ಬೆಂಗಳೂರು: ಯಾರೂ ಕನಸುಮನಸಿನಲೂ ಊಹಿಸದ ರೀತಿಯಲಿ ಇಂದು ಬೆಳಗ್ಗೆ ವಿಧಿವಶರಾದ ಯುವ ನಟ ಪುನೀತ್ ರಾಜ್ ಕುಮಾರ್ (46) ಅವರ ಅಂತ್ಯಕ್ರಿಯೆ ಭಾನುವಾರ ನಡೆಯುವ ಸಾಧ್ಯತೆಗಳಿವೆ. ಪುನೀತ್ ಅವರ ದೊಡ್ಡ ಮಗಳು ಅಮೆರಿಕಾದಿಂದ ಬರಬೇಕಾಗಿದೆ. ಈ ಮಧ್ಯೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್ ಫಾರ್ಮ್ಹೌಸ್ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಫಾರ್ಮ್ಹೌಸ್ಗೆ ಸರ್ಕಾರ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ದೊಡ್ಮನೆ ಕುಟುಂಬ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ರಾಮನಗರ ಎಸ್ ಪಿ ಗಿರೀಶ್, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪುನೀತ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ, ಅಪ್ಪು ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಗ್ರಾಮದ ಬಳಿ ಒಟ್ಟು 13 ಎಕರೆ 8 ಗುಂಟೆ ಜಮೀನಿನಲ್ಲಿ ಪುನೀತ್ ಫಾರ್ಮ್ ಹೌಸ್ ಇದೆ. 1973 ರಲ್ಲಿ ಡಾ. ರಾಜಕುಮಾರ್ ಈ ಜಮೀನನ್ನು ಖರೀಸಿದ್ದರು. ರಾಜಕುಮಾರ್ ನಿಧನದ ನಂತರ ಪಾರ್ವತಮ್ಮ ಅವರಿಗೆ ಜಮೀನಿನ ಪೌತಿ ಖಾತೆ ಆಗಿತ್ತು. ಆನಂತರ ಎರಡು ವರ್ಷದ ಕೆಳಗೆ ಕುಟುಂಬದ ಐದು ಜನರಿಗೆ ಆ ಜಮೀನು ಭಾಗವಾಗಿತ್ತು. ಪುನೀತ್ ಅವರ ಹೆಸರಿಗೆ ಎರಡು ಎಕರೆ ಜಮೀನು ಇದೆ. ಪುನೀತ್ ಅಲ್ಲಿ ಎರಡು ಎಕರೆ ಜಾಗದಲ್ಲಿ ಡಾ.ರಾಜಕುಮಾರ್ ಶಾಲೆ ಆರಂಭಿಸಬೇಕೆಂಬ ಕನಸು ಕಂಡಿದ್ದರು. ಪುನೀತ್ ಆಗಾಗ ಫಾರ್ಮ್ ಗೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Also Read:
Puneeth Rajkumar Death: ಯುವ ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ -ಎರಡು ದಿನ ಜಿಮ್ ಸೆಂಟರ್ಗಳು ಬಂದ್
Puneeth Rajkumar Death Live: ನಟ ಪುನೀತ್ ರಾಜಕುಮಾರ್ ಇನ್ನಿಲ್ಲ
Puneeth Rajkumar: ಪುನೀತ್ ರಾಜಕುಮಾರ್ ಅಣ್ಣನ ರೀತಿ ಇದ್ರು: ನಿಖಿಲ್ ಕುಮಾರಸ್ವಾಮಿ|Tv9Kannada
(puneeth rajkumar death last rites to be performed at puneeth farm house near ramnagar)
Published On - 4:22 pm, Fri, 29 October 21