ರಾಯಚೂರು ನ.30: ರಾಯಚೂರು ಶಾಖೋತ್ಪನ್ನ ಕೇಂದ್ರ (RTPS) ಈ ವರ್ಷ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದೆ. ವಿದ್ಯುತ್ (Electricity) ಸ್ಥಾವರವು 2023ರ ನವೆಂಬರ್ 29 ರವರೆಗೆ 43.27 ಮಿಲಿಯನ್ ಯೂನಿಟ್ (MU) ವಿದ್ಯುತ್ ಉತ್ಪಾದನೆ ಮಾಡಿದೆ. ಘಟಕ 1 ಆಗಸ್ಟ್ 21 ರಿಂದ ನವೆಂಬರ್ 29ರ ವರೆಗೆ 100 ದಿನಗಳ ಕಾಲ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ. ಇದು ಆರ್ಟಿಪಿಎಸ್ ಅಧಿಕಾರಿಗಳ ಸಂತೋಷಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಶೇ 54.08 ರಷ್ಟು ಘಟಕ 1ರ ಸಾಮಾರ್ಥ್ಯ ಹೆಚ್ಚಾಗಿದೆ ಎಂದು ಆರ್ಟಿಪಿಎಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ತಿಳಿಸಿದರು.
ಬೇಡಿಕೆ ಇಲ್ಲದ ಕಾರಣ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಒಂದು, ಎರಡು, ಮೂರು ಮತ್ತು ಆರನೇ ಘಟಕಗಳು ನಿಲುಗಡೆಯಾಗಿದ್ದವು. ರಾಜ್ಯದಲ್ಲಿ ಮಳೆ ಕೊರೆತೆಯಾಗಿ ಬರಗಾಲ ಆವರಿಸಿದ್ದು ಜಲ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ನಿಂದ ಈ ನಾಲ್ಕರು ಘಟಕಗಳನ್ನು ಆರಂಭಿಸಲಾಗಿದೆ. ತಾತ್ಕಾಲಿಕವಾಗಿ ಘಟಕಗಳನ್ನು ಸ್ಥಗಿತಗೊಂಡ ನಂತರ ಸಹ ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆ ಗಮನಾರ್ಹವಾಗಿದೆ.
ಇದನ್ನೂ ಓದಿ: ಮೂರು ವರ್ಷಗಳಲ್ಲಿ 8,000 ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿದ ಬೆಸ್ಕಾಂ
ರಾಯಚೂರು ಶಾಖೋತ್ಪನ್ನ ಕೇಂದ್ರ ರಾಯಚೂರು ಜಿಲ್ಲೆಯ ಯದ್ಲಾಪುರ ಡಿ (ಶಕ್ತಿನಗರ)ದಲ್ಲಿದೆ. ಇದು ಕಲ್ಲಿದ್ದಲು ಆಧಾರಿತ ವಿದ್ಯುತ್ ಶಕ್ತಿ ಕೇಂದ್ರವಾಗಿದೆ. ಒಟ್ಟು 8 ಉತ್ಪಾದನಾ ಘಟಕಗಳಿವೆ. ಇದನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ನಿರ್ವಹಿಸುತ್ತದೆ ಮತ್ತು ರಾಜ್ಯದಲ್ಲಿ ಸ್ಥಾಪಿಸಲಾದ ಮೊದಲ ಉಷ್ಣ ವಿದ್ಯುತ್ ಸ್ಥಾವರವಾಗಿದೆ. ವಿದ್ಯುತ್ ಕೇಂದ್ರವು 1985 ರಿಂದ ವಿವಿಧ ಅವಧಿಗಳಲ್ಲಿ ಕಾರ್ಯಾರಂಭ ಮಾಡಿತು. ಇದು ಕರ್ನಾಟಕದಲ್ಲಿ ಉತ್ಪತ್ತಿಯಾಗುವ ಒಟ್ಟು ವಿದ್ಯುತ್‌ನಲ್ಲಿ ಆರ್ಟಿಪಿಎಸ್ನದ್ದು ಶೇ 70 ರಷ್ಟು ಪಾತ್ರವಿದೆ.
ಘಟಕ 1 ರಿಂದ 7 ರವರೆಗೆ, ಪ್ರತಿ ದಿನಕ್ಕೆ 5.04 MU ವಿದ್ಯುತ್ ಅನ್ನು ಉತ್ಪಾದಿಸಬಹುದು. ಮತ್ತು ಘಟಕ 8 ದಿನಕ್ಕೆ 6 MU ಉತ್ಪಾದಿಸಬಹುದು, ಆದ್ದರಿಂದ ಸ್ಥಾವರವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದಾಗ ದಿನಕ್ಕೆ 41.28 MU ಶಕ್ತಿಯನ್ನು ಉತ್ಪಾದಿಸುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Thu, 30 November 23