ಕುತೂಹಲ ಮೂಡಿಸಿದ ಸಚಿವರು, ಶಾಸಕರ ನಡೆ.. ರೆಸಾರ್ಟ್‌ನಲ್ಲಿ ಗುಪ್ತ ಸಭೆ

|

Updated on: Jul 02, 2020 | 8:43 AM

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಈ ನಡುವೆ ರೆಸಾರ್ಟ್‌ನಲ್ಲಿ ಮತ್ತೆ ಕೆಲವು ಸಚಿವರು, ಬಿಜೆಪಿ ಶಾಸಕರು ಗುಪ್ತ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ಬಳಿಯ ಪ್ರೈಮ್ ರೋಸ್ ವಿಲ್ಲಾಸ್ ರೆಸಾರ್ಟ್‌ನಲ್ಲಿ ತಡರಾತ್ರಿ ಭಾರಿ ಮಿಟಿಂಗ್ ನಡೆದಿದೆ. ಆದ್ರೆ ಈ ಸಭೆಯಲ್ಲಿ ಯಾವ ವಿಷಯದ ಚರ್ಚೆ ನಡೆದಿದೆ ಎಂಬುವುದು ನಿಗೂಢವಾಗಿದೆ. ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ.ರವಿ, BJP ಮುಖಂಡರಾದ ಕೃಷ್ಣಪ್ಪ, ಮುನಿರಾಜು ಭಾಗಿಯಾಗಿದ್ದರು. ಮೊನ್ನೆ ರಾತ್ರಿ ರೆಸಾರ್ಟ್‌ಗೆ ಬಂದಿದ್ದ ಸಚಿವ ಆರ್.ಅಶೋಕ್‌ಗೆ […]

ಕುತೂಹಲ ಮೂಡಿಸಿದ ಸಚಿವರು, ಶಾಸಕರ ನಡೆ.. ರೆಸಾರ್ಟ್‌ನಲ್ಲಿ ಗುಪ್ತ ಸಭೆ
Follow us on

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಈ ನಡುವೆ ರೆಸಾರ್ಟ್‌ನಲ್ಲಿ ಮತ್ತೆ ಕೆಲವು ಸಚಿವರು, ಬಿಜೆಪಿ ಶಾಸಕರು ಗುಪ್ತ ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ಬಳಿಯ ಪ್ರೈಮ್ ರೋಸ್ ವಿಲ್ಲಾಸ್ ರೆಸಾರ್ಟ್‌ನಲ್ಲಿ ತಡರಾತ್ರಿ ಭಾರಿ ಮಿಟಿಂಗ್ ನಡೆದಿದೆ.

ಆದ್ರೆ ಈ ಸಭೆಯಲ್ಲಿ ಯಾವ ವಿಷಯದ ಚರ್ಚೆ ನಡೆದಿದೆ ಎಂಬುವುದು ನಿಗೂಢವಾಗಿದೆ. ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ.ರವಿ, BJP ಮುಖಂಡರಾದ ಕೃಷ್ಣಪ್ಪ, ಮುನಿರಾಜು ಭಾಗಿಯಾಗಿದ್ದರು. ಮೊನ್ನೆ ರಾತ್ರಿ ರೆಸಾರ್ಟ್‌ಗೆ ಬಂದಿದ್ದ ಸಚಿವ ಆರ್.ಅಶೋಕ್‌ಗೆ ಸೌತ್ ಕೃಷ್ಣಪ್ಪ, ಮುನಿರಾಜು ಸಾಥ್ ನೀಡಿದ್ದಾರೆ. ಇವರ ಜತೆಗೆ ನಿನ್ನೆ ರೆಸಾರ್ಟ್‌ಗೆ ಒಂದು ಶೆಟ್ಟರ್ ಜೊತೆ ಸೇರಿದ್ದಾರೆ. ಇಂದು ರಾತ್ರಿ 12.30ಕ್ಕೆ ರೆಸಾರ್ಟ್‌ನಿಂದ ಸಿ.ಟಿ.ರವಿ ಕಾರು ಹೊರಬಂದಿದೆ. ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.