BESCOM ಸಿಬ್ಬಂದಿ ಎಡವಟ್ಟು: ಸುಗ್ಗಿ ಹಬ್ಬದಂದು ರಾಗಿ ಬಣವೆ ಬೆಂಕಿಗಾಹುತಿ

|

Updated on: Jan 14, 2021 | 7:03 PM

ಬೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದ ರಾಗಿ ಬಣವೆ ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಪಾರ್ಶ್ವಗಾನಹಳ್ಳಿಯಲ್ಲಿ ನಡೆದಿದೆ.

BESCOM ಸಿಬ್ಬಂದಿ ಎಡವಟ್ಟು: ಸುಗ್ಗಿ ಹಬ್ಬದಂದು ರಾಗಿ ಬಣವೆ ಬೆಂಕಿಗಾಹುತಿ
ಬೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದ ರಾಗಿ ಬಣವೆ ಬೆಂಕಿಗಾಹುತಿ
Follow us on

ಕೋಲಾರ: ಬೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದ ರಾಗಿ ಬಣವೆ ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಪಾರ್ಶ್ವಗಾನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಮುನಿಯಪ್ಪ ಎಂಬುವವರಿಗೆ ಸೇರಿದ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡಿ ರಾಶಿ ಮಾಡಲು ಬಣವೆ ಹಾಕಿದ್ದರು. ಆದರೆ, ಬಣವೆಯ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಕಟಾವು ಮಾಡಿದ್ದ ಬೆಳೆ ಸಂಪೂರ್ಣವಾಗಿ ಸುಟ್ಟ ಭಸ್ಮವಾಗಿದೆ.

ಹೀಗಾಗಿ, ಸುಮಾರು ಐದು ಲಕ್ಷ ಮೌಲ್ಯದ ರಾಗಿ ಹಾಗೂ ಹುಲ್ಲು ಬೆಂಕಿಗಾಹುತಿಯಾಗಿದೆ. ಇಷ್ಟಾದರೂ ಸ್ಥಳಕ್ಕೆ ಬಾರದ ಬೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೀರಸಂದ್ರ ಬಳಿ.. ಕುಂಟೆಯಲ್ಲಿ ಮುಳುಗಿ ವ್ಯಕ್ತಿ ಸಾವು

Published On - 7:01 pm, Thu, 14 January 21