ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನ ಲೋಕಾರ್ಪಣೆಗೊಳ್ಳುತ್ತದೆ; ಪ್ರಹ್ಲಾದ್ ಜೋಶಿ ಮಾಹಿತಿ

|

Updated on: Apr 27, 2021 | 10:03 AM

ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮಧ್ಯೆ ಇರುವ ಹುಬ್ಬಳ್ಳಿಯ ಉಣಕಲ್ ಹಾಗೂ ತೋಳನಕೆರೆಯ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಪ್ರವಾಸಿ‌ ತಾಣವನ್ನಾಗಿ ಮಾಡಲಾಗುತ್ತಿದೆ. ಕಳೆದ ಹಲವಾರು ತಿಂಗಳಿಂದ ಕಾಮಗಾರಿ‌ ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತದೆ.

ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನ ಲೋಕಾರ್ಪಣೆಗೊಳ್ಳುತ್ತದೆ; ಪ್ರಹ್ಲಾದ್ ಜೋಶಿ ಮಾಹಿತಿ
ಸಚಿವ ಪ್ರಹ್ಲಾದ್ ಜೋಶಿ
Follow us on

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿ ಪಡಿಸುತ್ತಿರುವ ಹುಬ್ಬಳ್ಳಿಯ ತೋಳನಕೆರೆ ಕಾಮಗಾರಿಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸಿ ಉದ್ಯಾನವನ್ನು ಸಾರ್ವಜನಿಕರ‌ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು. 42 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಉಣಕಲ್ ಕೆರೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮಧ್ಯೆ ಇರುವ ಹುಬ್ಬಳ್ಳಿಯ ಉಣಕಲ್ ಹಾಗೂ ತೋಳನಕೆರೆಯ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಪ್ರವಾಸಿ‌ ತಾಣವನ್ನಾಗಿ ಮಾಡಲಾಗುತ್ತಿದೆ. ಕಳೆದ ಹಲವಾರು ತಿಂಗಳಿಂದ ಕಾಮಗಾರಿ‌ ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತದೆ. ಸ್ಮಾರ್ಟ್ ಸಿಟಿ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ತೋಳನಕೆರೆಗೆ ಹರಿದು ಬರುತ್ತಿದ್ದ ಚರಂಡಿ ನೀರಿನ ಶುದ್ಧೀಕರಣಕ್ಕೆ ಘಟಕ ನಿರ್ಮಿಸಲಾಗಿದೆ. ದಿನ ಒಂದಕ್ಕೆ 10 ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡಲಾಗುತ್ತದೆ. ಮುಂದಿನ ದಿನಗಳ ಕೆರೆಯ ನೀರನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತದೆ. ಮಳೆಗಾಲದಲ್ಲಿನ ಕ್ಷಮತೆಯನ್ನು ಆಧರಿಸಿ ಮುಂದಿನ ಬದಲಾವಣೆಗಳನ್ನು ತಿಳಿಸಿ ಕಟ್ಟು ನಿಟ್ಟಿನ ನಿರ್ವಹಣೆ ಮಾಡಲಾಗುವುದು. ಯಾವುದೇ ರೀತಿಯಲ್ಲಿ ಯೋಜನೆ ವಿಫಲವಾಗಬಾರದು. 4 ತಿಂಗಳಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗುವುದು ಎಂದರು.

ಜನರ ಆಕರ್ಷಣೆ ಮಾಡುವ ಯೋಜನೆ
ಮೊದಲ ಹಂತದಲ್ಲಿ ಉಣಕಲ್ ಕೆರೆ ಸ್ವಚ್ಛಗೊಳಿಸುವುದರೊಂದಿಗೆ, ಬೆಳೆಯತ್ತಿದ್ದ ಕಳೆಯನ್ನು ತೆಗೆಯಲಾಗುತ್ತಿದೆ. ಮುಂದಿನ ಹಂತದಲ್ಲಿ ಉದ್ಯಾನವನ, ನೀರಿನ ಕಾರಂಜಿಗಳನ್ನು ಸಹ ನಿರ್ಮಿಸಲಾಗುವುದು. ಜಲ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಪ್ರಮುಖವಾಗಿ ನೀರಿನ ಕಾರಂಜಿ ಹಾಗೂ ನೀರಿನಲ್ಲೆ ಗಾರ್ಡನ್ ನಿರ್ಮಿಸಿ ಜನರನ್ನ ಆಕರ್ಷಣೆ ಮಾಡುವ ಯೋಜನೆ ಕೂಡಾ ಸ್ಮಾಟ್೯ ಸಿಟಿ‌ ಯೋಜನೆಯಲ್ಲಿ ಇದೆ. ಅದಕ್ಕಾಗಿ‌ ಈಗಾಗಲೇ ಡೆಮೋ‌‌ ಕೂಡಾ ಮಾಡಲಾಗಿದ್ದು, ಖುದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ( ಏಪ್ರಿಲ್ 27) ವೀಕ್ಷಣೆ ಮಾಡಿದರು. ಈ ಹಿಂದೆ ತೋಳನಕೆರೆ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಹಾಳಾಗಿದೆ. ಈ ಬಾರಿ ಗುತ್ತಿಗೆ ದಾರರಿಗೆ 5 ವರ್ಷಗಳ ನಿರ್ವಹಣೆಯ ಹೊಣೆ ನೀಡಲಾಗಿದೆ. ಸಾರ್ವಜನಿಕರು ಸಹ ಉದ್ಯಾನವನದ ಬಗ್ಗೆ ಕಾಳಜಿ ವಹಿಸಿ ಕಣ್ಗಾವಲು ಇಡಬೇಕು. ಅಧಿಕಾರಿಗಳ ಲೋಪ ಕಂಡುಬಂದರೆ ದೂರು ನೀಡಬೇಕು.

ಉದ್ಯಾನವನಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೊಸೈಟಿ
ಅವಳಿ ನಗರದ ಉದ್ಯಾನವನ ನಿರ್ವಹಣೆಗೆ ಜಿಲ್ಲಾಧಿಕಾರಗಳ ನೇತೃತ್ವದಲ್ಲಿ ಸೊಸೈಟಿ ರಚನೆ ಮಾಡಲಾಗುವುದು. ಪ್ರವೇಶ ಶುಲ್ಕದಿಂದ ಬಂದ ಹಣವನ್ನು ಬ್ಯಾಂಕ್ನಲ್ಲಿ ಇರಿಸಿ ಉದ್ಯಾನವಗಳ ನಿರ್ವಹಣೆಗೆ ಬಳಸಲಾಗುವುದು. ಕಾರಣ ಇಷ್ಟು ದಿನ‌ ಅವಳಿ ನಗರದಲ್ಲಿ ಉದ್ಯಾನವನ ನಿವರ್ಹಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರ ಕೋಟಿಗಟ್ಟಲೆ‌ ಹಣ ಸುರಿದು ಅಭಿವೃದ್ಧಿ ಮಾಡಿದರೆ ನಿವರ್ಹಣೆ ಇಲ್ಲದೆ ಹಾಳಗಿ ಕೋಟ್ಯಾಂತರ ರುಪಾಯಿ ಹಾಳಾಗುತ್ತಿದೆ. ಹೀಗಾಗಿ ಸೊಸೈಟಿ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಗದಗ ಜಿಲ್ಲಾಧಿಕಾರಿ ಸೂಚನೆ

ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಸಿಗದ ಬೆಡ್: 28 ವರ್ಷದ ಯುವಕ ಸಾವು

(Prahlad Joshi says tholan kere Park will be unveiled in four months at hubli)