ರಾಜ್ಯ ಕಾಂಗ್ರೆಸ್ ಯುವ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿ 17 ಜನರ ವಿರುದ್ಧ ಎಫ್‌ಐಆರ್

ಜುಲೈ 12ರಂದು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿತ್ತು. ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ ಯೂತ್ ಕಾಂಗ್ರೆಸ್ ಧರಣಿ ನಡೆಸಿತ್ತು.

ರಾಜ್ಯ ಕಾಂಗ್ರೆಸ್ ಯುವ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿ 17 ಜನರ ವಿರುದ್ಧ ಎಫ್‌ಐಆರ್
ಎಮ್.ಎಸ್. ರಕ್ಷಾ ರಾಮಯ್ಯ
Follow us
TV9 Web
| Updated By: ಆಯೇಷಾ ಬಾನು

Updated on: Jul 14, 2021 | 8:11 AM

ಬೆಂಗಳೂರು: ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಕ್ಷಾ ರಾಮಯ್ಯ ಸೇರಿ 17 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ IPC 188, NDMA ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಜುಲೈ 12ರಂದು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿತ್ತು. ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ ಯೂತ್ ಕಾಂಗ್ರೆಸ್ ಧರಣಿ ನಡೆಸಿತ್ತು. ಪ್ರತಿಭಟನೆಗೆ ಯಾರದೇ ಅನುಮತಿ ಪಡೆದಿರಲಿಲ್ಲ. ಹಾಗೂ ದೈಹಿಕ ಅಂತರ ಮರೆತು ಧರಣಿ ನಡೆಸಲಾಗಿತ್ತು. ಸರ್ಕಾರದ ಕೊವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹಾಗೂ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಧರಣಿ ನಡೆಸಿದ ರಕ್ಷಾ ರಾಮಯ್ಯ ಸೇರಿ 17 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಜ್ಯ ಕಾಂಗ್ರೆಸ್ ಯುವ ಅಧ್ಯಕ್ಷ ಸ್ಥಾನಕ್ಕೆ 2022ರ ಜನವರಿ 31ರಂದು ನಲಪಾಡ್ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದು, 2022 ಜನವರಿ31ರವರೆಗೆ ರಕ್ಷಾ ರಾಮಯ್ಯ ಕಾಂಗ್ರೆಸ್ ಯುವ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಕುರಿತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪಕ್ಷ ಯಾವುದೇ ಅಧಿಕಾರ, ಹೊಣೆ ನೀಡಿದರೂ ನಿರ್ವಹಿಸುವೆ. ಕಾಂಗ್ರೆಸ್‌ ಈಗ ಅಧಿಕಾರ ನೀಡಿದೆ, ಪಕ್ಷ ತಾಯಿ ಇದ್ದಂತೆ. ಯುವಕರನ್ನು ಕಾಂಗ್ರೆಸ್‌ಗೆ ಸೇರಿಸಲು ನನಗೆ ಹುದ್ದೆ ಬೇಕಿತ್ತು. ಅಧ್ಯಕ್ಷ ಸ್ಥಾನ ನೀಡುವ ತನಕ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ಪಕ್ಷ ಹೇಳಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುವೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಸೂಚನೆ ನೀಡಿದ್ದಾರೆ ಎಂದು ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಭೇಟಿ ಬಳಿಕ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ತಮಗೇ ಬೇಕು ಎಂದು ಚುನಾವಣೆಯಲ್ಲಿ ಜಯ ಸಾಧಿಸಿದ್ದ ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದರು. ಅಧ್ಯಕ್ಷ ಪಟ್ಟ ಬಿಟ್ಟು ಬೇರೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಇತಿಹಾಸದಲ್ಲಿ ಯಾರೂ ಪಡೆಯದಷ್ಟು ಮತ ಪಡೆದಿದ್ದೇನೆ. 64,203 ಮತ ಬಂದಿದೆ. ಮತದಾರರು ನನಗೆ ಅಧ್ಯಕ್ಷನಾಗಲೆಂದೇ ಮತ ಹಾಕಿದ್ದಾರೆ. ಕಾಂಗ್ರೆಸ್ ನನಗೆ ತಾಯಿ ಇದ್ದಂತೆ ನನಗೆ ಅನ್ಯಾಯವಾಗಲ್ಲ ಎಂದು ಭಾವಿಸಿದ್ದೇನೆ. ಅಧ್ಯಕ್ಷ ಸ್ಥಾನ ಸಿಗದಿದ್ದರೆ ಕಾರ್ಯಕರ್ತನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಲ್ಲ ಎಂದು ನಲಪಾಡ್ ಹ್ಯಾರಿಸ್ ತಿಳಿಸಿದ್ದರು.

ಇದನ್ನೂ ಓದಿ: ಬೆಂಗಳೂರು: ಕೊವಿಡ್ ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಶೇ 169ರಷ್ಟು ಏರಿಕೆ, ಜೂನ್ ಕೊನೇ ವಾರ ಸಂಗ್ರಹವಾಗಿದ್ದು ₹5.3ಲಕ್ಷ ದಂಡ