ಆಸ್ಪತ್ರೆ ಕಿಡಕಿಯಿಂದ ಜಿಗಿದು ಕಲಬುರಗಿಯ ವಿಚಾರಣಾಧೀನ ಕೈದಿ ಪರಾರಿ

| Updated By: sandhya thejappa

Updated on: Jul 14, 2021 | 9:53 AM

ಎರಡು ತಿಂಗಳ ಹಿಂದೆ ಜೈಲು ಸೇರಿದ್ದ ಸಿದ್ದಪ್ಪನನ್ನು ಆಸ್ಪತ್ರೆ ಜೈಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿತ್ತು. ಅಸಹಜ ವರ್ತನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಿದ್ದಪ್ಪ ಆಸ್ಪತ್ರೆಯಿಂದ ಓಡಿ ಹೋಗಿದ್ದಾನೆ.

ಆಸ್ಪತ್ರೆ ಕಿಡಕಿಯಿಂದ ಜಿಗಿದು ಕಲಬುರಗಿಯ ವಿಚಾರಣಾಧೀನ ಕೈದಿ ಪರಾರಿ
ವಿಚಾರಣಾಧೀನ ಕೈದಿ
Follow us on

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಜೈಲ್ ವಾರ್ಡ್​ನಿಂದ ಜಿಗಿದು ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ. ಸಿದ್ದಪ್ಪ ಅಲ್ಲೂರ್(22) ಎಂಬಾತ ಪರಾರಿಯಾಗಿರುವ ವಿಚಾರಣಾಧೀನ ಕೈದಿ. ಸಿದ್ದಪ್ಪ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿ. ಎರಡು ತಿಂಗಳ ಹಿಂದಷ್ಟೇ ಸ್ನೇಹಿತನನ್ನು ಕೊಲೆ ಮಾಡಿ ಜೈಲು ಸೇರಿದ್ದ. ನಾಲ್ಕು ದಿನದ ಹಿಂದೆ ಸಿದ್ದಪ್ಪನನ್ನು ಜಿಮ್ಸ್ ಆಸ್ಪತ್ರೆ ಜೈಲು ವಾರ್ಡ್ ಗೆ ಕಳುಹಿಸಲಾಗಿತ್ತು. ಆದರೆ ಇಂದು (ಜುಲೈ 14) ಆಸ್ಪತ್ರೆ ಕಿಡಕಿಯಿಂದ ಜಿಗಿದು ಪರಾರಿಯಾಗಿದ್ದಾನೆ.

ಎರಡು ತಿಂಗಳ ಹಿಂದೆ ಜೈಲು ಸೇರಿದ್ದ ಸಿದ್ದಪ್ಪನನ್ನು ಆಸ್ಪತ್ರೆ ಜೈಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿತ್ತು. ಅಸಹಜ ವರ್ತನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಿದ್ದಪ್ಪ ಆಸ್ಪತ್ರೆಯಿಂದ ಓಡಿ ಹೋಗಿದ್ದಾನೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ

ನಾನಾ ಅಪರಾಧಗಳನ್ನು ಮಾಡಿ ಜೈಲು ಸೇರಿದ್ದ ಅರುಣಾಚಲ ಪ್ರದೇಶದ 7 ಕೈದಿಗಳು ಕಾರಾಗ್ರಹದಲ್ಲೂ ತಮ್ಮ ಅಸಲಿ ಬುದ್ಧಿಯನ್ನು ತೋರಿಸಿದ್ದಾರೆ. ಜೈಲಿಗೆ ಕಾವಲಿದ್ದ ಸೆಕ್ಯುರಿಟಿ ಗಾರ್ಡ್​ಗಳ ಮುಖಕ್ಕೆ ಖಾರದ ಪುಡಿ, ಮೆಣಸಿನ ಕಾಳಿನ ಪುಡಿಯನ್ನು ಎರಚಿ ಜೈಲಿನಿಂದ ಪರಾರಿಯಾಗಿದ್ದಾರೆ. ಈ ಮೂಲಕ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಆ 7 ಕೈದಿಗಳಿಗಾಗಿ ಪೊಲೀಸರು ಮತ್ತೆ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ

ಮೈಸೂರು: 70 ಲಕ್ಷ ವಂಚಿಸಿ ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ

Crime News: ಜೈಲು ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ; ಪೊಲೀಸರು ಕಂಗಾಲು!

(Prisoner escaped from GIMS Hospital Jail Ward in Kalaburagi)

Published On - 9:48 am, Wed, 14 July 21