ಬೆಂಗಳೂರು: ಕೊರೊನಾ ಟೆಸ್ಟ್ ಸಂಬಂಧಿಸಿ ಸರ್ಕಾರದ ಆದೇಶವನ್ನು ಮೀರಿ ಖಾಸಗಿ ಆಸ್ಪತ್ರೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಸಂಗತಿ ಬಯಲಾಗಿದೆ. ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ಟೆಸ್ಟ್ ಹೆಸರಿನಲ್ಲಿ ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿವೆ ಎಂಬುವುದು ಬಯಲಾಗಿದೆ.
ಸರ್ಕಾರದ ಆದೇಶಕ್ಕೂ ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್ ಎನ್ನುತ್ತಿವೆ. ಸರ್ಕಾರದ ಆದೇಶ ಕೇವಲ ಕಾಗದದ ಪತ್ರಕ್ಕೆ ಸೀಮಿತ ಆಯ್ತಾ? ಎಂಬಂತಾಗಿದೆ. ಕೊವಿಡ್ ಟೆಸ್ಟ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಶುರು ಮಾಡಿವೆ. ಸರ್ಕಾರ ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ಆಸ್ಪತ್ರೆಗಳು ಪೀಕುತ್ತಿವೆ.
ಕೊರೊನಾ ಟೆಸ್ಟ್ಗೆ ಸರ್ಕಾರದಿಂದ ₹2,200 ರೂಪಾಯಿ ನಿಗದಿ ಮಾಡಲಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಗಳು ₹4500 ರಿಂದ 5000 ವಸೂಲಿ ಮಾಡುತ್ತಿವೆ. ಅಷ್ಟೇ ಅಲ್ಲದೇ ಡಾಕ್ಟರ್ ಶುಲ್ಕ ₹650 ರಿಂದ 700 ಕಟ್ಟಬೇಕು. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.
Published On - 10:22 am, Tue, 7 July 20