Father’s Day 2021 Date: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ
ತಂದೆಯ ದಿನಾಚರಣೆ: ಮಕ್ಕಳು ಮತ್ತು ಅಪ್ಪ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್ ತಿಂಗಳ 20ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ.

ಅಪ್ಪನ ಅದೆಷ್ಟೋ ನೋವು-ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದಿನವಿಡೀ ದುಡಿಯುತ್ತಾರೆ. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯ ಕಾಣುವವರೆಗೂ ಕೈ ಹಿಡಿದು ನಡೆಸಿದ ಪ್ರತ್ಯಕ್ಷ ದೇವರು ಅವರು. ಹಗಲಿರುಳು ದುಡಿದು- ತನ್ನ ಕಷ್ವ ಬದಿಗಿಟ್ಟು ಮಕ್ಕಳಿಗೆ ಪ್ರೀತಿಯನ್ನು ಮಾತ್ರ ಉಣಬಡಿಸಿದರು ಅಪ್ಪ. ಈ ಎರಡಕ್ಷರದ ಪದದಲ್ಲಿ ಅದೆಷ್ಟು ಗಾಂಭೀರ್ಯ, ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ.. ಐ ಲವ್ ಯು ಅಪ್ಪಾ..
ಮಕ್ಕಳು ಮತ್ತು ಅಪ್ಪ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್ ತಿಂಗಳ 20ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಕಣ್ಣ ಹನಿ ಕೆಳಗೆ ಬೀಳದಂತೆ, ಕಾಲಿಗೆ ಮುಳ್ಳು ಚುಚ್ಚದಂತೆ ಬೆನ್ನ ಮೇಲೆಯೇ ಹೊತ್ತು ಸಾಕಿದ ಪ್ರೀತಿ ಅಪ್ಪನಿಗಾಗಿ ಏನು ಸರ್ಪೈಸ್ ಗಿಫ್ಟ್ ಕೊಡಬೇಕೆಂದಿದ್ದೀರಿ?
ಆಚರಣೆ ಫಾದರ್ಸ್ ಡೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ನಂತಹ ದೇಶಗಳು ಮಾರ್ಚ್ 19ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ನಲ್ಲಿ ಆಗಸ್ಟ್ 8ರಂದು ಹಾಗೂ ಥೈಲಾಂಡ್ನಲ್ಲಿ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ.
ತಂದೆಯ ದಿನದ ಹೇಗೆ ಪ್ರಾರಂಭವಾಯಿತು? ಯುನೈಟೆಡ್ ಸ್ಟೇಟ್ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು.
ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.
ಇದನ್ನೂ ಓದಿ:
International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಾಮುಖ್ಯತೆ, ದಿನಾಂಕ ಮತ್ತು ಈ ವರ್ಷದ ಥೀಮ್ ತಿಳಿಯಿರಿ
Tv9 Yoga Class : ವರ್ಕ್ ಫ್ರಂ ಹೋಮ್ ಮಾಡುವವರು ಆಕ್ಸಿಜನ್ ಹೆಚ್ಚಿಸಲು ಈ ರೀತಿ ಮಾಡಬೇಕು