ಬಸ್ ಸಂಚಾರ ತಡೆದ ನೌಕರರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು..

|

Updated on: Dec 12, 2020 | 12:39 PM

ಮೌನವಾಗಿ ಮುಷ್ಕರ ನಡೆಸಲು ಅವಕಾಶ ನೀಡಿದ್ದ ಪೊಲೀಸರು, ಚಾಲನೆ ಮಾಡಲು ಬಯಸುವ ಚಾಲಕರು ಬಸ್​ನ ಚಲಾಯಿಸಬಹುದು ಎಂದಿದ್ದರು.

ಬಸ್ ಸಂಚಾರ ತಡೆದ ನೌಕರರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು..
ನೌಕರರನ್ನು ವಶಪಡಿಸಿಕೊಂಡ ಪೊಲೀಸರು.
Follow us on

ಬೆಂಗಳೂರು: ಚಲಿಸುತಿದ್ದ ಬಸ್​ಗಳನ್ನು ತಡೆಯಲು ಮುಂದಾದ ನಾಲ್ವರು ನೌಕರನ್ನು ಮೆಜೆಸ್ಟಿಕ್​ನಲ್ಲಿ ಉಪ್ಪಾರಪೇಟೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೌನವಾಗಿ ಮುಷ್ಕರ ನಡೆಸಲು ಅವಕಾಶ ನೀಡಿದ್ದ ಪೊಲೀಸರು, ಚಾಲನೆ ಮಾಡಲು ಬಯಸುವ ಚಾಲಕರು ಬಸ್​ ಚಾಲನೆ ಮಾಡಬಹುದು ಎಂದಿದ್ದರು. ಆದರೆ ಅಂತಹ ಬಸ್​ಗಳನ್ನು ತಡೆದು ಗಲಾಟೆ ಮಾಡಲು ಮುಂದಾದ್ರೆ ಕೇಸ್ ಮಾಡಿ ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದು, ಇದೀಗ ಸದ್ಯಕ್ಕೆ ನಾಲ್ಕು ಜನ ನೌಕರರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ BMTC ಬಸ್ ಸಂಚಾರ: ಮೆಜೆಸ್ಟಿಕ್‌ಗೆ ಆಗಮಿಸಿದ 2 ಬಸ್‌ಗಳು

 

Published On - 12:35 pm, Sat, 12 December 20