AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿಯಲ್ಲೊಬ್ಬ ಚಾಮಯ್ಯ ಮೇಷ್ಟ್ರು..! ಮಕ್ಕಳನ್ನು ಹುಡುಕಿ ಶಾಲೆಗೆ ಕರೆತರುವ ಸಹೃದಯಿ ಜೀವ

ಚಾಮಯ್ಯ ಮೇಷ್ಟ್ರು, ನಾಗರಹಾವು ಚಿತ್ರದ ಅಚ್ಚಳಿಯದ ಪಾತ್ರ. ವಿದ್ಯಾರ್ಥಿ ಬಗ್ಗೆ ಅಪಾರ ಕಾಳಜಿ ಇರುವ ಶಿಕ್ಷಕನ ಪಾತ್ರದಲ್ಲಿ ಹಿರಿಯ ನಟ ದಿವಂಗತ ಅಶ್ವತ್ಥ್ ಅಕ್ಷರಶಃ ಪರಕಾಯ ಪ್ರವೇಶ ಮಾಡಿದ್ದರು. ಅದು ಪರದೆ ಮುಂದೆ ರೀಲ್ ಆಗಿ ನಡೆದಿರುವ ಘಟನೆ. ಆದರೆ ಇಲ್ಲೊಬ್ಬರು ರೀಯಲ್ ಚಾಮಯ್ಯ ಮೇಷ್ಟ್ರಿದ್ದಾರೆ.

ಯಾದಗಿರಿಯಲ್ಲೊಬ್ಬ ಚಾಮಯ್ಯ ಮೇಷ್ಟ್ರು..! ಮಕ್ಕಳನ್ನು ಹುಡುಕಿ ಶಾಲೆಗೆ ಕರೆತರುವ ಸಹೃದಯಿ ಜೀವ
ಶಿಕ್ಷಕ ಕನಕಪ್ಪ ದಾಸರ್
Follow us
sandhya thejappa
| Updated By: ಆಯೇಷಾ ಬಾನು

Updated on: Jan 07, 2021 | 7:07 AM

ಯಾದಗಿರಿ: ನಾಗರಹಾವು ಸಿನಿಮಾವನ್ನು ಎಲ್ಲರೂ ನೋಡಿರುತ್ತಾರೆ. ಈ ಚಿತ್ರದಲ್ಲಿನ ಚಾಮಾಯ್ಯ ಮೇಷ್ಟ್ರು ಪಾತ್ರ ಎಲ್ಲರನ್ನು ಖಂಡಿತ ಕಾಡಿರುತ್ತದೆ. ಶಿಕ್ಷಕರೆಂದರೆ ಹೀಗಿರಬೇಕು ಅಂತಾ ಆ ಪಾತ್ರ ನೋಡಿ ನಿರ್ಧರಿಸುತ್ತಾರೆ. ಅದು ರೀಲ್ ಆಯ್ತು. ಆದರೆ ಇಲ್ಲೊಬ್ಬ ರಿಯಲ್ ಚಾಮಯ್ಯ ಮೇಷ್ಟ್ರು ಇದ್ದಾರೆ. ಶೈಕ್ಷಣಿಕವಾಗಿ ತೀರಾ ಹಿಂದುಳಿದ ಗಡಿ ಜಿಲ್ಲೆಯಲ್ಲಿ ರಿಯಲ್ ಚಾಮಯ್ಯ ಮೇಷ್ಟ್ರು ತರಹನೆ ಶೈಕ್ಷಣಿಕವಾಗಿ ಕೆಲಸ ಮಾಡಿ ಜನರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ಚಾಮಯ್ಯ ಮೇಷ್ಟ್ರು, ನಾಗರಹಾವು ಚಿತ್ರದ ಅಚ್ಚಳಿಯದ ಪಾತ್ರ. ವಿದ್ಯಾರ್ಥಿ ಬಗ್ಗೆ ಅಪಾರ ಕಾಳಜಿ ಇದ್ದ ಶಿಕ್ಷಕನ ಪಾತ್ರದಲ್ಲಿ ಹಿರಿಯ ನಟ ದಿವಂಗತ ಅಶ್ವತ್ಥ್ ಅಕ್ಷರಶಃ ಪರಕಾಯ ಪ್ರವೇಶ ಮಾಡಿದ್ದರು. ಅದು ಪರದೆ ಮುಂದೆ ರೀಲ್ ಆಗಿ ನಡೆದಿರುವ ಘಟನೆ. ಆದರೆ ಇಲ್ಲೊಬ್ಬರು ರೀಯಲ್ ಚಾಮಯ್ಯ ಮೇಷ್ಟ್ರಿದ್ದಾರೆ. ಮಕ್ಕಳಿಗಾಗಿ ಈ ಶಿಕ್ಷಕ ಬಿಸಿಲು, ಮಳೆ ಲೆಕ್ಕಿಸದೆ ಸದಾ ಸೇವೆಗೆ ಸಿದ್ಧರಾಗಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ತಾಲೂಕಿನ ಅಲ್ಲಿಪುರ ಬಳಿಯ ವೆಂಕಟೇಶ ನಗರ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಮಕ್ಕಳನ್ನು ಕರೆತರಲು ಪ್ರಯತ್ನ ಇವರ ಹೆಸರು ಕನಕಪ್ಪ ದಾಸರ್. ಸುರಪುರ ತಾಲೂಕಿನ ಮಲ್ಲಾಬಿ ಗ್ರಾಮದವರು. ಇಪತ್ತೇಳು ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಕನಕಪ್ಪ ಸದ್ಯ ತಾಲೂಕಿನ ಅಲ್ಲಿಪುರ ಬಳಿಯ ವೆಂಕಟೇಶ ನಗರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಲೆಗೆ ಬಂದು ಹಾಜರಾತಿ ತೆಗೆದುಕೊಂಡು ಹಿಂತಿರುಗುವ ಜಾಯಮಾನದವರಲ್ಲ. ಶಾಲೆಗೆ ಬಂದ ತಕ್ಷಣ ಮಕ್ಕಳ ಹಾಜರಾತಿ ನೋಡಿ, ಗೈರಾದ ಮಕ್ಕಳನ್ನು ಮತ್ತೆ ಕರೆ ತರಲು ಪ್ರಯತ್ನಿಸುತ್ತಿದ್ದಾರೆ. ವಿಶೇಷ ಎಂದರೆ ಮಕ್ಕಳು ಮನೆಯಲ್ಲೇ ಇರಲಿ, ಇಲ್ಲ ಕೆಲಸಕ್ಕೆ ಅಂತಾ ಜಮೀನಿಗೆ ಹೋಗಿರಲಿ ಅಲ್ಲೇ ಹೋಗಿ ಅವರನ್ನು ಶಾಲೆಗೆ ಕರೆ ತರುತ್ತಾರೆ. ನಿತ್ಯ ಹಾಜರಾತಿ ಚೆಕ್ ಮಾಡುವ ಮೇಷ್ಟ್ರು ಶಾಲೆಗೆ ಗೈರಾದ ಮಕ್ಕಳನ್ನು ಹುಡುಕಿಕೊಂಡು ಹೋಗಿ ಮತ್ತೆ ಶಾಲೆಗೆ ಕರೆ ತರುತ್ತಾರೆ. ಪೋಷಕರು ಎಷ್ಟೇ ಕೆಲಸವನ್ನು ನೀಡಿದರೂ ಕೂಡಾ ಮೇಷ್ಟ್ರು, ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಯತ್ತ ಕರೆ ತರಲು ಮುಂದಾಗುತ್ತಾರೆ. ಗುಡ್ಡಕ್ಕೆ, ಜಮೀನುಗಳಿಗೆ ಹಾಗೂ ತಾಂಡದ ಮನೆಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಾರೆ ಕನಕಪ್ಪ ಮೇಷ್ಟ್ರು.

ಭಿಕ್ಷೆ ಬೇಡುತ್ತಿದ್ದ ತಾತ ಶಿಕ್ಷಕ ಕನಕಪ್ಪರವರ ಈ ನಿಸ್ವಾರ್ಥ ಸೇವೆಗೆ ಶಾಲೆ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಮೆಚ್ಚಿಕೊಂಡಿದ್ದಾರೆ. ಕನಕಪ್ಪ ಬಡತನ ಕುಟುಂಬದಲ್ಲಿ ಬೆಳೆದವರು, ಅಸಲಿಗೆ ಕನಕಪ್ಪರ ತಾತ ಭಿಕ್ಷೆ ಬೇಡುತ್ತಿದ್ದರಂತೆ. ಹೀಗಾಗಿ ಅವರಿಗೆ ಬಡತನದ ಹಸಿವಿನ ಅರಿವಿದೆ. ಶಿಕ್ಷಣದಿಂದಲೇ ಬಡತನ ನಿರ್ಮೂಲನೆ ಸಾಧ್ಯ ಎಂದು ಅರಿತಿರುವ ಮೇಷ್ಟ್ರು, ಮಕ್ಕಳು ಶಿಕ್ಷಣದಿಂದ ವಿಮುಖರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ವಲಸಿಗರೇ ಜಾಸ್ತಿ, ಅದರಲ್ಲೂ ತಾಂಡಗಳಂತೂ ನೂರಕ್ಕೆ ಎಂಬತ್ತರಷ್ಟು ಜನರು ಗೂಳೆ ಹೋಗುತ್ತಾರೆ. ಮಕ್ಕಳನ್ನು ಬಿಟ್ಟು ತಂದೆ ತಾಯಿ ಮುಂಬೈ, ಹೈದರಾಬಾದ್​ಗೆ ತೆರಳುತ್ತಾರೆ. ಹೀಗಾಗಿ ಚಿಕ್ಕಮಕ್ಕಳಿಗೆ ಮನೆಯಲ್ಲಿಯೇ ಅಜ್ಜ ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ. ಹೀಗಾಗಿ ಮಕ್ಕಳು ಮನೆಗೆ ಕಟ್ಟಿಗೆ ತರಲು ಗುಡ್ಡಕ್ಕೆ ತೆರಳುತ್ತಾರೆ. ಇಂಥ ಸಂದರ್ಭದಲ್ಲಿ ಗುಡ್ಡಕ್ಕೆ ಹೋಗಿ ಕೂಗು ಹಾಕುವ ಮೂಲಕ ಕನಕಪ್ಪ ಮೇಷ್ಟ್ರು ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುತ್ತಾರೆ.

ಇದನ್ನೂ ಓದಿ: ಇದು ನಿವೃತ್ತ ಮೇಷ್ಟ್ರು ಮನೆ ಮೇಲ್ಛಾವಣಿಯನ್ನೇ ಗಾರ್ಡನ್ ಮಾಡಿದ ಕಥೆ..!

ನೆಚ್ಚಿನ ಗುರು ಶಿಕ್ಷಕರು ಮಾಡುವ ಕೆಲಸಕ್ಕೆ ಮತ್ತು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯಿಂದ ವಿದ್ಯಾರ್ಥಿಗಳು ಕನಕಪ್ಪ ಮೇಷ್ಟ್ರು ಅಂದರೆ ಸಾಕು ಎಲ್ಲಿಲ್ಲದ ಪ್ರೀತಿ. ಶಾಲೆ ಬಿಟ್ಟವರನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಮತ್ತೆ ಶಾಲೆ ಕಡೆಗೆ ಮುಖ ಮಾಡುವಂತೆ ಮಾಡುತ್ತಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ಕನಕಪ್ಪರವರ ಉದ್ದೇಶ. ಮೇಷ್ಟ್ರು ಕಾರ್ಯಕ್ಕೆ ವಿದ್ಯಾರ್ಥಿಗಳು ಗೌರವ ಕೊಡುವ ಜೊತೆಗೆ ನಮ್ಮ ನೆಚ್ಚಿನ ಗುರುಗಳು ಅಂತಾರೆ.

ಮಕ್ಕಳು ಶಾಲೆಗೆ ಬಂದಿಲ್ಲವೆಂದರೆ ನಿರಾಸಕ್ತಿ ಅಥವಾ ಅನಕ್ಷರತೆ ಕಾರಣವಲ್ಲ. ಮಕ್ಕಳು ಜಾತ್ರೆಗೋ ಅಥವಾ ಇನ್ನೆಲ್ಲೋ ಹೋಗಿರುತ್ತಾರೆ. ಮಕ್ಕಳು ಹೋಗಿರುವ ಸ್ಥಳಕ್ಕೆ ಹೋಗಿ ಅವರಿಗೆ ಮನವೊಲಿಸಿ ಕರೆದುಕೊಂಡು ಬರುತ್ತೇನೆ. ಬೆಟ್ಟದಲ್ಲಿ ಕಟ್ಟಿಗೆ ತರಲು, ಹತ್ತಿ ಬಿಡಿಸಲು ಮಕ್ಕಳು ಹೋಗಿರುತ್ತಾರೆ. ಅಂತವರನ್ನು ಹುಡುಕಿ ತಂದು ಶಾಲೆಯಲ್ಲಿ ಕುರಿಸುತ್ತೇನೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಕನಕಪ್ಪ ದಾಸರ್ ತಿಳಿಸಿದ್ದಾರೆ.

ತರಗತಿ ಶಿಕ್ಷಕರು ಹಾಜರಾತಿ ಹಾಕುತ್ತಾರೆ. ಬಳಿಕ ಯಾರು ಶಾಲೆಗೆ ಬಂದಿಲ್ಲವೆಂದು ಕನಕಪ್ಪ ಮೇಷ್ಟ್ರುಗೆ ಮಾಹಿತಿ ನೀಡುತ್ತಾರೆ. ಬಳಿಕ ಮೇಷ್ಟ್ರು ಮಕ್ಕಳು ಎಲ್ಲಿಗೆ ಹೋಗಿರುತ್ತಾರೋ ಅಲ್ಲಿಗೆ ಹೋಗಿ ವಾಪಸ್ ಶಾಲೆಗೆ ಕರೆದುಕೊಂಡು ಬರುತ್ತಾರೆ. ಮೇಷ್ಟ್ರಿಗೆ ನಾವು ಸಾಥ್ ನೀಡಿ ನಮ್ಮ ಸಹಪಾಠಿಗಳನ್ನು ಶಾಲೆಗೆ ಕರೆ ತರುತ್ತೇವೆ ಎಂದು ವಿದ್ಯಾರ್ಥಿನಿ ಪಿಂಕಿ ಹೇಳಿದರು.

ಇದನ್ನೂ ಓದಿ: ಕಬ್ಬಿಣದ ಕಡಲೆ ಎಂದೇ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ, ದತ್ತಾ ಮೇಷ್ಟ್ರು ಟಿಪ್ಸ್ ಕೊಟ್ಟಿದ್ದಾರೆ ವೀಕ್ಷಿಸಿ

ರಾಜ್ಯೋತ್ಸವ ಮಾಸಾಚರಣೆ ಸಮಯದಲ್ಲಿ ಈ ಶಿಕ್ಷಕಿಗೆ ಒಂದು ಅಭಿನಂದನೆ ಸಲ್ಲಿಸೋಣ..!

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ