AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: 70 ಲಕ್ಷ ವಂಚಿಸಿ ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ

ಹೋಮ, ವಿಶೇಷ ಪೂಜೆ ಮಾಡುತ್ತಾ ತನ್ನ ಅಕ್ಕಪಕ್ಕದಲ್ಲಿರುವ ಮಹಿಳೆಯರ ವಿಶ್ವಾಸ ಗಳಿಸಿದ್ದಳು. ಅಲ್ಲದೇ ದೇವರ ಹೆಸರಿನಲ್ಲಿ ಬಾಗಿನ, ಅರಿಶಿನ ಕುಂಕುಮ, ಗಿಫ್ಟ್​ಗಳನ್ನ ಕೊಡುತ್ತಿದ್ದಳು. ಒಡವೆಗಳನ್ನ ಗಿರವಿ ಇಡಿಸಿ ಹಣ ಪಡೆದಿದ್ದ ಹೇಮಾಲತಾ, ಕೆಲವರಿಗೆ ಮೈಕ್ರೋ ಫೈನಾನ್ಸ್​ಗಳಲ್ಲಿ ಸಾಲ ಕೊಡಿಸಿ ಗುಳುಂ ಮಾಡಿದ್ದಾಳೆ.

ಮೈಸೂರು: 70 ಲಕ್ಷ ವಂಚಿಸಿ ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ
ವಂಚಿಸಿ ಪರಾರಿಯಾಗಿದ್ದ ಹೇಮಾಲತಾ
TV9 Web
| Edited By: sandhya thejappa|

Updated on: Jul 14, 2021 | 8:56 AM

Share

ಮೈಸೂರು: ಮಹಿಳೆಯರಿಗೆ ವಂಚಿಸಿ ಪರಾರಿಯಾಗಿದ್ದ ಹೇಮಾಲತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದಯಗಿರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹೇಮಾಲತಾ ಪೂಜೆ ಮತ್ತು ಬಾಗಿನದ ಹೆಸರಿನಲ್ಲಿ ಮಹಿಳೆಯರ ವಿಶ್ವಾಸ ಗಳಿಸಿ ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದ್ದು, ಸುಮಾರು 70 ಲಕ್ಷ ರೂ. ಹಣವನ್ನು ವಂಚಿಸಿ ಪರಾರಿಯಾಗಿದ್ದಳು. 5 ವರ್ಷಗಳ ಹಿಂದೆ ಸಾತಗಳ್ಳಿಯ ಸಾಯಿಬಾಬಾ ದೇಗುಲದ ಬಳಿ ಬಾಡಿಗೆ ಮನೆಯಲ್ಲಿ ಈಕೆ ವಾಸವಿದ್ದಳು.

ಹೋಮ, ವಿಶೇಷ ಪೂಜೆ ಮಾಡುತ್ತಾ ತನ್ನ ಅಕ್ಕಪಕ್ಕದಲ್ಲಿರುವ ಮಹಿಳೆಯರ ವಿಶ್ವಾಸ ಗಳಿಸಿದ್ದಳು. ಅಲ್ಲದೇ ದೇವರ ಹೆಸರಿನಲ್ಲಿ ಬಾಗಿನ, ಅರಿಶಿನ ಕುಂಕುಮ, ಗಿಫ್ಟ್​ಗಳನ್ನ ಕೊಡುತ್ತಿದ್ದಳು. ಒಡವೆಗಳನ್ನ ಗಿರವಿ ಇಡಿಸಿ ಹಣ ಪಡೆದಿದ್ದ ಹೇಮಾಲತಾ, ಕೆಲವರಿಗೆ ಮೈಕ್ರೋ ಫೈನಾನ್ಸ್​ಗಳಲ್ಲಿ ಸಾಲ ಕೊಡಿಸಿ ಗುಳುಂ ಮಾಡಿದ್ದಾಳೆ. 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಈಕೆಯ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ ಹಳ್ಳಿಗಾಡಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ ವ್ಯಕ್ತಿಗೆ ಗದಗದ ಮಸಾರಿ ಪ್ರದೇಶದಲ್ಲಿ ಜನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜುಲೈ 10ಕ್ಕೆ ನಡೆದಿದೆ. ಕಾರ್ಮಿಕ ಕಾರ್ಡ್ ಮಾಡಿಸಿದರೆ ವಿಶ್ವ ಸಂಸ್ಥೆಯಿಂದ ಹಣ ಬರುತ್ತೆ. ಅಂತಹ ಕಾರ್ಮಿಕ ಕಾರ್ಡ್ ತಾನು ನೀಡೋದಾಗಿ ಮಹಿಳೆಯರಿಗೆ ಆ ವ್ಯಕ್ತಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕುಮಾರ್ ಎಂಬ ವ್ಯಕ್ತಿಗೆ ಸ್ಥಳೀಯರು ಸೇರಿಕೊಂಡು ಬಾರಿಸಿದ್ದಾರೆ. ಚಿತ್ರದುರ್ಗ ಮೂಲದ ಡೆವಲೆಪ್ ಲೈವ್ಲಿವುಡ್ ಫರ್ಮ್ ಸಂಸ್ಥೆಯ ಮೂಲಕ ಸ್ವರದ ಎಂಟರ್ಪ್ರೈಸ್ ರಚಿಸಿಕೊಂಡು ಹಳ್ಳಿಯ ಮಹಿಳೆಯರಿಗೆ ಕುಮಾರ್ ವಂಚಿಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ

ರಾಜ್ಯ ಕಾಂಗ್ರೆಸ್ ಯುವ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿ 17 ಜನರ ವಿರುದ್ಧ ಎಫ್‌ಐಆರ್

ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನನ್ನೇ ಕೊಂದ ಸ್ನೇಹಿತರು, ಐವರು ಆರೋಪಿಗಳು ಅರೆಸ್ಟ್

(woman was arrested by police for cheating on women in mysuru)

Follow Us
Web contact
Web contact

TV9 Kannada

Read More