Bengaluru- Tirupati: ಬೆಂಗಳೂರಿನಿಂದ ತಿರುಪತಿಗೆ ಪ್ಯಾಕೇಜ್ ಟೂರ್ ಹೋಗಲು ಕೆಎಸ್ಆರ್ಟಿಸಿ ಬಸ್ ಸೇವೆಯ ಮಾಹಿತಿ ಇಲ್ಲಿದೆ
KSRTC Bus Service: ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ನ ಪ್ರಯಾಣ ದರ ವಯಸ್ಕರಿಗೆ ಭಾನುವಾರದಿಂದ ಗುರುವಾರದವರೆಗೆ ಹೊರಡುವ ಸಾರಿಗೆಗಳಿಗೆ ರೂ. 2200/- + ಜಿಎಸ್‍ಟಿ, ಮಕ್ಕಳಿಗೆ (6 ರಿಂದ 12 ವರ್ಷ) ರೂ. 1800/- + ಜಿಎಸ್‍ಟಿ, ವಾರಾಂತ್ಯ ದಿನ (ಶುಕ್ರವಾರ ಹಾಗೂ ಶನಿವಾರ ಹೊರಡುವ ಸಾರಿಗೆಗಳಿಗೆ) ಪ್ರಯಾಣ ದರ ವಯಸ್ಕರಿಗೆ ರೂ. 2600/- + ಜಿಎಸ್‍ಟಿ, ಮಕ್ಕಳಿಗೆ (6 ರಿಂದ 12 ವರ್ಷ) ರೂ.2000/- + ಜಿಎಸ್‍ಟಿಯನ್ನು ನಿಗಧಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಿರುಪತಿ ವಯಾ ಶಾಂತಿನಗರ, ಜಯನಗರ 4 ಬ್ಲಾಕ್, ನಾಗಸಂದ್ರ, ಎನ್.ಆರ್.ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್‍ಹಳ್ಳಿ, ಐ.ಟಿ.ಐ ಗೇಟ್, ಕೆ.ಆರ್.ಪುರಂ, ಹೊಸಕೋಟೆ ಮಾರ್ಗವಾಗಿ ಮತ್ತು ಬೆಂಗಳೂರು-ತಿರುಪತಿ ವಯಾ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರಂ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಐ.ಟಿ.ಐ ಗೇಟ್, ಕೆ.ಆರ್.ಪುರಂ, ಹೊಸಕೋಟೆ ಮಾರ್ಗವಾಗಿ ಐರಾವತ ಕ್ಲಬ್‍ಕ್ಲಾಸ್ (ಮಲ್ಟಿ ಆಕ್ಸಲ್) ವಾಹನದೊಂದಿಗೆ ಪ್ಯಾಕೇಜ್ ಟೂರ್ನ ದಿನಾಂಕ 16/07/2021 ರಿಂದ ಪುನರಾರಂಭಿಸಿ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ನ ಪ್ರಯಾಣ ದರ ವಯಸ್ಕರಿಗೆ ಭಾನುವಾರದಿಂದ ಗುರುವಾರದವರೆಗೆ ಹೊರಡುವ ಸಾರಿಗೆಗಳಿಗೆ ರೂ. 2200/- + ಜಿಎಸ್‍ಟಿ, ಮಕ್ಕಳಿಗೆ (6 ರಿಂದ 12 ವರ್ಷ) ರೂ. 1800/- + ಜಿಎಸ್‍ಟಿ, ವಾರಾಂತ್ಯ ದಿನ (ಶುಕ್ರವಾರ ಹಾಗೂ ಶನಿವಾರ ಹೊರಡುವ ಸಾರಿಗೆಗಳಿಗೆ) ಪ್ರಯಾಣ ದರ ವಯಸ್ಕರಿಗೆ ರೂ. 2600/- + ಜಿಎಸ್‍ಟಿ, ಮಕ್ಕಳಿಗೆ (6 ರಿಂದ 12 ವರ್ಷ) ರೂ.2000/- + ಜಿಎಸ್‍ಟಿಯನ್ನು ನಿಗಧಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಜುಲೈ 19 ಹಾಗೂ 22ರಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊರೊನಾ ಕಾರಣದಿಂದ ಕರ್ನಾಟಕದಲ್ಲಿ ವಿಳಂಬವಾಗಿರುವ ಎಸ್ಎಸ್ಎಲ್ಸಿ ಪರೀಕ್ಷೆ (SSLC Exams 2021) ಜುಲೈ 19 ಹಾಗೂ 22ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕೆಎಸ್ಆರ್ಟಿಸಿ (KSRTC) ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಪರೀಕ್ಷೆಯ ದಿನಗಳಂದು ಅಂದರೆ ಜುಲೈ 19 ಹಾಗೂ ಜುಲೈ 22ರಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು (Free Service) ಅವಕಾಶ ಮಾಡಿಕೊಡುವುದಾಗಿ ತಿಳಿಸಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಉಚಿತ ಪ್ರಯಾಣ ಮಾಡಬಹುದಾಗಿದ್ದು, ಪರೀಕ್ಷಾ ಪ್ರಮಾಣ ಪತ್ರ ತೋರಿಸುವ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ರಾಜ್ಯಾದ್ಯಂತ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದ್ದು, ಪರೀಕ್ಷಾ ಕೇಂದ್ರದ ತನಕ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಈ ವಿಚಾರದ ಕುರಿತು ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಜುಲೈ 19 ಹಾಗೂ ಜುಲೈ 22ರಂದು ತಾವು ವಾಸಿಸುವ ಪ್ರದೇಶದಿಂದ ಪರೀಕ್ಷಾ ಕೇಂದ್ರದ ತನಕ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣ ಬೆಳೆಸಬಹುದಾಗಿದೆ. ಪರೀಕ್ಷಾ ಪ್ರಮಾಣ ಪತ್ರ ತೋರಿಸಿದರೆ ಸಾಕು ಯಾವುದೇ ರೀತಿಯ ಶುಲ್ಕ ತೆರಬೇಕಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸಾಮಾನ್ಯ ಹಾಗೂ ವೇಗಧೂತ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪರೀಕ್ಷೆ ಮುಗಿಸಿ ವಾಪಾಸು ಮನೆಗೆ ಬರುವಾಗಲೂ ಇದು ಅನ್ವಯವಾಗಲಿದೆ. ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹಾಗೂ ಪರೀಕ್ಷಾ ಕೇಂದ್ರದಿಂದ ಮರಳಿ ಮನೆಗೆ ಬರುವಾಗ ಪರೀಕ್ಷಾ ಪ್ರಮಾಣ ಪತ್ರ ತೋರಿಸಿ ಉಚಿತ ಪ್ರಯಾಣ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲೂ ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ:
ರಿಲೀಸ್ಗೂ ಮುನ್ನ ರೋಚಕತೆ ಸೃಷ್ಟಿಸಿದ Nokia C30 ಸ್ಮಾರ್ಟ್ಫೋನ್: ಪ್ರಮುಖ ಮಾಹಿತಿ ಸೋರಿಕೆ
(Bengaluru Tirupati Here is information on the package tour bus)