ಕೊವಿಡ್​ ಲಕ್ಷಣಗಳಿಂದ ಹೊರಬಂದರೂ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ? ಈ ವಿಷಯಗಳು ಗಮನದಲ್ಲಿರಲಿ

ಕೊವಿಡ್​ ಚೇತರಿಕೆಯ ಬಳಿಕ ಮಲಬದ್ಧತೆ, ಹಸಿವಿನ ಕೊರತೆ ಅಥವಾ ಹಸಿವು ಹೆಚ್ಚು, ಹೊಟ್ಟೆ ಉಬ್ಬುವುದು, ಕಿಬ್ಬೊಟ್ಟೆ ನೋವು, ಅತಿಸಾರ, ವಾಂತಿ, ಕರುಳಿನ ಉರಿಯೂತ ಸಮಸ್ಯೆಗಳು ಕಂಡು ಬರಬಹುದು.

ಕೊವಿಡ್​ ಲಕ್ಷಣಗಳಿಂದ ಹೊರಬಂದರೂ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ? ಈ ವಿಷಯಗಳು ಗಮನದಲ್ಲಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 18, 2021 | 6:44 AM

ಕೊವಿಡ್​ ಸೋಂಕು ಉಸಿರಾಟದ ಮೇಲೆ ಪರಿಣಾಮ ಬೀರುವುದಲ್ಲದೇ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ತಿಳಿದು ಬಂದಿದೆ. ಅದರಲ್ಲಿಯೂ ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೊವಿಡ್​ನಿಂದ ಚೇತರಿಸಿಕೊಂಡ ನಂತರವೂ ಕೂಡಾ ನಿಮ್ಮ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತಿದೆ. ಅದರಲ್ಲಿಯೂ ಹೆಚ್ಚಾಗಿ ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಅಂದಾದರೆ ಈ ಕುರಿತಂತೆ ನೀವು ಹೆಚ್ಚು ಗಮನವಹಿಸಲೇ ಬೇಕು.

ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ಮುಖ್ಯವಾದುದು. ತಿಂದ ಪ್ರತಿಯೊಂದು ಆಹಾರವೂ ಕೂಡಾ ಜೀರ್ಣವಾಗಬೇಕು. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಇತರ ಸಮಸ್ಯೆಗಳು ಕಾಡುತ್ತದೆ. ಹೀಗಿರುವಾಗ ಮುಖ್ಯವಾಗಿ ಗಮನಹರಿಸಬೇಕಾದ ಒಂದಿಷ್ಟು ವಿಷಯಗಳ ಕುರಿತಾಗಿ ತಿಳಿಯೋಣ. ಕೊವಿಡ್​ ಚೇತರಿಕೆಯ ಬಳಿಕ ಮಲಬದ್ಧತೆ, ಹಸಿವಿನ ಕೊರತೆ ಅಥವಾ ಹಸಿವು ಹೆಚ್ಚು, ಹೊಟ್ಟೆ ಉಬ್ಬುವುದು, ಕಿಬ್ಬೊಟ್ಟೆ ನೋವು, ಅತಿಸಾರ, ವಾಂತಿ, ಕರುಳಿನ ಉರಿಯೂತ ಸಮಸ್ಯೆಗಳು ಕಂಡು ಬರಬಹುದು. ಇದು ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದರಿಂದ ಕಂಡು ಬರುವ ಸಮಸ್ಯೆಗಳಾಗಿವೆ.

ಆಹಾರ ಪದ್ಧತಿ ಹೇಗಿರಬೇಕು? *ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಿ *ಅತಿಯಾಗಿ ತಿನ್ನುವುದನ್ನು ಬಿಟ್ಟುಬಿಡಿ *ಕ್ರಿಯಾಶೀಲರಾಗಿರಿ *ನಿಯಮಿತವಾಗಿ ವ್ಯಾಯಾಮ ಮಾಡಿ *ಫೈಬರ್​ ಸಂಯುಕ್ತಗಳಾಗಿರುವ ಪ್ರಿಬಯಾಟಿಕ್​ ಆಹಾರವನ್ನು ಸೇವಿಸಿ *ಪೌಷ್ಟಿಕಾಂಶಯುಕ್ತ ಹಣ್ಣುಗಳು- ತರಕಾರಿಗಳನ್ನು ಸೇವಿಸಿ *ಪ್ರತಿದಿನ 2-3 ಲೀಟರ್​ ನೀರು ಕುಡಿಯಿರಿ *ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಪದಾರ್ಥವನ್ನು ಸೇವಿಸಿ *ಹಾಲು, ಸಾಲ್​, ಬೇಳೆಕಾಳುಗಳು, ದ್ವಿದಳ ಧಾನ್ಯಗಳು, ಸೋಯಾದಂತಹ ಪೌಷ್ಟಿಕ ಆಹಾರ ಸೇವಿಸಿ *ಮಾಂಸಾಹಾರಿಗಳಾಗಿದ್ದರೆ ಕೋಳಿ, ಮೀನು, ಮೊಟ್ಟೆಯನ್ನು ಸೇವಿಸಿ *ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗುವ ಉಪ್ಪು ಮತ್ತು ಸಕ್ಕರೆಯ ಸೇವನೆಯ ಕುರಿತಾಗಿ ಜಾಗರೂಕರಾಗಿರಿ

ಇದನ್ನೂ ಓದಿ:

Health Tips: ದಾಳಿಂಬೆ ಸಿಪ್ಪೆಯಲ್ಲಿದೆ ನಿಮಗೆ ಗೊತ್ತಿಲ್ಲದ ಪ್ರಯೋಜನಗಳು

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ