ತಾಯಿ ಆಸ್ಪತ್ರೆಯಲ್ಲಿದ್ದರೂ ಆ್ಯಂಕರಿಂಗ್ಗೆ ಮಾಡಿದ ಅಕುಲ್ ಬಾಲಾಜಿ; ಸ್ಟೇಜ್ ಮೇಲೆ ಕಣ್ಣೀರು
Akul Balaji: ಅದ್ದೂರಿಯಾಗಿ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆದಿದೆ. ಈ ಅವಾರ್ಡ್ ಫಂಕ್ಷನ್ನಲ್ಲಿ ಅಕುಲ್ ಬಾಲಾಜಿ ಹಾಗೂ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದ್ದಾರೆ. ಅವರು ಸ್ಟೇಜ್ ಮೇಲೆ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.
ಅಕುಲ್ ಬಾಲಾಜಿ ಅವರು ಆ್ಯಂಕರಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಪರ ರಾಜ್ಯದವರಾದರೂ ಇಲ್ಲಿ ಬಂದು ಕನ್ನಡ ಕಲಿತಿದ್ದಾರೆ. ಅವರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ. ಈಗ ಅಕುಲ್ ಬಾಲಾಜಿ ಹಾಗೂ ಅನುಶ್ರೀ ಒಟ್ಟಾಗಿ ಜೀ ಕನ್ನಡದ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ನಡೆಸಿಕೊಟ್ಟರು. ಈ ವೇಳೆ ‘ಅತ್ಯುತ್ತಮ ತಾಯಿ’ ಅವಾರ್ಡ್ ನೀಡುವಾಗ ಅಕುಲ್ ಕಣ್ಣೀರು ಹಾಕಿದರು. ಏಕೆಂದರೆ ಆ ಸಂದರ್ಭದಲ್ಲಿ ಅವರ ತಾಯಿ ಆಸ್ಪತ್ರೆಯಲ್ಲಿ ಇದ್ದರಂತೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 17, 2025 03:36 PM

