ಬೆಂಗಳೂರು: ಕೊವಿಡ್ ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಶೇ 169ರಷ್ಟು ಏರಿಕೆ, ಜೂನ್ ಕೊನೇ ವಾರ ಸಂಗ್ರಹವಾಗಿದ್ದು ₹5.3ಲಕ್ಷ ದಂಡ

Covid-19: ಮಂಗಳವಾರ ಅತಿ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪಶ್ಚಿಮ ವಲಯ 225, ಪೂರ್ವ ವಲಯ 222, ಮತ್ತು ದಕ್ಷಿಣ ವಲಯದಲ್ಲಿ 193 ಪ್ರಕರಣ ದಾಖಲಾಗಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಬಿಬಿಎಂಪಿ 4.9 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಿದೆ

ಬೆಂಗಳೂರು: ಕೊವಿಡ್ ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಶೇ 169ರಷ್ಟು ಏರಿಕೆ, ಜೂನ್ ಕೊನೇ ವಾರ ಸಂಗ್ರಹವಾಗಿದ್ದು ₹5.3ಲಕ್ಷ ದಂಡ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2021 | 8:41 PM

ಬೆಂಗಳೂರು: ಬೆಂಗಳೂರು ನಗರ ಅನ್ಲಾಕ್ ಆಗುವುದರೊಂದಿಗೆ, ಕೊವಿಡ್ -19 ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಹೆಚ್ಚುತ್ತಿದೆ. ಹಿಂದಿನ ಆರು ದಿನಗಳ ಅವಧಿಗೆ ಹೋಲಿಸಿದರೆ ಕಳೆದ ಆರು ದಿನಗಳಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಶೇಕಡಾ 169 ರಷ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಜುಲೈ 1 ಮತ್ತು 6ರ ನಡುವೆ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಲು ಅಥವಾ ಸಾಮಾಜಿಕ ಅಂತರ ಕಾಪಾಡಲು  ವಿಫಲರಾದ ಜನರ ವಿರುದ್ಧ 5,688 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ 14.2 ಲಕ್ಷ ದಂಡ ಸಂಗ್ರಹಿಸಲಾಗಿದೆ ಜೂನ್ 25-30ರ ಅವಧಿಯಲ್ಲಿ 2,109 ಪ್ರಕರಣಗಳು ದಾಖಲಾಗಿದ್ದು ಸುಮಾರು 5.3 ಲಕ್ಷ ರೂ ದಂಡ ಸಂಗ್ರಹವಾಗಿದೆ.

ಮಂಗಳವಾರ ಅತಿ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪಶ್ಚಿಮ ವಲಯ 225, ಪೂರ್ವ ವಲಯ 222, ಮತ್ತು ದಕ್ಷಿಣ ವಲಯದಲ್ಲಿ 193 ಪ್ರಕರಣ ದಾಖಲಾಗಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಬಿಬಿಎಂಪಿ   4.9 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಿದೆ ಮತ್ತು ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ 183 ಮಳಿಗೆಗಳಿಗೆ ಬೀಗಮುದ್ರೆ ಹಾಕಿದೆ. ಬೆಂಗಳೂರು ಪೊಲೀಸರು ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಇತ್ತೀಚೆಗೆ, 54 ಜಂಟಿ ತಂಡಗಳು, ಪ್ರತಿಯೊಂದು ತಂಡದಲ್ಲಿ ನಾಲ್ಕು ಮಾರ್ಷಲ್‌ಗಳು ಮತ್ತು ಒಬ್ಬ ಹೋಮ್ ಗಾರ್ಡ್ ಅಥವಾ ಪೊಲೀಸ್ ಕಾನ್‌ಸ್ಟೆಬಲ್ ಇರುತ್ತಾರೆ. ಅವರು ಬೆಳಿಗ್ಗೆ 6 ರಿಂದ 2 ಗಂಟೆ ಮತ್ತು ಮಧ್ಯಾಹ್ನ 2 ರಿಂದ 10 ಗಂಟೆಯವರೆಗೆ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ನಗರ ಪ್ರದೇಶಗಳನ್ನು 27 ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ, ಮತ್ತು ಪ್ರತಿ ವಿಭಾಗದಲ್ಲಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ.

ನಿಜವಾದ ಉಲ್ಲಂಘನೆಗಳ ಸಂಖ್ಯೆ ಇದಕ್ಕಿಂತ ಹೆಚ್ಚು ಎಂದು ಮಾರ್ಷಲ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಜಾರಿ ಕಡಿಮೆಯಾಗಿದೆ. ಆರ್ಥಿಕ ತೊಂದರೆಯನ್ನು ಪರಿಗಣಿಸಿ, ಕಡಿಮೆ ಆದಾಯದ ಪ್ರದೇಶಗಳಲ್ಲಿ ವಾಸಿಸುವವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಜಾಗೃತಿ ಮೂಡಿಸಲು ಮತ್ತು ಮಾಸ್ಕ್ ವಿತರಿಸಲು ಬಿಬಿಎಂಪಿ ಹೆಚ್ಚು ಗಮನ ಹರಿಸುತ್ತಿದೆ.

“ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು ಮತ್ತು ಕುಟುಂಬಗಳು ವಾಸಿಸುವ ಪ್ರದೇಶಗಳಲ್ಲಿ, ನಾವು ಮಾ ಮಾಸ್ಕ್ ವಿತರಿಸುತ್ತಿದ್ದೇವೆ ಮತ್ತು ದಂಡವನ್ನು ವಿಧಿಸುವ ಬದಲು ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇತರ ಪ್ರದೇಶಗಳಲ್ಲಿ ಮಾಸ್ಕ್ ನೀಡುವಾಗ ನಾವು ಜನರಿಗೆ ದಂಡ ವಿಧಿಸುತ್ತಿದ್ದೇವೆ ”ಎಂದು ಬಿಬಿಎಂಪಿಯ ಮುಖ್ಯ ಮಾರ್ಷಲ್ ಅಧಿಕಾರಿ ಕರ್ನಲ್ ರಾಜ್ಬೀರ್ ಸಿಂಗ್ ಹೇಳಿದರು. ನಾವು ಈ ಅಭಿಯಾನವನ್ನು ಇನ್ನೊಂದು ವಾರ ನಡೆಸುತ್ತೇವೆ. ನಂತರ, ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  Covid 19 Karnataka Update: ಕರ್ನಾಟಕದಲ್ಲಿ 3104 ಮಂದಿಗೆ ಕೊರೊನಾ ಸೋಂಕು, 92 ಸಾವು

(Violations of Covid-19 safety protocols BBMP marshals have recorded 169 per cent increase in cases)

Published On - 8:26 pm, Wed, 7 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ