AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡವರೇ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ; ಸಿಬಿಐ ತನಿಖೆಗೆ ಆಗ್ರಹಿಸಿ ಸುಮಲತಾ ಆಕ್ರೋಶ

ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಸುಮಲತಾ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಈ ದಿನದ ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ ಎಂದು ಸುಮಲತಾ ಹೇಳಿದ್ದಾರೆ.

ದೊಡ್ಡವರೇ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ; ಸಿಬಿಐ ತನಿಖೆಗೆ ಆಗ್ರಹಿಸಿ ಸುಮಲತಾ ಆಕ್ರೋಶ
ಸುಮಲತಾ ಅಂಬರೀಷ್
TV9 Web
| Updated By: ganapathi bhat|

Updated on: Jul 07, 2021 | 9:13 PM

Share

ಮಂಡ್ಯ: ದೊಡ್ಡ ದೊಡ್ಡವರೇ ಬೇನಾಮಿ ಹೆಸರಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ. ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ? ಇದೆಲ್ಲಾ ನೀವು ಮಾಡಬೇಕಾದ ಕೆಲಸವಲ್ಲವಾ ಎಂದು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಜನರಿಗೆ ಉಸಿರಾಟ ಸಮಸ್ಯೆ, ಹೃದ್ರೋಗ ಸಮಸ್ಯೆಯಾಗಿದೆ. ಹಂಗರಹಳ್ಳಿಯಲ್ಲಿ ದಿನಕ್ಕೆ 500 ಗಣಿ ಲಾರಿಗಳು ಹೋಗ್ತಿದೆ. ಇದರಿಂದ ಸರ್ಕಾರಕ್ಕೆ ರಾಜಧನವನ್ನೂ ಕಟ್ಟದೆ, ಯಾರ್ ಏನ್ ಮಾಡಿಕೊಳ್ತಾರೆಂಬ ಭಾವನೆ ಶಾಸಕರಿಗಿದೆ. ನೀವು ರಾಜಕೀಯದಲ್ಲೇ ಸಿನಿಮಾ ತೋರಿಸುತ್ತಿದ್ದೀರಾ. ಒಂದೇ ದಿನಕ್ಕೆ ಇಷ್ಟೊಂದು ಪ್ರಮಾಣದ ಅಕ್ರಮ ಕಂಡೆ. ಇದು ನಿಮಗೆ ಕಂಡಿಲ್ಲವೇ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರನ್ನೂ ಪ್ರಶ್ನೆ ಮಾಡಬೇಕಿದೆ. ನೀವು ಸರಿಯಾಗಿ ಕೆಲಸ ಮಾಡಿ ದಂಡ ವಿಧಿಸಿದ್ದೇ ಆದರೆ, ಸಾವಿರ ಕೋಟಿಯಷ್ಟು ದಂಡ ವಸೂಲಿ ಮಾಡಬಹುದು. ಇದೆಲ್ಲಾ ನಿಮಗೆ ಕಾಣ್ತಿಲ್ವಾ ಅಥವಾ ನೀವೆ ಮಾಡುತ್ತಿದ್ದೀರಾ. ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ಬಳಿಕ ಸುಮಲತಾ ತಿಳಿಸಿದ್ದಾರೆ. ಇಂದಿನ‌ ಘಟನೆಗೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕು. ಇದು ನಿಮ್ಮ ಬೇಜವಾವ್ದಾರಿ, ಇದರಲ್ಲಿ ಅಧಿಕಾರಿಗಳದ್ದು ಪಾಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಸುಮಲತಾ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಈ ದಿನದ ಅಕ್ರಮ ಗಣಿಗಾರಿಕೆ ನೋಡಿ ನನಗೆ ಶಾಕ್ ಆಗಿದೆ ಎಂದು ಸುಮಲತಾ ಹೇಳಿದ್ದಾರೆ.

ಇಂತಹ ಸ್ಥಿತಿಯನ್ನ ನಾವು ಚಲನ‌ಚಿತ್ರಗಳಲ್ಲಿ ನೋಡಿರುತ್ತೇವೆ. ಸಂಸದರು, ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳ ಭೇಟಿ ವೇಳೆ ಕಂಡಿದ್ದು ಭಯಾನಕ ದೃಶ್ಯ. ಪಾಕ್​​-ಭಾರತ ಗಡಿಯಲ್ಲೂ ಈ ರೀತಿ ತಡೆ ಇರಲ್ವೇನೋ. ಸ್ಥಳೀಯರ ಮನವಿ ಮೇರೆಗೆ ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಆದರೆ, ಚೆನ್ನನಕೆರೆ, ಹಂಗರಹಳ್ಳಿಯಲ್ಲಿ ಜನರ ಗೋಳು ಕೇಳೋರಿಲ್ಲ. ಅಲ್ಲಿಯ ಸ್ಥಳೀಯ ಜನರ ಕಷ್ಟಗಳನ್ನ ಕೇಳಿ ನಾನು ಶಾಕ್​ ಆದೆ. ಅಕ್ರಮ ಗಣಿಗಾರಿಕೆಯಿಂದ ಅಲ್ಲಿ ಮನೆಗಳೆಲ್ಲಾ ಬಿರುಕು ಬಿಟ್ಟಿವೆ ಎಂದು ಸುಮಲತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುಮಲತಾ

ಸುಮಲತಾ ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ