ಬಿಗ್ ಬಾಸ್ ಮನೆ ಒಳಗೆ ಸುದ್ದಿಗೋಷ್ಠಿ: ಬಾಣದಂತಹ ಪ್ರಶ್ನೆಗಳಿಗೆ ತತ್ತರಿಸಿ ಹೋದ ರಕ್ಷಿತಾ ಶೆಟ್ಟಿ
ಮೊದಲ ಫಿನಾಲೆಗೆ ಬಿಗ್ ಬಾಸ್ ಮನೆ ಸಜ್ಜಾಗಿದೆ. ಸ್ಪರ್ಧಿಗಳಿಗೆ ಢವಢವ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಸುದ್ದಿಗೋಷ್ಠಿ ಮಾಡಲಾಗಿದೆ. ಮೊದಲ ಫಿನಾಲೆಯ ಫೈನಲಿಸ್ಟ್ಗಳು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಕಾಕ್ರೋಜ್ ಸುಧಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಬಾಣದಂತಹ ಪ್ರಶ್ನೆಗಳನ್ನು ರಕ್ಷಿತಾ ಶೆಟ್ಟಿಗೆ ಕೇಳಿದ್ದಾರೆ.
ಮೊದಲ ಫಿನಾಲೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಮನೆ ಸಜ್ಜಾಗಿದೆ. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಢವಢವ ಶುರುವಾಗಿದೆ. ಈ ನಡುವೆ ಸುದ್ದಿಗೋಷ್ಠಿ ಮಾಡಲಾಗಿದೆ. ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳೇ ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಅಶ್ವಿನಿ ಗೌಡ (Ashwini Gowda), ಕಾಕ್ರೋಜ್ ಸುಧಿ, ರಾಶಿಕಾ ಶೆಟ್ಟಿ ಅವರು ಬಾಣದಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ರಕ್ಷಿತಾ ಶೆಟ್ಟಿ (Rakshitha Shetty) ಅವರು ತತ್ತರಿಸಿ ಹೋಗಿದ್ದಾರೆ. ಅಕ್ಟೋಬರ್ 17ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ. ಅಶ್ವಿನಿ ಗೌಡ, ಕಾಕ್ರೋಜ್ ಸುಧಿ, ಮಾಳು ನಿಪನಾಳ, ರಾಶಿಕಾ ಶೆಟ್ಟಿ ಅವರು ಮಿಡ್ ಸೀಸನ್ ಫಿನಾಲೆಯ ಫೈನಲಿಸ್ಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

