ಬೆಂಗಳೂರು: ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ಆಡಳಿತಾಧಿಕಾರಿಯೊಬ್ಬರು ಕುಟುಂಬದ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಮೂಲದ ಅಪ್ಪಚ್ಚು ಮೆಜೆಸ್ಟಿಕ್ ಬಳಿ ಖಾಸಗಿ ಲಾಡ್ಜ್ ನಲ್ಲಿ ಆತ್ಮತ್ಯೆಗೆ ಶರಣಾಗಿದ್ದಾರೆ.
ಅಪ್ಪಚ್ಚು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ನಿರಂತರ ಕೆಲಸದಿಂದಾಗಿ ಸಮಯ ನೀಡಲಾಗುತ್ತಿಲ್ಲ ಎಂದು ಕುಟುಂಬದೊಂದಿಗೆ ಹೇಳಿಕೊಂಡಿದ್ದರು. ಎರಡು ತಿಂಗಳಿನಿಂದ ಮಂಕಾಗಿರುತ್ತಿದ್ದರು. ಅದೇ ಬೇಸರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಎಂದಿನಂತೆ ಮೊನ್ನೆ ಕೆಲಸಕ್ಕೆ ಹಾಜರಾಗಿ ನಿನ್ನೆ ಒಂದು ದಿನ ರಜೆ ಪಡೆದಿದ್ದರು. ಮನೆಗೆ ಹೋಗದೆ ಮೆಜೆಸ್ಟಿಕ್ ಬಳಿ ಖಾಸಗಿ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನೇಣಿಗೆ ಕೊರಳೊಡ್ಡಿದ್ದಾರೆ.
Published On - 12:30 pm, Tue, 15 October 19