‘ಎಲ್ಲಿವರೆಗೂ ಜನಪ್ರತಿನಿಧಿಗಳು ಫೀಲ್ಡಿಗಿಳಿಯಲ್ವೋ, ಅಲ್ಲಿವರೆಗೂ ವ್ಯವಸ್ಥೆ ಸರಿ ಹೋಗಲ್ಲ’

| Updated By:

Updated on: Jul 06, 2020 | 2:35 PM

ಬೆಂಗಳೂರು: ಕೊರೊನಾ ಸೋಂಕು ಮಹಾಮಾರಿಯಿಂದ ಇಡೀ ಜಗತ್ತೇ ಕಂಗೆಟ್ಟಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಸಂದರ್ಭದಲ್ಲಿ ರಾಜಧಾನಿಯಲ್ಲಿ ಕೊವಿಡ್​ ಉಸ್ತುವಾರಿ ವಹಿಸಿರುವ ಸಚಿವ ಆರ್ ಅಶೋಕ್ ಪರಿಸ್ಥಿತಿಯನ್ನು ಅವಲೋಕಿಸುತ್ತಾ ‘ಎಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳು ಫೀಲ್ಡಿಗಿಳಿಯಲ್ವೋ ಅಲ್ಲಿಯವರೆಗೂ ವ್ಯವಸ್ಥೆ ಸರಿ ಹೋಗಲ್ಲ’ ಎಂದು ಹೇಳಿದ್ದಾರೆ. ಯುದ್ಧ ಆದಾಗ ಸಮಸ್ಯೆಗಳು ಹೇಗೆ ಬಂದಿದ್ವೋ, ಅದಕ್ಕಿಂತ ಜಾಸ್ತಿ ಸಮಸ್ಯೆಗಳು ನಮ್ಮ ಕಣ್ಮುಂದೆ ಬಂದಿವೆ. ಅತಿಯಾದ ಪ್ರಚಾರದಿಂದ ಭಯ ಭೀತರಾಗಿದ್ದಾರೆ ಅನ್ನಿಸ್ತಿದೆ. ಒಂದು ಕಡೆ ರೋಗ…ಇನ್ನೊಂದು ಕಡೆ ವ್ಯಾಪಾರ.. […]

‘ಎಲ್ಲಿವರೆಗೂ ಜನಪ್ರತಿನಿಧಿಗಳು ಫೀಲ್ಡಿಗಿಳಿಯಲ್ವೋ, ಅಲ್ಲಿವರೆಗೂ ವ್ಯವಸ್ಥೆ ಸರಿ ಹೋಗಲ್ಲ’
Follow us on

ಬೆಂಗಳೂರು: ಕೊರೊನಾ ಸೋಂಕು ಮಹಾಮಾರಿಯಿಂದ ಇಡೀ ಜಗತ್ತೇ ಕಂಗೆಟ್ಟಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಸಂದರ್ಭದಲ್ಲಿ ರಾಜಧಾನಿಯಲ್ಲಿ ಕೊವಿಡ್​ ಉಸ್ತುವಾರಿ ವಹಿಸಿರುವ ಸಚಿವ ಆರ್ ಅಶೋಕ್ ಪರಿಸ್ಥಿತಿಯನ್ನು ಅವಲೋಕಿಸುತ್ತಾ ‘ಎಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳು ಫೀಲ್ಡಿಗಿಳಿಯಲ್ವೋ ಅಲ್ಲಿಯವರೆಗೂ ವ್ಯವಸ್ಥೆ ಸರಿ ಹೋಗಲ್ಲ’ ಎಂದು ಹೇಳಿದ್ದಾರೆ.

ಯುದ್ಧ ಆದಾಗ ಸಮಸ್ಯೆಗಳು ಹೇಗೆ ಬಂದಿದ್ವೋ, ಅದಕ್ಕಿಂತ ಜಾಸ್ತಿ ಸಮಸ್ಯೆಗಳು ನಮ್ಮ ಕಣ್ಮುಂದೆ ಬಂದಿವೆ. ಅತಿಯಾದ ಪ್ರಚಾರದಿಂದ ಭಯ ಭೀತರಾಗಿದ್ದಾರೆ ಅನ್ನಿಸ್ತಿದೆ. ಒಂದು ಕಡೆ ರೋಗ…ಇನ್ನೊಂದು ಕಡೆ ವ್ಯಾಪಾರ.. ಕೂಲಿ ಇಲ್ಲದೇ ಸಮಸ್ಯೆ ಅನುಭವಿಸ್ತಿದ್ದಾರೆ. ನಮಗೂ ಪ್ರಾಣದ ಆಸೆ ಇದೆ…ಆದ್ರೂ ರಿಸ್ಕಲ್ಲಿ ಕೆಲಸ ಮಾಡಬೇಕಿದೆ. ಎಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳು ಫೀಲ್ಡಿಗಿಳಿಯಲ್ವೋ ಅಲ್ಲಿಯವರೆಗೂ ವ್ಯವಸ್ಥೆ ಸರಿ ಹೋಗಲ್ಲ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.

ಇನ್ನೂ ಆರು ತಿಂಗಳು ಪರಿಸ್ಥಿತಿ ಹೀಗೇ
ನೋ ಕಾಂಗ್ರೆಸ್…ನೋ ಬಿಜೆಪಿ..ನೋ ಜೆಡಿಎಸ್! ಬಡವ-ಶ್ರೀಮಂತ ಅನ್ನೊದೇನಿಲ್ಲ. ಬರೀ ಕೊರೊನಾ ಹೋಗಲಾಡಿಸಬೇಕು ಅಷ್ಟೆ. ಪಕ್ಷಾತೀತವಾಗಿ ಕೆಲಸ ಮಾಡೋಣ. ಇನ್ನೂ ಆರು ತಿಂಗಳು ಪರಿಸ್ಥಿತಿ ಸರಿ ಹೋಗುವ ಹಾಗೆ ಕಾಣಿಸ್ತಿಲ್ಲ ಎಂದು ಅಶೋಕ್ ಹೇಳಿದ್ದಾರೆ.

Published On - 2:02 pm, Mon, 6 July 20