AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಕೊವಿಡ್ ಸಂದರ್ಭದಲ್ಲಿ ಕೊವಿಡ್ ಬಿಟ್ಟು ಬೇರೆ ವಿಷಯ ಚರ್ಚೆ ಮಾಡುವ ಸಾಧ್ಯತೆಗಳೇ ಇಲ್ಲ. ಬೇರೆ ವಿಷಯ ಚರ್ಚೆ ಮಾಡುವುದು ಸಮಂಜಸವೂ ಅಲ್ಲ. ಅಂಥ ಉದ್ದೇಶವು ನಮ್ಮದಲ್ಲ. ನೀವು ಹೇಳಿದಂತೆ ರಾಜಕೀಯ ವಿಷಯ ಚರ್ಚೆ ಆಗಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಬಸವರಾಜ ಬೊಮ್ಮಾಯಿ
guruganesh bhat
|

Updated on: May 10, 2021 | 9:46 PM

Share

ಬೆಂಗಳೂರು: ತಮ್ಮ ಹಾಗೂ ಬಿ ವೈ ವಿಜಯೇಂದ್ರ ನವದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ನಾಯಕತ್ವ ಬದಲಾವಣೆ ಮಾಡುತ್ತಾರೆ ಎಂಬುದು ಹಸಿ ಸುಳ್ಳು, ಸತ್ಯಕ್ಕೆ ಬಹಳ ದೂರವಾದ ಸಂಗತಿ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊವಿಡ್ ಸಂದರ್ಭದಲ್ಲಿ ಕೊವಿಡ್ ಬಿಟ್ಟು ಬೇರೆ ವಿಷಯ ಚರ್ಚೆ ಮಾಡುವ ಸಾಧ್ಯತೆಗಳೇ ಇಲ್ಲ. ಬೇರೆ ವಿಷಯ ಚರ್ಚೆ ಮಾಡುವುದು ಸಮಂಜಸವೂ ಅಲ್ಲ. ಅಂಥ ಉದ್ದೇಶವು ನಮ್ಮದಲ್ಲ. ನೀವು ಹೇಳಿದಂತೆ ರಾಜಕೀಯ ವಿಷಯ ಚರ್ಚೆ ಆಗಲಿಲ್ಲ. ಎಲ್ಲರೂ ಸೇರಿ ಕೋವಿಡ್ ವಿರುದ್ಧ ಹೋರಾಡಬೇಕಾಗಿದೆ. ಕೊವಿಡ್ ಬಗ್ಗೆ ಚರ್ಚೆ ನಡೆದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೊವಿಡ್ ಸ್ಥಿತಿ ಬಗ್ಗೆ ಆತಂಕ  ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಕೊವಿಡ್ ಸ್ಥಿತಿಗತಿ ಕುರಿತು ವಿವರಣೆ ನೀಡಲಾಯಿತು. ರಾಜ್ಯಕ್ಕೆ 965 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆಯಾಗಿದೆ. ನಮ್ಮ ಪಾಲಿನ ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ರಾಜ್ಯದಲ್ಲಿ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದೆವು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ರಾಜ್ಯದ ಪಾಲಿನ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಲಾಗುವುದು. 4 ಆಕ್ಸಿಜನ್ ಟ್ಯಾಂಕ್ ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದಾರೆ. 10 ಟ್ಯಾಂಕ್​ಗಳನ್ನು ಹೆಚ್ಚುವರಿಯಾಗಿ ಕೊಡುತ್ತೇವೆ. ಬಹ್ರೇನ್​ನಿಂದ ಎರಡು ಟ್ಯಾಂಕ್ ಬರಲಿವೆ. ಕುವೈತ್​ನಿಂದ 40 ಟನ್ ಮಂಗಳೂರು ಬಂದರಿಗೆ ಆಕ್ಸಿಜನ್ ಟ್ಯಾಂಕರ್​ಗಳು ಬಂದಿವೆ. ಇವುಗಳನ್ನು ಹೊತ್ತು ಬರುವ ಆಕ್ಸಿಜನ್ ಟ್ಯಾಂಕರ್​ಗಳನ್ನು ಬಳಕೆ ಮಾಡಿಕೊಳ್ಳುವಂತೆ ಅಮಿತ್ ಶಾ ತಿಳಿಸಿರುವುದಾಗಿ ಬಸವರಾಜ್ ಬೊಮ್ಮಾಯಿ ವಿವರಿಸಿದರು.

ರಾಜ್ಯಕ್ಕೆ 2.67 ಲಕ್ಷ ರೆಮ್​ಡೆಸಿವಿರ್ ಔಷಧಿ ನೀಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಸಮಾಜದಲ್ಲಿನ ದುರ್ಬಲ ವಿಭಾಗದವರ ಮನೆ ಬಾಗಿಲಿಗೆ ತೆರಳಿ ಕೊವಿಡ್ ಲಸಿಕೆ ನೀಡಲು ನಿರ್ದೇಶಿಸಿ: ಸುಪ್ರೀಂಕೋರ್ಟ್​ಗೆ ವೈಬಿಎಐ ಮನವಿ

16 ಜನರ ಮೇಲೆ ಅಪರಾಧ ಹೊರಿಸಿದ್ದು ನಾನಲ್ಲ; ಅವರನ್ನು ಬಿಬಿಎಂಪಿ ಮೊದಲೇ ಕೆಲಸದಿಂದ ತೆಗೆದಿತ್ತು- ಸಂಸದ ತೇಜಸ್ವಿ ಸೂರ್ಯ

(Karnataka HM Basavaraj Bommai clarifies there is no political purpose in Delhi visit)