AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನನ್ನೇ ಕೊಂದ ಸ್ನೇಹಿತರು, ಐವರು ಆರೋಪಿಗಳು ಅರೆಸ್ಟ್

ಸ್ನೇಹಿತ ಸಾಲ ಪಡೆಯಲು ಆತ ಶ್ಯೂರಿಟಿ ನೀಡಿದ್ದ. ಸ್ನೇಹಿತ ಸಾಲ ತೀರಿಸಲು ಆಗದೇ ಇದ್ದಾಗ, ತನ್ನ ತಾಯಿಯ ಹೆಸರಲ್ಲಿದ್ದ ಜಮೀನು ಪತ್ರಗಳನ್ನ ಅಡ ಇಟ್ಟಿದ್ದ. ಇಂತಾ ಜಮೀನು ಲಪಟಾಯಿಸಲು ಪ್ಲ್ಯಾನ್ ಮಾಡಿದ್ದ ಫಟಿಂಗರು ಎಸಗಿದ್ದು ಮಾತ್ರ ಯಾರೂ ಕ್ಷಮಿಸಲಾಗದ ಕೃತ್ಯವನ್ನ.

ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನನ್ನೇ ಕೊಂದ ಸ್ನೇಹಿತರು, ಐವರು ಆರೋಪಿಗಳು ಅರೆಸ್ಟ್
ಮನೆಯವರ ಆಕ್ರಂದನ
TV9 Web
| Edited By: |

Updated on: Jul 14, 2021 | 7:26 AM

Share

ಹುಬ್ಬಳ್ಳಿ: ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನ ಮೇಲೆಯೇ ಅಟ್ಯಾಕ್ ಮಾಡಿ ಕಿರಾತಕರು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಮುನ್ನ ಬೇಫಾರಿ, ಧಲಬಂಜನ್ ಎಂಬ ಗ್ಯಾಂಗ್ಈ ಕೃತ್ಯ ಎಸಗಿದೆ. ಜುಲೈ 8 ರಂದು ಹುಬ್ಬಳ್ಳಿಯ ಬೆಂಗೇರಿ ಬಳಿ ಸಪೋಟಾ ತೋಟದಲ್ಲಿ ವೀರೇಶ್ ಹೆಗಡಾಳ ಅನ್ನೋರ ಮೇಲೆ ಈ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ತಲ್ವಾರ್ ಹಾಗೂ ರಾಡ್ಗಳಿಂದ ವೀರೇಶ್ ಮೇಲೆ ಮನಬಂದಂತೆ ದಾಳಿ ಮಾಡಿದ್ರು. ಗಾಯಗೊಂಡಿದ್ದ ವೀರೇಶ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ವೀರೇಶ್, ತನ್ನ ಸ್ನೇಹಿತ ಜಾವಿದ್ ಅನ್ನೋರ ಸಾಲಕ್ಕೆ ಶ್ಯೂರಿಟಿ ನೀಡಿದ್ರಂತೆ. ಮುನ್ನಾ ಬೇಫಾರಿ, ಧಲಬಂಜನ್ ಬಳಿ ಸಾಲ ಪಡೆದಿದ್ರಂತೆ. ಸಾಲ ವಾಪಸ್ ಕೊಡಲು ಮುನ್ನಾ ಬೇಫಾರಿ, ರೌಡಿ ಶೀಟರ್ ಅಲ್ತಾಫ್ ಬೇಫಾರಿ ಜೀವ ಬೆದರಿಕೆ ಹಾಕಿದ್ರಂತೆ. ಸಾಲ ತೀರಿಸಲು ಮುಂದಾಗಿದ್ದ ವೀರೇಶ್, ತನ್ನ ತಾಯಿ ಹೆಸರಲ್ಲಿದ್ದ ಒಂದೂವರೆ ಎಕರೆ ಜಮೀನು ಅಡ ಇಟ್ಟಿದ್ರಂತೆ. ಈ ಜಮೀನಿನ ಮೇಲೆ ಕಣ್ಣು ಹಾಕಿದ್ದ ಈ ಗ್ಯಾಂಗ್, ವೀರೇಶ್ ಮೇಲೆ ದಾಳಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸರು ಐವರನ್ನ ಬಂಧಿಸಿದ್ದಾರೆ.

ಪ್ರಕರಣದ ಮಾಸ್ಟರ್ ಮೈಂಡ್ ಆಗಿರೋ ಹುಬ್ಬಳ್ಳಿಯ ರೌಡಿಶೀಟರ್ ಅಲ್ತಾಫ್ ಬೇಫಾರಿ ಸದ್ಯಕ್ಕೆ ಎಸ್ಕೇಪ್ ಆಗಿದ್ದಾನೆ. ಅಲ್ತಾಫ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಂಗೈ ಅಗಲ ಜಾಗಕ್ಕಾಗಿ ಸ್ನೇಹಿತನನ್ನೇ ಕೊಂದ ಗ್ಯಾಂಗ್ ಅಂದರ್ ಆಗಿದೆ. ಕಂಡವರ ಜಮೀನಿಗೆ ಬೇಲಿ ಹಾಕೋ ಅಲ್ತಾಫ್ ಮತ್ತೆ ಆ್ಯಕ್ಟಿವ್ ಆಗಿದ್ದು, ಹುಬ್ಬಳ್ಳಿ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಪೊಲೀಸರು ಅಲ್ತಾಫ್ ಆಟಾಟೋಪಕ್ಕೆ ಬ್ರೇಕ್ ಹಾಕಿದ್ರೆ ಜನ ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.

ಇದನ್ನೂ ಓದಿ: ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ