
ಬೆಂಗಳೂರು, ಅಕ್ಟೋಬರ್ 17: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಬೆಂಗಳೂರಿನ ಸಹಯೋಗದೊಂದಿಗೆ ಪ್ರೆಸಿಡೆನ್ಸಿ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಪ್ರೆಸಿಡೆನ್ಸಿ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವತಿಯಿಂದ
‘ಚಿಪ್ ಟು ಕ್ರಾಪ್’ ಎಂಬ ಶೀರ್ಷಿಕೆಯ 24 ಗಂಟೆಗಳ ಹ್ಯಾಕಥಾನ್ ನಡೆಯಿತು.
ಐಸಿಎಆರ್-IIHR ಬೆಂಗಳೂರಿನ ನಿರ್ದೇಶಕ ಡಾ.ತುಸಾರ್ ಕಾಂತಿ ಬೆಹೆರಾ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿಸ್ಸಾರ್ ಅಹ್ಮದ್ ಹ್ಯಾಕಥಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಬೆಹೆರಾ, ಐಸಿಎಆರ್-ಐಐಎಚ್ಆರ್ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ನಡುವಿನ ಸಹಯೋಗದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಡಾ.ನಿಸ್ಸಾರ್ ಅಹ್ಮದ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಒಂದು ಸುವರ್ಣ ಅವಕಾಶವಾಗಿದ್ದು, ಉದ್ಯಮ ತಜ್ಞರಿಂದ ಕಲಿಯಲು ನೆರವಾಗುತ್ತವೆ ಎಂದರು. ಹ್ಯಾಕಥಾನ್ನ ಉಪ ನಿರ್ದೇಶಕಿ ಮತ್ತು ಸಂಘಟಕಿ ಡಾ. ಎಂ.ಎಸ್. ದಿವ್ಯಾರಾಣಿ, ಅತಿಥಿಗಳು ಮತ್ತು ವಿಶ್ವವಿದ್ಯಾಲಯದ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು.
‘ಚಿಪ್ ಟು ಕ್ರಾಪ್’ ಹ್ಯಾಕಥಾನ್
ಇದನ್ನೂ ಓದಿ: NEET SS ಪರೀಕ್ಷೆ ಮುಂದೂಡಿಕೆ, ಹೊಸ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
ಸುಮಾರು 100 ಹೆಚ್ಚು ನೋಂದಣಿಗಳು ಕಾರ್ಯಕ್ರಮದಲ್ಲಾಗಿದ್ದು, ಅದರಲ್ಲಿ 30 ಸಂಭಾವ್ಯ ತಂಡಗಳನ್ನು ಮೂಲಮಾದರಿ ಅಭಿವೃದ್ಧಿಗಾಗಿ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತು ತಂಡಗಳಿಂದ ನೇರ ಪ್ರದರ್ಶನ ಮತ್ತು IIHR ವಿಜ್ಞಾನಿಗಳಿಂದ ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರ್ಣಾಯಕ ಸವಾಲುಗಳು, ಪರಿಹಾರದ ಬಗ್ಗೆ ಮಾರ್ಗದರ್ಶನ ಒಳಗೊಂಡಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Fri, 17 October 25