ಏರ್ಪೋರ್ಟ್ ನಿರ್ಮಾಣಕ್ಕಾಗಿ ನಿಜಾಮರ ಕಾಲದ ಊರನ್ನು ಸಿನಿಮಾ ಶೈಲಿಯಲ್ಲಿ ಖಾಲಿ ಮಾಡಿಸಲು ಮುಂದಾದ ಜಿಲ್ಲಾಡಳಿತ, ಕೆರಳಿದ ಸ್ಥಳೀಯರು
ರಾಯಚೂರು ಜಿಲ್ಲಾಡಳಿತ ಏರ್ಪೋರ್ಟ್ ಮೀಸಲು ಸ್ಥಳವನ್ನ ಕಾಮಗಾರಿಗೆ ಹ್ಯಾಂಡ್ ಓವರ್ ಮಾಡಲೇಬೇಕಿದೆ. ಅಲ್ಲಿನ ಜನ ಸ್ಪಂದಿಸಬೇಕು ಅಂತಾ ಮನವಿ ಮಾಡಲಾಗಿದೆ. ಆದ್ರೆ ಏಕಾಏಕಿ ಮನೆಯಿಂದ ಹೋದ್ರೆ ಆ ಜನ ಎಲ್ಲಿ ಹೋಗ್ತಾರೆ. .ಏನು ಮಾಡ್ಬೇಕು ಅನ್ನೋದು ಅಲ್ಲಿನ ಜನರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.
ಥೇಟ್ ಸಿನಿಮಾ ಶೈಲಿಯ ಕಥೆ ಅದು.. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಮಹರ್ಷಿ ಸಿನೆಮಾದಲ್ಲಿ ಇಡೀ ಊರನ್ನ ಡೆಮಾಲಿಶ್ ಮಾಡೋ ರೀತಿ ಗಡಿ ಜಿಲ್ಲೆಯಲ್ಲೂ ಅಂಥದ್ದೇ ಪ್ರಸಂಗ ಎದುರಾಗಿದೆ.. ಹುಟ್ಟೂರು ಖಾಲಿ ಮಾಡಲು ಜನ ಕಣ್ಣೀರಿಡ್ತಿದ್ದಾರೆ. ಹೌದು.. 218 ಕೋಟಿ ರೂ ವೆಚ್ಚದಲ್ಲಿ ರಾಯಚೂರು ತಾಲ್ಲೂಕಿನ ಯರಮರಸ್ ಬಳಿ ಏರ್ಪೋರ್ಟ್ ಕಾಮಗಾರಿ (Airport construction) ಶುರುವಾಗಿದೆ. 325 ಎಕರೆ ಜಮೀನನ್ನ ಏರ್ಪೋರ್ಟ್ಗಾಗಿ ಐಡೆಂಟಿಫೈ ಮಾಡಲಾಗಿದ್ದು, 325 ಎಕರೆ ಪೈಕಿ 304 ಎಕರೆ ಸ್ವಾಧೀನವಾಗಿದ್ದು, 21 ಎಕರೆ ಜಮೀನು ಭೂಸ್ವಾಧೀನವಾಗಿಲ್ಲ..ಭೂ ಸ್ವಾಧೀನವಾಗದ ಈ 21 ಎಕರೆ ಪ್ರದೇಶದಲ್ಲೇ ರಾಯಚೂರು ತಾಲ್ಲೂಕಿನ ದಂಡು ಗ್ರಾಮವಿದೆ. ಈ ಗ್ರಾಮದಲ್ಲಿ ಸುಮಾರು 200 ಕ್ಕು ಹೆಚ್ಚು ಮನೆಗಳಿದ್ದು ಸಹಸ್ರಾರು ಜನ ಇಲ್ಲಿ ವಾಸವಿದ್ದಾರೆ. ಇದೇ ಊರಿನ 108 ಮನೆಗಳನ್ನ ಈಗ ಜಿಲ್ಲಾಡಳಿತ (raichur District administration) ಗುರುತಿಸಿ ತೆರುವುಗೊಳಿಸಲು ನೋಟಿಸ್ ನೀಡಿದೆ.. ಅದೂ ಇಂದು ನವೆಂಬರ್ 30 ಕ್ಕೆ ಡೆಡ್ಲೈನ್ ನೀಡಿದೆ.
ಹೌದು..ಜಿಲ್ಲಾಡಳಿತ ನೋಟಿಸ್ ನೀಡಿರೊ ಈ ದಂಡು ಗ್ರಾಮದ 108 ಮನೆಗಳು ಏರ್ಪೋರ್ಟ್ಗಾಗಿ ಮೀಸಲಿರೊ ಸ್ಥಳದಲ್ಲಿವೆಯಂತೆ.. ಅಂದ್ರೆ ಅವನ್ನೆಲ್ಲಾ ಸರ್ಕಾರಿ ಜಮೀನಿನಲ್ಲೇ ನಿರ್ಮಿಸಲಾಗಿದೆ ಅಂತ ಅಧಿಕಾರಿಗಳು ಹೇಳ್ತಿದ್ದಾರೆ.. ಆದ್ರೆ ಇಲ್ಲಿನ ನಿವಾಸಿಗಳ ವಾದವೇ ಬೇರೆ.. ಸುಮಾರು 70-80 ವರ್ಷಗಳಿಂದ ಅವರ ಅಜ್ಜ, ಮುತ್ತಜ್ಜ ಕಾಲದಿಂದಲೂ ಇಲ್ಲೇ ವಾಸವಿದ್ದೇವೆ.. ಅಂದ್ರೆ ನಿಜಾಮರ ಆಳ್ವಿಕೆ ನಡೆಸಿದ ಕಾಲದಿಂದಲೂ ನಾವೆಲ್ಲಾ ಇಲ್ಲೇ ಇರೋದು.. ಸರ್ಕಾರಕ್ಕೆ ಟ್ಯಾಕ್ಸ್ ಕಟ್ತಿವಿ, ಕರೆಂಟ್ ಬಿಲ್ ಕಟ್ತಿವಿ ಎಲ್ಲಾ ಮಾಡ್ತೇವೆ.
ಅಷ್ಟೇ ಅಲ್ಲ ಇಲ್ಲಿಯವರೆಗೆ ನಾವು ಸರ್ಕಾರಿ ಜಾಗದಲ್ಲಿದ್ವಿ ಅನ್ನೋದು ಅಧಿಕಾರಿಗಳಿಗೆ ಗೊತ್ತಿರ್ಲಿಲ್ವ..ಈಗ್ಯಾಕೆ ಈ ಬಗ್ಗೆ ಡೆಡ್ಲೈನ್ ಕೊಡ್ತಾರೆ..ಸೂಕ್ತ ಸೂರು ಕಲ್ಪಿಸಿದರೇ ಮಾತ್ರ ಮನೆ ಖಾಲಿ ಮಾಡ್ತೇವೆ..ಇಲ್ಲ ಇಲ್ಲೇ ಸಾಯ್ತೇವೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ತೆರವು ಕಾರ್ಯಕ್ಕೆ ಜನರ ವಿರೋಧ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಪ್ರತಿಕ್ರಿಯಿಸಿದ್ದಾರೆ..ಒಂದು ವರ್ಷದ ಹಿಂದೆ ಏರ್ಪೋರ್ಟ್ ಮೀಸಲು ಜಾಗದಲ್ಲಿ ಸರ್ವೆ ಮಾಡಿ 108 ಮನೆ ಐಡೆಂಟಿಫೈ ಮಾಡಿ ನೋಟಿಸ್ ಕೊಡಲಾಗಿದೆ..ಸ್ಪೇಷನ್ ಪ್ಯಾಕೇಜ್ ಅಂತ ಅಲ್ಲಿನ ಜನರಿಗೆ ಪುನರ್ವಸತಿಗಾಗಿ ಹಣ ಕಾಯ್ದಿರಿಸಿದ್ದೇವೆ..ಅವರ ಖಾತೆಗೆ ಹಣ ಜಮೆ ಆಗತ್ತೆ..100 ಪರ್ಸೆಂಟ್ ಪರಿಹಾರ ಸಿಕ್ಕೆ ಸಿಗತ್ತೆ..ಮನೆಯಿಲ್ಲದೇ ಇರೋರಿಗೆ ಸರ್ಕಾರದಂದ ಮನೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತೆ..ತತಕ್ಷಣಕ್ಕೆ ವಸತಿ ಬದಲು ಪುನರ್ವಸತಿಗೆ ಪರಿಹಾರದ ಹಣ ನೀಡಲಾಗುತ್ತೆ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ: Operation Polo – ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ 13 ತಿಂಗಳು ತಡವಾಗಿ ಸ್ವಾತಂತ್ರ್ಯ ಪಡೆಯಿತು! ಯಾಕೆ ಗೊತ್ತಾ?
ಇತ್ತ ಹೀಗೆ ಜಿಲ್ಲಾಡಳಿತ ಮಾತ್ರ ಏರ್ಪೋರ್ಟ್ ಮೀಸಲು ಸ್ಥಳವನ್ನ ಕಾಮಗಾರಿಗೆ ಹ್ಯಾಂಡ್ ಓವರ್ ಮಾಡಲೇಬೇಕಿದೆ..ಅಲ್ಲಿನ ಜನ ಸ್ಪಂದಿಸಬೇಕು ಅಂತಾ ಮನವಿ ಮಾಡಲಾಗಿದೆ. ಆದ್ರೆ ಏಕಾಏಕಿ ಮನೆಯಿಂದ ಹೋದ್ರೆ ಆ ಜನ ಎಲ್ಲಿ ಹೋಗ್ತಾರೆ. .ಏನು ಮಾಡ್ಬೇಕು ಅನ್ನೋದು ಅಲ್ಲಿನ ಜನರ ನಿದ್ದೆಗೆಡಿಸಿದ್ದಂತು ಸುಳ್ಳಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ