾಡಿ ರೆಕಾರ್ಡ್ ಮಾಡಿ ಕಳುಹಿಸಿ. ನಿಮ್ಮ ಮಾತುಗಳು ಅಪ್ಪನಿಗೆ ಸಂತೋಷವಾಗಿರುವಂತಿರಬೇಕು. ಆನಂದಭಾಷ್ಪ ತುಂಬಿ ಬರುವಂತಿರಲಿ.
ಚಿಕ್ಕವರಿದ್ದಾಗ ಅಪ್ಪನೊಂದಿಗೆ ಆಟವಾಡಿದ ಕ್ಷಣದ ಚಿತ್ರಪಟಗಳಿರಬಹುದು. ಅವುಗಳೆಲ್ಲವನ್ನು ಒಟ್ಟುಗೂಡಿಸಿ ಅಪ್ಪನ ಕುರಿತಾದ ಒಂದೊಳ್ಳೆಯ ಹಾಡನ್ನು ಸೇರಿಸಿ ವಿಡಿಯೋ ತಯಾರಿಸಿ ಅಪ್ಪನಿಗೆ ಉಡುಗೊರೆಯಾಗಿ ನೀಡಿ. ಅಪ್ಪನಿಗಾಗುವ ಆ ಸಂತೋಷದ ಕ್ಷಣವನ್ನು ಕಣ್ತುಂಬ ನೋಡಿ ಖುಷಿ ಪಡಬಹುದು.
ಇದನ್ನೂ ಓದಿ:
Father’s Day 2021: ನೀನಂದ್ರೆ ನನಗೆ ಅಚ್ಚು ಮೆಚ್ಚಪ್ಪಾ.. ಈ ಬಾರಿ ಅಪ್ಪನಿಗಾಗಿ ಕೊಡುವ ಉಡುಗೊರೆ ವಿಶೇಷವಾಗಿರಲಿ
Father’s Day 2021 Date: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ