ಬೆಂಗಳೂರು ನಾಗರಿಕರೇ, ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಈ ಅವಕಾಶ ಬಳಸಿಕೊಳ್ಳಿ
ಸಾರ್ವಜನಿಕರು ತಮ್ಮ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ ಸಹಾಯವಾಣಿ 1916 ಹಾಗೂ ವಾಟ್ಸ್ಆ್ಯಪ್ ಸಂಖ್ಯೆ 8762228888 ಗೆ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ಬೆಂಗಳೂರು: ಬೆಂಗಳೂರು ಜಲಮಂಡಳಿಯು ಜುಲೈ 1, ಗುರುವಾರದಂದು (ಆಗ್ನೇಯ-6), (ಪೂರ್ವ-2)-2, (ಪೂರ್ವ ವಿಲೇಜ್)-2, (ದಕ್ಷಿಣ ವಿಲೇಜ್)-1, (ಪಶ್ಚಿಮ-3), (ನೈರುತ್ಯ-3), (ಆಗ್ನೇಯ-3), (ವಾಯುವ್ಯ-6), (ಕೇಂದ್ರ-3) (ವಾಯುವ್ಯ-2), (ಉತ್ತರ-3) ಮತ್ತು (ಈಶಾನ್ಯ-2) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‍ನ್ನು ಬೆಳಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಸಲಿದೆ. ಅದಾಲತ್ ನಡೆಯುವ ಸ್ಥಳಗಳ ವಿವರ ಈ ಕೆಳಗಿನಂತಿದ್ದು ಅಗತ್ಯವುಳ್ಳ ನಾಗರಿಕರು ಈ ಸೇವೆಯ ಪ್ರಯೋಜನ ಬಳಸಿಕೊಳ್ಳಬಹುದಾಗಿದೆ.
ಸಾರ್ವಜನಿಕರು ತಮ್ಮ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ ಸಹಾಯವಾಣಿ 1916 ಹಾಗೂ ವಾಟ್ಸ್ಆ್ಯಪ್ ಸಂಖ್ಯೆ 8762228888 ಗೆ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಹಾಗೂ ಕೊವಿಡ್ ಸೋಂಕಕು ನಿರ್ಬಂಧ ಮರು ತೆರವು ಮಾರ್ಗಸೂಚಿಯ ಅನ್ವಯ ಸಭೆಗೆ ಹಾಜರಾಗಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಉಪವಿಭಾಗದ ಹೆಸರು, ವಿಳಾಸ ಮತ್ತು ಸೇವಾ ಠಾಣೆಗಳ ದೂರವಾಣಿ ಸಂಖ್ಯೆ (ಆಗ್ನೇಯ-6) 9ನೇ ಮುಖ್ಯರಸ್ತೆ, ಬಿ.ಟಿ.ಎಂ. 2ನೇ ಹಂತ, ಬೆಂಗಳೂರು-76 ಬಿ.ಟಿ.ಎಂ.ಲೇಔಟ್-1,2 ಮತ್ತು 3 9845444042
(ಪೂರ್ವ-2)-2 ಬಿ-31, ಐಟಿಐ ಕಾಲೋನಿ, ದೂರವಾಣಿ ನಗರ, ಬೆಂಗಳೂರು-16 ಕೆ.ಆರ್.ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ 25663688
(ಪೂರ್ವ ವಿಲೇಜ್)-2 ಕಾಡುಗೋಡಿ ಎಸ್.ಟಿ.ಪಿ ಆವರಣ, ವೈಟ್ ಫೀಲ್ಡ್ ರೈಲ್ವೆ ನಿಲ್ದಾಣ ಹತ್ತಿರ, ಸೋಮೇನಹಳ್ಳಿ(ಪೋ), ಕಾಡುಗೋಡಿ ಪೂರ್ವ ವಿಲೇಜ್-2-1 ಮತ್ತು 2-2, ಕಾಡುಗೋಡಿ ವರ್ತೂರು 9741969945
(ದಕ್ಷಿಣ ವಿಲೇಜ್)-1 21ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ಅಂಜನಾಪುರ ಅಂಜನಾಪುರ,ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ 9686566941
ಪಶ್ಚಿಮ-3 ವಿಜಯನಗರ ವಾಟರ್ ಟ್ಯಾಂಕ್,ವಿಜಯನಗರ 8ನೇ ಮುಖ್ಯ ರಸ್ತೆ, ಎಂ.ಸಿ.ಲೇಔಟ್, ಬೆಂಗಳೂರು-40 ಚಂದ್ರ ಲೇಔಟ್-1&2, ವಿಜಯನಗರ ಓ.ಹೆಚ್.ಟಿ, ಮೂಡಲಪಾಳ್ಯ 9980421461
ನೈರುತ್ಯ-3 #3, ಎಂ.ಎನ್.ಕೆ ಪಾರ್ಕ್ ಬಸವನಗುಡಿ,ಬೆಂಗಳೂರು-04 ಎಂ.ಎನ್.ಕೆ.ಪಾರ್ಕ್,ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರಬ್ಲಾಕ್, ಗಿರಿನಗರ, 22945155
(ಆಗ್ನೇಯ-3) ಸ್ವಾಮಿ ವಿವೇಕಾನಂದ ರಸ್ತೆ, ಲಿಡೋ ಮಾಲ್ ಎದುರು, ಹಲಸೂರು, ಬೆಂಗಳೂರು-08 ಹಲಸೂರು, ದೊಮ್ಮಲೂರು, ಮಾರತ್ ಹಳ್ಳಿ 9845444049
(ವಾಯುವ್ಯ-6) ಪೈಪ್ ಲೈನ್ ರಸ್ತೆ, ಸುಂಕದ ಕಟ್ಟೆ,ಬೆಂಗಳೂರು-91 ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ. 7259304007
(ಕೇಂದ್ರ-3) ನೇತಾಜಿ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು-05 ಫ್ರೇಜರ್ ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್ 1 ಮತ್ತು 2 9845444053
(ವಾಯುವ್ಯ-2) 5ನೇ ಬ್ಲಾಕ್, ನಾಗರಭಾವಿ, ಹೊರವರ್ತುಲ ರಸ್ತೆ. ಬೆಂಗಳೂರು-72 ಕೇತಮಾರನಹಳ್ಳಿ, ರಾಜಾಜಿನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ-1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ. 9845444073
(ಉತ್ತರ-3) 3ನೇ ಬ್ಲಾಕ್, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು ಸಿಂಗಾಪುರ, ವಿದ್ಯಾರಣ್ಯಪುರ, ಸಹಕಾರನಗರ 8618366506
(ಈಶಾನ್ಯ-2) #55, 8ನೇ ಮತ್ತು 9ನೇ ಅಡ್ಡ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಬೆಂಗಳೂರು-20 ಕೆಂಪೇಗೌಡ ಟವರ್, ಕುಮಾರಪಾರ್ಕ್, ಜಯಮಹಲ್ 22945135
ಇದನ್ನೂ ಓದಿ:
Amazon Apple Day Sale: ಅಮೆಜಾನ್ನಿಂದ ಜುಲೈ 17ರ ತನಕ ಆಪಲ್ ಡೇ ಸೇಲ್; ಏನೇನು ಆಫರ್ಗಳಿವೆ ಎಂಬ ಮಾಹಿತಿ ಇಲ್ಲಿದೆ
(Citizens of Bangaluru use this opportunity if you have complaints regarding water bill water and sewer delays)