ರಾಜ್ಯದಲ್ಲಿ ಆಕ್ಸಿಜನ್​​ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ, ನಾಳೆಯೂ ರೈಲಿನ ಮೂಲಕ ಆಕ್ಸಿಜನ್​ ರಾಜ್ಯಕ್ಕೆ ಬರುತ್ತದೆ: ಆರ್. ಅಶೋಕ್

| Updated By: ganapathi bhat

Updated on: Aug 23, 2021 | 12:38 PM

ಈಗಿನಿಂದಲೇ 3ನೇ ಅಲೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್​​ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ, ನಾಳೆಯೂ ರೈಲಿನ ಮೂಲಕ ಆಕ್ಸಿಜನ್​ ರಾಜ್ಯಕ್ಕೆ ಬರುತ್ತದೆ: ಆರ್. ಅಶೋಕ್
ಆರ್. ಅಶೋಕ್
Follow us on

ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್​​ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ನಾಳೆಯೂ ರೈಲಿನ ಮೂಲಕ ಆಕ್ಸಿಜನ್​ ರಾಜ್ಯಕ್ಕೆ ಬರುತ್ತದೆ. ಎಲ್ಲಾ ಕೊವಿಡ್​ ಸೆಂಟರ್​ಗಳಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಬೆಂಗಳೂರಿನಲ್ಲಿ 2 ಸಾವಿರ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಪ್ರತಿ ತಾಲೂಕಿಗೂ 40 ಆಕ್ಸಿಜನ್​ ಕಾನ್ಸಂಟ್ರೇಟರ್ ಅಳವಡಿಕೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಅಶೋಕ್​ ತಿಳಿಸಿದ್ದಾರೆ.

ಸಿಸಿಸಿ ಸೆಂಟರ್​​ನಲ್ಲೇ ತುರ್ತು ಆಕ್ಸಿಜನ್​ ಸೌಲಭ್ಯವಿರುತ್ತದೆ. ಕೊವಿಡ್​ ಸೆಂಟರ್​ಗಳಲ್ಲಿ ಊಟದ ವ್ಯವಸ್ಥೆ ಜೊತೆ ಆಕ್ಸಿಜನ್ ಸೌಲಭ್ಯ ಒದಗಿಸುತ್ತೇವೆ. ಈಗಿನಿಂದಲೇ 3ನೇ ಅಲೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಬಸವರಾಜ ಬೊಮ್ಮಾಯಿ​ ಕೂಡ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್​ ಯಶಸ್ವಿಯಾಗಿದೆ. 18 ರಿಂದ 45 ವರ್ಷದವರಿಗೆ ಲಸಿಕೆ ನೀಡುವುದು ಆರಂಭವಾಗಿದೆ. ಆನ್​​ಲೈನ್​ನಲ್ಲಿ ಎಸ್‌ಎಮ್‌ಎಸ್ ಬಂದವರಿಗೆ ಲಸಿಕೆ ನೀಡಲಾಗುತ್ತಿದೆ. ನೋಂದಣಿ ಮಾಡಿಸದೇ ಬಂದವರಿಗೆ ಲಸಿಕೆ ನೀಡಲಾಗುವುದಿಲ್ಲ. ಸದ್ಯಕ್ಕೆ ಇದೇ ವ್ಯವಸ್ಥೆ ಮುಂದುವರಿಯಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಜನರ ಮೇಲೆ ಲಾಠಿ ಪ್ರಯೋಗ ಬೇಡ ಎಂದು ಹೇಳಲಾಗಿದೆ. ನಾನು ರಾಜ್ಯದ ಜನರಿಗೆ ಮನವಿಯನ್ನು ಮಾಡುತ್ತೇನೆ, ಲಾಠಿ ಪ್ರಯೋಗ ಮಾಡುವಂಥ ಅನಿವಾರ್ಯವನ್ನು ನಮಗೆ ತಂದೊಡ್ಡಬೇಡಿ ಎಂದು ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.

ಕೊರೊನಾ ಮೂರನೇ ಅಲೆ ಎದುರಿಸಲು ಟಾಸ್ಕ್ ಫೋರ್ಸ್
ರಾಜ್ಯದಲ್ಲಿ ಕೊವಿಡ್ ನಿರ್ವಹಣೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಮೇ 10) ತಮ್ಮ ಅಧಿಕೃತ ನಿವಾಸದಲ್ಲಿ ಕೊವಿಡ್​ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಜನ ಅನಗತ್ಯವಾಗಿ ಹೊರಗೆ ಓಡಾಡುವುದನ್ನ ತಪ್ಪಿಸಬೇಕು. ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು. ಕೊರೊನಾ 3ನೇ‌ ಅಲೆಗೆ ಈಗಿನಿಂದಲೇ ಸಿದ್ದರಾಗಬೇಕಿದ್ದು ಅದಕ್ಕೊಂದು‌ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ತಿಳಿಸಿದರು.

ಕೊವಿಡ್ -19 ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಪ್ರಮುಖವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು ಜನರು ಅನಗತ್ಯವಾಗಿ ಓಡಾಡುವುದನ್ನು‌ ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮಿಡಿಸಿವಿರ್ ಡ್ರಗ್ ಪೂರೈಕೆಯನ್ನು ಅಗತ್ಯತೆಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ; ಚಾಮರಾಜನಗರದಲ್ಲಿ ವಾರದ 4 ದಿನ ಸಂಪೂರ್ಣ ಲಾಕ್​ಡೌನ್

ಕೊರೊನಾ ಮೂರನೇ ಅಲೆ ಎದುರಿಸಲು ಟಾಸ್ಕ್ ಫೋರ್ಸ್ ಸಮಿತಿ ರಚಿಸುವಂತೆ ಬಿ.ಎಸ್. ಯಡಿಯೂರಪ್ಪ ಆದೇಶ

Published On - 10:37 pm, Mon, 10 May 21