ಖಾತೆ ನಿರ್ಧಾರವಾಗುವ ಮೊದಲೇ ಟ್ವಿಟರ್ ಹಿಸ್ಟರಿ ಡಿಲೀಟ್ ಮಾಡಿದ ಶೋಭಾ ಕರಂದ್ಲಾಜೆ

ಅವರು ಈ ಹಿಂದೆ ಮಾಡಿದ್ದ ಹಿಂದಿನ ಎಲ್ಲ ಟ್ವೀಟ್​ಗಳೂ ಅಳಿಸಿ ಹೋಗಿವೆ. ಹಿಂದುತ್ವ, ಪಕ್ಷ, ಧರ್ಮಕ್ಕೆ ಸಂಬಂಧಿಸಿದ ಹಲವು ಟ್ವೀಟ್​ಗಳು ಕಾಣಿಸುತ್ತಿಲ್ಲ. ಟ್ವಿಟರ್ ಖಾತೆಯ ಹಿಸ್ಟರಿ ಡಿಲೀಟ್ ಮಾಡಿರುವ ಶೋಭಾ ಅವರ ನಡೆ ಅಚ್ಚರಿ ಮೂಡಿಸಿದೆ.

ಖಾತೆ ನಿರ್ಧಾರವಾಗುವ ಮೊದಲೇ ಟ್ವಿಟರ್ ಹಿಸ್ಟರಿ ಡಿಲೀಟ್ ಮಾಡಿದ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)
Follow us
TV9 Web
| Updated By: guruganesh bhat

Updated on:Jul 09, 2021 | 3:44 PM

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈಗ ಕೇಂದ್ರ ಸಚಿವರಾಗುವ ಸುಯೋಗ. ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಟ್ವಿಟರ್​ ಖಾತೆಯಲ್ಲಿ ಹಿಸ್ಟರಿ ಡಿಲೀಟ್ ಮಾಡಿದ್ದಾರೆ. ಅವರು ಈ ಹಿಂದೆ ಮಾಡಿದ್ದ ಹಿಂದಿನ ಎಲ್ಲ ಟ್ವೀಟ್​ಗಳೂ ಅಳಿಸಿ ಹೋಗಿವೆ. ಹಿಂದುತ್ವ, ಪಕ್ಷ, ಧರ್ಮಕ್ಕೆ ಸಂಬಂಧಿಸಿದ ಹಲವು ಟ್ವೀಟ್​ಗಳು ಕಾಣಿಸುತ್ತಿಲ್ಲ. ಟ್ವಿಟರ್ ಖಾತೆಯ ಹಿಸ್ಟರಿ ಡಿಲೀಟ್ ಮಾಡಿರುವ ಶೋಭಾ ಅವರ ನಡೆ ಅಚ್ಚರಿ ಮೂಡಿಸಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ದೆಹಲಿಯಲ್ಲಿ ಟಿವಿ9 ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಆಗಸ್ಟ್ 15ರವರೆಗೂ ದೆಹಲಿಯಲ್ಲಿಯೇ ಇರಲು ಪ್ರಧಾನಿ ಸೂಚಿಸಿದ್ದಾರೆ. ನನಗೆ ಯಾವ ಖಾತೆ ನೀಡಲಿದ್ದಾರೆ ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ ಎಂದು ಶೋಭಾ ಕರಂದ್ಲಾಜೆ ನುಡಿದರು.

ಸದಾನಂದಗೌಡರ ಬದಲಿಗೆ ನಾನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿಲ್ಲ. ಡಿ.ವಿ.ಸದಾನಂದಗೌಡರಿಗೆ ಹೆಚ್ಚಿನ ಅನುಭವವಿದೆ. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ನನಗೆ ಯಾವುದೇ ಕೋಟಾದಿಂದ ಸಚಿವಸ್ಥಾನ ಸಿಕ್ಕಿಲ್ಲ. ಬಹುಶಃ ಪಕ್ಷನಿಷ್ಠೆಯಿಂದ ಸಚಿವ ಸ್ಥಾನ ಸಿಕ್ಕಿರಬಹುದು ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಆಪ್ತೆ. ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷೆ. ಈ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದಾಗ ಬಿಗಿ ಆಡಳಿತದಿಂದ ಹೆಸರುವಾಸಿಯಾಗಿದ್ದರು. ಹಲವು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದರು. ಹಿಂದುತ್ವ ಪರ ಚಿಂತನೆ, ಆರ್​ಎಸ್​ಎಸ್​ಗೆ ಅಚಲ ನಿಷ್ಠೆಯಿಂದಲೂ ಶೋಭಾ ಕರಂದ್ಲಾಜೆ ಅವರನ್ನು ಗುರುತಿಸಲಾಗುತ್ತದೆ.

ಶೋಭಾ ಕರಂದ್ಲಾಜೆ ಅವರ ಪರಿಚಯ ಶೋಭಾ ಕರಂದ್ಲಾಜೆ ಅವರು ಮೇ 2014ರಿಂದಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಚಾರ್ವಾಕದಲ್ಲಿ 23ನೇ ಅಕ್ಟೋಬರ್ 1966ರಲ್ಲಿ ಜನನ. ಅಮ್ಮ ಪೂವಮ್ಮ, ಅಪ್ಪ ಮೋನಪ್ಪ ಗೌಡ. ಸಮಾಜ ಶಾಸ್ತ್ರ ಮತ್ತು ಸಾಮಾಜಿಕ ಕಾರ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಅತ್ಯಂತ ಪರಿಚಿತ ನಗು ಮುಖ ಶೋಭಾ ಕರಂದ್ಲಾಜೆ ಅವರದು. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಿಂದ ಬಿಎ ಪದವಿ ಮುಗಿಸಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ.

ದಬ್ಬಾಳಿಕೆಯ ಸಂಪ್ರದಾಯಗಳ ವಿರುದ್ಧ ಸೆಟೆದು ನಿಲ್ಲುವ ಮನೋಭಾವವು ಶೋಭಾ ಕರಂದ್ಲಾಜೆಗೆ ಮುಂಚಿನಿಂದಲೇ ಇತ್ತು. ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದರು. ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತೆಯಾದರು.

ಶೋಭಾ ಕರಂದ್ಲಾಜೆ ಅವರ ರಾಜಕೀಯ ಪಯಣಕ್ಕೆ ಪ್ರೇರೇಪಿಸಿದ ಅನೇಕ ಆದರ್ಶಗಳಲ್ಲಿ, ಮಹಿಳಾ ಸಬಲೀಕರಣವು ಪ್ರಮುಖವಾದುದು. ಬದಲಾವಣೆಯನ್ನು ಬಯಸುವ ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಅವರು ಸದಾ ಶ್ರಮಿಸುತ್ತಿದ್ದಾರೆ. ಅವರ ರಾಜಕೀಯ ಮತ್ತು ವೈಯಕ್ತಿಕ ಬೆಳವಣಿಗೆಯು ಗ್ರಾಮೀಣ ಭಾರತೀಯ ಮಹಿಳೆಯೊಬ್ಬರು ಪ್ರಮುಖ ನಾಯಕಿಯಾಗಲು ಸಮರ್ಥರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ.

(Shobha Karandlaje Deletes All Her Tweets After Sworn in as Central Minister)

ಇದನ್ನೂ ಓದಿ: Shobha Karandlaje: ನಗುಮುಖದ ಗಟ್ಟಿಗಿತ್ತಿ, ಹಿಂದುತ್ವ ಪರ ಚಿಂತನೆಯ ಮಹಿಳಾ ದನಿ ಶೋಭಾ ಕರಂದ್ಲಾಜೆ

ಇದನ್ನೂ ಓದಿ: ಶೋಭಾ ಕರಂದ್ಲಾಜೆಗಿಂತಲೂ ಮೊದಲು ಕೇಂದ್ರದಲ್ಲಿ ಮಂತ್ರಿಗಿರಿ ಪಡೆದ ಕರ್ನಾಟಕದ ಮಹಿಳಾ ರಾಜಕಾರಣಿಗಳು ಇವರು..

Published On - 9:42 pm, Wed, 7 July 21

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ