ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.

ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ
ಬಂಧಿತ ಆರೋಪಿಗಳು
Follow us
TV9 Web
| Updated By: sandhya thejappa

Updated on: Jul 12, 2021 | 12:25 PM

ಬೆಂಗಳೂರು: ಜ್ಞಾನಜ್ಯೋತಿ ನಗರದಲ್ಲಿ ನಡೆದ ಮಹಿಳೆ ಹತ್ಯೆ ಕೇಸ್ ಸಂಬಂಧ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ರಾಜು, ಇಂದಿರಮ್ಮ ಎಂಬುವವರು ಬಂಧನಕ್ಕೆ ಒಳಗಾದವರು. ಜುಲೈ 10 ರಂದು ಕತ್ತು ಸೀಳಿ ರಂಜಿತಾ ಎಂಬ ಮಹಿಳೆಯನ್ನು ಕೊಲೆಗೈದಿದ್ದರು. ಬಳಿಕ ರಂಜಿತಾ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು. ಈ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದೇ ಕಟ್ಟಡದ ವಾಸಿಗಳಾಗಿದ್ದರಿಂದ ರಂಜಿತಾ ಹಾಗೂ ಇಂದಿರಾಮ್ಮಗೆ ಪರಿಚಯವಿತ್ತು. ಒಮ್ಮೆ ರಂಜಿತಾಳ ಫೋಟೋ ನೊಡಿದ ವೇಳೆ ಕೊರಳಲಿದ್ದ ಸರ ಕಣ್ಣು ಕುಕ್ಕಿತ್ತು. ನಲವತ್ತು ಗ್ರಾಂ ಚಿನ್ನದ ಸರಕ್ಕಾಗಿ ಇಂದಿರಮ್ಮ ಹೊಂಚು ಹಾಕಿದ್ದಳು. ಮೊದಲಿಗೆ ಸರ ಪಡೆದು ನಂತರ ಕೊಡದೆ ಮೊಸ ಮಾಡುವ ಉದ್ದೇಶ ಇಂದಿರಮ್ಮಗಿತ್ತು. ಆದರೆ ರಂಜಿತಾ ಚಿನ್ನದ ಸರ ಕೊಡಲು ನಿರಾಕರಿಸಿದ್ದಳು.

ಚಿನ್ನದ ಸರಕ್ಕಾಗಿ ನಡೆಯಿತು ಕೊಲೆ ಇಂದಿರಮ್ಮಗೆ ಹಣದ ಸಮಸ್ಯೆ ಇತ್ತು. ಆಕೆಯ ಸ್ನೇಹಿತ ರಾಜಶೇಖರ್​ಗೂ ಕೂಡಾ ಸಾಲದ ಸಮಸ್ಯೆಯಿತ್ತು. ಇವರಿಬ್ಬರು ಮದುವೆಯಾಗದಿದ್ದರೂ ಜೊತೆಯಲ್ಲಿದ್ದರು. ಜುಲೈ 10ರಂದು ಮನೆಗೆ ಮಾತನಾಡಿಸುವ ನೆಪದಲ್ಲಿ ಇಂದಿರಮ್ಮ ಬಂದಳು. ನಂತರ ರಾಜಶೇಖರ್ಗೆ ಕರೆ ಮಾಡಿ ಆತನನ್ನು ಕರೆಸಿಕೊಂಡಿದ್ದಳು. ನಂತರ ಟಿವಿ ವಾಲ್ಯೂಮ್ ಹೆಚ್ಚು ಮಾಡಿ ರಂಜಿತಾಳನ್ನು ಹತ್ಯೆ ಮಾಡಿದ್ದಾರೆ.

ಸರ ರಂಜಿತಾಳದಲ್ಲ ಅಸಲಿಗೆ ಫೋಟೋದಲ್ಲಿದ್ದ 40ಗ್ರಾಂನ ಸರ ಮೃತಳದ್ದಲ್ಲ. ಪರಿಚಯಸ್ಥರ ಬಳಿ ಕಾರ್ಯಕ್ರಮದ ಸಲುವಾಗಿ ಪಡೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಆ ಫೋಟೋ ನೋಡಿ ಇಂದಿರಮ್ಮ ಸರ ಕೇಳಿದ್ದಳು. ಆದರೆ ಸರದ ಅಸಲಿ ಕಥೆಯನ್ನು ರಂಜಿತಾ ಮರೆ ಮಾಚಿದ್ದಳು. ಹತ್ಯೆ ಬಳಿಕ 40 ಗ್ರಾಂ ಚಿನ್ನದ ಸರ ಸಿಗಲಿಲ್ಲ. ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ತಾಳಿ ಮಾತ್ರ ಸಿಕ್ಕಿತ್ತು. ಕಿವಿಯಲ್ಲಿದ್ದ ಓಲೆಗಾಗಿ ಕಿವಿಗಳನ್ನು ಕೊಯ್ದಿದ್ದರು. ಆದರೆ ಅದು ರೊಲ್ಡ್ ಗೊಲ್ಡ್ ಎಂದು ಗೊತ್ತಾಗಿ ಆರೋಪಿಗಳು ಅಲ್ಲೇ ಬಿಸಾಡಿದ್ದರು.

ಇದನ್ನೂ ಓದಿ

ಚನ್ನಪಟ್ಟಣ: ತಾಲೂಕಿನಲ್ಲಿದೆ ಮಾದರಿ ಸರ್ಕಾರಿ ಆಸ್ಪತ್ರೆ, ಇದು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ! ಏನಿದರ ವಿಶೇಷ?

ಎಂ.ಕೆ.ಹುಬ್ಬಳ್ಳಿಯಲ್ಲಿ ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಭೀಕರ ಕೊಲೆ

(jnana jyothi nagar Police arrested two accused for murdering a woman for gold)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್