ಸ್ವಾಮೀಜಿ ಹೇಳಿದ್ದೆಲ್ಲಾ ಆಗುತ್ತಿತ್ತು.. ಡಿಸೆಂಬರ್​ನಲ್ಲಿ ನಿಮ್ಮ ಟೈಂ ಸರಿ ಇಲ್ಲ ಅಂತಾನೂ ಹೇಳಿದ್ರು: ರಾಧಿಕಾ ಕುಮಾರಸ್ವಾಮಿ

ಡಿಸೆಂಬರ್‌ನಲ್ಲಿ ನಿಮ್ಮ ಟೈಂ ಸರಿ ಇರಲ್ಲ ಎಂದು ಸ್ವಾಮೀಜಿಯವರು ಹೇಳಿದ್ದರು. ಫೆಬ್ರವರಿ ನಂತರ ಶುಕ್ರದೆಸೆ ಬರುತ್ತೆ ಎಂದು ಹೇಳಿದ್ದರು. ಆದರೆ ಇವರಿಂದ ಹೀಗೆ ಆಗಬಹುದೆಂದು ಅಂದುಕೊಂಡಿರಲಿಲ್ಲ.

ಸ್ವಾಮೀಜಿ ಹೇಳಿದ್ದೆಲ್ಲಾ ಆಗುತ್ತಿತ್ತು.. ಡಿಸೆಂಬರ್​ನಲ್ಲಿ ನಿಮ್ಮ ಟೈಂ ಸರಿ ಇಲ್ಲ ಅಂತಾನೂ ಹೇಳಿದ್ರು: ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
Edited By:

Updated on: Jan 07, 2021 | 10:41 AM

ಬೆಂಗಳೂರು: ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಮಾತನಾಡಿದ ರಾಧಿಕಾ.. ಯುವರಾಜ್​ ಅವರನ್ನು ಸುಮಾರು 17 ವರ್ಷದಿಂದ ನೋಡುತ್ತಿದ್ದೇವೆ. ನಮ್ಮ ತಂದೆಯ ಕಾಲದಿಂದಲೂ ಪರಿಚಯವಿದೆ. ಎಷ್ಟೋ ವಿಚಾರಗಳಲ್ಲಿ ಅವರು ಹೇಳಿದಂತೆಯೇ ಆಗಿದೆ. ಅವರು ನಮ್ಮ ತಂದೆ ಮೃತಪಡುವ ಬಗ್ಗೆ ಎಚ್ಚರಿಸಿದ್ದರು. ಆದರೆ, ಅವರು ಹೇಳಿದ ಪೂಜೆಯನ್ನು ನಾವು ಮಾಡಿಸಿರಲಿಲ್ಲ. ಅದೊಂದನ್ನು ಮಾಡಿಸಿದ್ದರೆ ಒಳ್ಳೆಯದಾಗುತ್ತಿನೋ ಎಂದು ಅನೇಕ ಬಾರಿ ಅನ್ನಿಸಿದ್ದುಂಟು ಎಂದು  ತಿಳಿಸಿದ್ದಾರೆ. ಯುವರಾಜ್ ಹಣಕಾಸು ವ್ಯವಹಾರದ ಕುರಿತು ಇಂದು ಬೆಳಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು.

ಯುವರಾಜ್​ ಜೊತೆಗಿನ ವ್ಯವಹಾರದ ಆರೋಪದ ಕುರಿತು ಮಾತನಾಡಿದ ಅವರು, ಯುವರಾಜ್​ ಪತ್ನಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಈ ವಿಚಾರವಾಗಿ ನಾವು ಚರ್ಚೆ ಮಾಡಿದ್ದೆವು. ಅದಕ್ಕಾಗಿ ಮುಂಗಡ ಹಣ ರೂಪದಲ್ಲಿ ನನ್ನ ಖಾತೆಗೆ ₹15 ಲಕ್ಷ ಜಮಾ ಮಾಡಿದ್ದರು. ಅದನ್ನು ಹೊರತುಪಡಿಸಿ ಯುವರಾಜ್​ ಅವರಿಂದ ಬೇರೆ ಯಾವುದೇ ಹಣ ಬಂದಿಲ್ಲ ಎಂದು ಹೇಳಿದ್ದಾರೆ.

ಅಡ್ವಾನ್ಸ್ ರೂಪದಲ್ಲಿ 15 ಲಕ್ಷ ರೂಪಾಯಿ  ಕೊಟ್ಟ ನಂತರ, ಇನ್ನೂ ಹಲವರನ್ನು ಕರೆತಂದು ಅವರು ಪರಿಚಯಿಸಿದ್ದರು. ಸಿನಿಮಾ ಮಾಡಬೇಕೆಂದು ಬಂದು ಚರ್ಚೆ ಮಾಡಿದ್ದರು. ಸಿನಿಮಾ ಮಾಡುವುದು ಅಂದರೆ ಅಷ್ಟು ಸುಲಭವಲ್ಲ. ಒಂದು ಟೀಮ್ ಮಾಡಿಕೊಳ್ಳಬೇಕೆಂದು ನಾನು ಹೇಳಿದ್ದೆ. ನಾನು ಕೆಲಸ ಮಾಡಿಸಿಕೊಡುತ್ತೇನೆಂದು ನಾನು ಹೇಳಿಲ್ಲ. ಯಾರಿಗೂ ನಾನು ಕೆಲಸ ಮಾಡಿಸಿಕೊಡುತ್ತೇನೆಂದು ಹೇಳಿಲ್ಲ. ನಾನು ಹಲವು ರಾಜಕಾರಣಿಗಳನ್ನು ಭೇಟಿಯಾಗಿದ್ದೇನೆ. ಆದರೆ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ. ನನಗೆ ಸಿನಿಮಾ ಮೇಲೆ ಮಾತ್ರ ಹೆಚ್ಚು ಆಸಕ್ತಿ ಇದೆ ಎಂದು ರಾಧಿಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅದಾದ ನಂತರ.. ಸಿನಿಮಾ ಸಂಬಂಧಿತವಾಗಿ ನಿರ್ಮಾಕರೊಬ್ಬರು ನನ್ನ ಖಾತೆಗೆ ₹ 60ಲಕ್ಷ ಹಣ ಹಾಕಿದ್ದರು. ಅದನ್ನೂ ಸೇರಿ ಒಟ್ಟು ₹ 75ಲಕ್ಷ ನನ್ನ ಖಾತೆಗೆ ಬಂದಿದೆ. ಡಿಸೆಂಬರ್‌ನಲ್ಲಿ ನಿಮ್ಮ ಟೈಂ ಸರಿ ಇರಲ್ಲ ಎಂದು ಸ್ವಾಮೀಜಿಯವರು ಹೇಳಿದ್ದರು. ಫೆಬ್ರವರಿ ನಂತರ ಶುಕ್ರದೆಸೆ ಬರುತ್ತೆ ಎಂದು ಹೇಳಿದ್ದರು. ಆದರೆ ಇವರಿಂದ ಹೀಗೆ ಆಗಬಹುದೆಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ನಾನು ಪ್ರಾಮಾಣಿಕವಾಗಿದ್ದಾಗ ಹೆದರುವ ಪ್ರಶ್ನೆಯೇ ಇಲ್ಲ

ನಾನು ಪ್ರಾಮಾಣಿಕವಾಗಿದ್ದಾಗ ಹೆದರುವ ಮಾತೇ ಇಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪ ಬಂದ ಬೆನ್ನಲ್ಲೇ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಅವರ ಜತೆಗಿನ ಎಲ್ಲ ವ್ಯವಹಾರ ಕ್ಲಿಯರ್ ಮಾಡಿಕೊಳ್ತೇನೆ. ಅವರ ಸಹವಾಸ ನನಗೆ ಬೇಡ. ನಾನು ಇಂತಹದ್ದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಾಧಿಕಾ ಗುಡುಗಿದ್ದಾರೆ.

 

ಯುವರಾಜ್​ರಿಂದ 15 ಲಕ್ಷ, ಬೇರೆ ನಿರ್ಮಾಪಕರಿಂದ 65 ಲಕ್ಷ ರೂ. ನನ್ನ ಖಾತೆಗೆ ಬಂದಿದೆ.. ಅನ್ಯ ವ್ಯವಹಾರ ಇಲ್ಲ: ರಾಧಿಕಾ ಕುಮಾರಸ್ವಾಮಿ

 

ಆಯ್ರಾ ಜನ್ಮದಿನಕ್ಕೆ ವಿಶೇಷ ಕಿವಿಮಾತು ಹೇಳಿದ ನಟಿ ರಾಧಿಕಾ ಪಂಡಿತ್

Published On - 3:03 pm, Wed, 6 January 21