ಕಲಬುರಗಿ: ಜಿಲ್ಲಾ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿಯಾಗಿರುವ ಸಂಗತಿ ವರದಿಯಾಗಿದೆ. ಜೈಲಿನ ಹೊರಗೆ ಕೃಷಿ ಕೆಲಸಕ್ಕೆ ಕಳುಹಿಸಿದ್ದಾಗ ರಮೇಶ್ ವಡ್ಡರ್ ಎಂಬ ಕೈದಿ ಪರಾರಿಯಾಗಿದ್ದಾನೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಮೇಶ್ ವಡ್ಡರ್ನ ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ ಆತ ಪರಾರಿಯಾಗಿದ್ದಾನೆ. ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ರಮೇಶ್ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.
ರಮೇಶ್ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ನಿವಾಸಿ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಸದ್ಯ, ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.