ಬಂಧನದ ಅವಮಾನ, ಆರ್ಥಿಕ ಸಂಕಷ್ಟ: ‘ಅನನ್ಯ’ ಮನೆ ಮಾರಾಟಕ್ಕಿಟ್ಟ ರಾಗಿಣಿಯ ಅಪ್ಪ

ಬೆಂಗಳೂರು: ಅವರೋ ಗೌರವಾನ್ವಿತ ಸೇನಾಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಜೀವ. ಆದ್ರೆ ಅವರೀಗ ಡ್ರಗ್ಸ್​ ಸೇವನೆ ದಂಧೆಯಲ್ಲಿ ಸಿಲುಕಿ ಜೈಲುಪಾಲಾಗಿರುವ ತಮ್ಮ ಮಗಳನ್ನು ನೋಡುವ ದುರಾದೃಷ್ಟ ಒದಗಿ ಬಂದಿದೆ.  ಡ್ರ ಗ್ಸ್ ಕೇಸ್‌ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಹಿನ್ನೆಲೆಯಲ್ಲಿ ಅವಮಾನದಿಂದ ಆಕೆಯ ಪೋಷಕರು ಮಾನ ಹೋಯ್ತು, ಮನೆಯೂ ಹೋಗಲಿ, ಇನ್ಯಾಕೆ ನಮಗೆ ಅದರ ಹಂಗು ಅಂತಾ ಬಂಗಲೆಯಂತಾ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಗಿಣಿ ತಂದೆ, ನಿವೃತ್ತ ಸೇನಾಧಿಕಾರಿ ರಾಕೇಶ್ ದ್ವಿವೇದಿ ಅವರು […]

ಬಂಧನದ ಅವಮಾನ, ಆರ್ಥಿಕ ಸಂಕಷ್ಟ: ‘ಅನನ್ಯ’ ಮನೆ ಮಾರಾಟಕ್ಕಿಟ್ಟ ರಾಗಿಣಿಯ ಅಪ್ಪ
Updated By: ಸಾಧು ಶ್ರೀನಾಥ್​

Updated on: Sep 15, 2020 | 2:07 PM

ಬೆಂಗಳೂರು: ಅವರೋ ಗೌರವಾನ್ವಿತ ಸೇನಾಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯ ಜೀವ. ಆದ್ರೆ ಅವರೀಗ ಡ್ರಗ್ಸ್​ ಸೇವನೆ ದಂಧೆಯಲ್ಲಿ ಸಿಲುಕಿ ಜೈಲುಪಾಲಾಗಿರುವ ತಮ್ಮ ಮಗಳನ್ನು ನೋಡುವ ದುರಾದೃಷ್ಟ ಒದಗಿ ಬಂದಿದೆ.  ಡ್ರ ಗ್ಸ್ ಕೇಸ್‌ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಹಿನ್ನೆಲೆಯಲ್ಲಿ ಅವಮಾನದಿಂದ ಆಕೆಯ ಪೋಷಕರು ಮಾನ ಹೋಯ್ತು, ಮನೆಯೂ ಹೋಗಲಿ, ಇನ್ಯಾಕೆ ನಮಗೆ ಅದರ ಹಂಗು ಅಂತಾ ಬಂಗಲೆಯಂತಾ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಗಿಣಿ ತಂದೆ, ನಿವೃತ್ತ ಸೇನಾಧಿಕಾರಿ ರಾಕೇಶ್ ದ್ವಿವೇದಿ ಅವರು ತಮ್ಮ ಮಾಲೀಕತ್ವದ ಫ್ಲ್ಯಾಟ್ ಅನ್ನು ಸೇಲ್​ಗೆ ಇಟ್ಟಿದ್ದಾರೆ. ಒಂದು ಕಡೆ ಪುತ್ರಿಯ ಬಂಧನದ ಅವಮಾನ. ಇನ್ನೊಂದು ಕಡೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ನಟಿಯ ಪೋಷಕರಿಗೆ.

‘ಅನನ್ಯ’ ಮನೆ ಮಾರಾಟಕ್ಕೆ:
ಹಾಗಾಗಿ, ತಾವು ಪ್ರೀತಿಯಿಂದ ಖರೀದಿಸಿದ್ದ 3 BHK ಅಪಾರ್ಟ್​ಮೆಂಟ್​ ಅನ್ನು ರಾಕೇಶ್, ಮಾರಾಟಕ್ಕೆ ಇಟ್ಟು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ಅನನ್ಯ ಅಪಾರ್ಟ್ಮೆಂಟ್​ನಲ್ಲಿರೋ ಫ್ಲ್ಯಾಟ್​ ಅನ್ನು ರಾಕೇಶ್ ದ್ವಿವೇದಿ ಸೆಪ್ಟೆಂಬರ್ 8 ರಂದು 2 ಕೋಟಿ ರೂಪಾಯಿ ಫೇಸ್ ವ್ಯಾಲ್ಯೂಗೆ ನಿಗದಿಪಡಿಸಿ,  ಸೇಲ್‌ಗಿಟ್ಟಿದ್ದಾರೆ.