ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ; ಜಾಗೋ ಮೈಸೂರು ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ರಕ್ತದ ಪತ್ರ

ಟಿಎಂಸಿ ಕಾರ್ಯಕರ್ತರು, ಮೂಲಭೂತವಾದಿಗಳಿಂದ ಹಿಂಸೆಯಾಗುತ್ತಿದೆ. 30 ಬಿಜೆಪಿ ಕಾರ್ಯಕರ್ತರು, ಅಮಾಯಕ ಹಿಂದೂಗಳ ಹತ್ಯೆಯಾಗಿದೆ. 7 ಸಾವಿರ ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ....

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ; ಜಾಗೋ ಮೈಸೂರು ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ರಕ್ತದ ಪತ್ರ
ಜಾಗೋ ಮೈಸೂರು ಅಧ್ಯಕ್ಷ ಚೇತನ್ ಮಂಜುನಾಥ್‌
Updated By: ಆಯೇಷಾ ಬಾನು

Updated on: Jul 08, 2021 | 10:06 AM

ಮೈಸೂರು: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಬಿಜೆಪಿ ಕಾರ್ಯಕರ್ತ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಜಾಗೋ ಮೈಸೂರು ಅಧ್ಯಕ್ಷ ಚೇತನ್ ಮಂಜುನಾಥ್‌ ಪತ್ರ ಬರೆದವರು.

ಟಿಎಂಸಿ ಕಾರ್ಯಕರ್ತರು, ಮೂಲಭೂತವಾದಿಗಳಿಂದ ಹಿಂಸೆಯಾಗುತ್ತಿದೆ. 30 ಬಿಜೆಪಿ ಕಾರ್ಯಕರ್ತರು, ಅಮಾಯಕ ಹಿಂದೂಗಳ ಹತ್ಯೆಯಾಗಿದೆ. 7 ಸಾವಿರ ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಸುಮಾರು 15,000 ಪ್ರಕರಣಗಳು ದಾಖಲಾಗಿವೆ. 1 ಲಕ್ಷಕ್ಕೂ ಹೆಚ್ಚು ಜನ ಜೀವಭಯದಿಂದ ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಎಲ್ಲಾ ಹಿಂಸೆಗಳಿಗೆ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಎಂದು ಬಿಜೆಪಿ ಕಾರ್ಯಕರ್ತ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ತನಿಖೆಯನ್ನು ಚುರುಕುಗೊಳಿಸಿ ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ. ನೊಂದ ಎಲ್ಲಾ ಸಂತ್ರಸ್ತರಿಗೆ ವಿಶೇಷ ಹಣಕಾಸು ಪ್ಯಾಕೇಜ್ ನೀಡಿ. ಎಲ್ಲರಿಗೂ ಸೂಕ್ತ ರಕ್ಷಣೆ ನೀಡಿ ಎಂದು ರಕ್ತದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೋದಿಗೆ ರಕ್ತದ ಪತ್ರ

ಮೋದಿಗೆ ರಕ್ತದ ಪತ್ರ

 

ಇದನ್ನೂ ಓದಿ: ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳು.. ಮಾಜಿ ಸಚಿವ, ಹಿಂದೂಪರ ಸಂಘಟನೆಗಳಿಂದ ಆಕ್ರೋಶ

Published On - 9:50 am, Thu, 8 July 21