ಕೊನೆಗೂ ತಮ್ಮ ಆರೋಗ್ಯದ ಬಗ್ಗೆ ಮೌನ ಮುರಿದ ಕುಮಾರಸ್ವಾಮಿ, ಏನಂದ್ರು ಕೇಳಿ?
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಗ್ಯದ ಕುರಿತು ಗುಸುಗುಸುಗಳು ಶುರುವಾಗಿದ್ದು, ಅದು ಅವರ ಬೆಂಬಲಿಗರಲ್ಲಿ ಆತಂಕ ಮೂಡುವಂತೆ ಮಾಡಿದೆ. ಯಾಕಂದ್ರೆ ಅವರ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಚರ್ಚೆಗಳಾಗುತ್ತಿವೆ. ಆದ್ರೆ, ಅವರಿಗೆ ಏನಾಗಿದೆ ಎನ್ನುವ ಬಗ್ಗೆ ತಿಳಿದುಬಂದಿಲ್ಲ.ಇದೀಗ ಸ್ವತಃ ಕುಮಾರಸ್ವಾಮಿಯೇ ಪರೋಕ್ಷವಾಗಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಹಾಸನ, (ಅಕ್ಟೋಬರ್ 17): ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಗ್ಯದ ಕುರಿತು ಗುಸುಗುಸುಗಳು ಶುರುವಾಗಿದ್ದು, ಅದು ಅವರ ಬೆಂಬಲಿಗರಲ್ಲಿ ಆತಂಕ ಮೂಡುವಂತೆ ಮಾಡಿದೆ. ಯಾಕಂದ್ರೆ ಅವರ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಚರ್ಚೆಗಳಾಗುತ್ತಿವೆ. ಆದ್ರೆ, ಅವರಿಗೆ ಏನಾಗಿದೆ ಎನ್ನುವ ಬಗ್ಗೆ ತಿಳಿದುಬಂದಿಲ್ಲ.ಇದೀಗ ಸ್ವತಃ ಕುಮಾರಸ್ವಾಮಿಯೇ ಪರೋಕ್ಷವಾಗಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಹಾಸನಾಂಬೆ ದರ್ಶನ ಪಡೆದುಕೊಂಡು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಕಳೆದ ಹಲವಾರು ತಿಂಗಳಿನಿಂದ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಹಲವಾರು ಜನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಭಗವಂತ ಪುನಃ ಶಕ್ತಿ ನೀಡಲಿ ಎಂದು ಹಾರೈಸಿರುವುದನ್ನು ನೋಡಿದ್ದೇನೆ ಎಂದು ಪರೋಕ್ಷವಾಗಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.

