ರಾಯಚೂರು: ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ತಾಹಿರ್ ಅಹ್ಮದ್ (42) ಎಂಬ ವ್ಯಕ್ತಿ ಆಸ್ಪತ್ರೆಯ 6 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ತಾಹಿರ್ ಅಹ್ಮದ್ ಎರಡು ಮದುವೆಯಾಗಿ, ಇಬ್ಬರಿಗೂ ಡಿವೋರ್ಸ್ ನೀಡಿದ್ದ. ವಿಪರೀತ ಕುಡಿತದ ಚಟ ಹಿನ್ನೆಲೆಯಲ್ಲಿ ಮೊದಲ ಪತ್ನಿ ಪತಿ ತಾಹಿರ್ ಗೆ ಡಿವೋರ್ಸ್ ನೀಡಿದ್ದ. ಇದಾದ ಬಳಿಕ ಮತ್ತೊಂದು ಮದುವೆಯಾಗಿದ್ದ ತಾಹಿರ್ ಆಗಲೂ ಎರಡನೇ ಪತ್ನಿ ಇದೇ ಕಾರಣಕ್ಕೆ ಡಿವೋರ್ಸ್ ಕೊಟ್ಟಿದ್ದರು.
ಇಬ್ಬರು ಹೆಂಡತಿಯರು ದೂರವಾದ ಬಳಿಕ ಹೆಚ್ಚಿನ ಮದ್ಯಪಾನ ಚಟಕ್ಕೆ ಬಿದ್ದ ತಾಹಿರ್, ಏಕಾಂಗಿ ಜೀವನದಿಂದ ಮಾನಸಿಕವಾಗಿ ಕುಗ್ಗಿದ್ದ. ಕುಡಿತದಿಂದ ತಾಹಿರ್ ತನ್ನ ಲಿವರ್ ಮತ್ತು ಕಿಡ್ನಿಯನ್ನು ಹಾಳುಮಾಡಿಕೊಂಡಿದ್ದ. ಹೀಗಾಗಿ ಎರಡು ದಿನಗಳ ಹಿಂದೆ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲೂ ಏಕಾಂಕಿಯಾಗಿದ್ದ ತಾಹಿರ್ ಕೊನೆಗೆ ಕುಡಿತದಿಂದ ಜೀವನ ಹಾಳಾಯ್ತು ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಮ್ಸ್ ಆಸ್ಪತ್ರೆಯ 6 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:
Ayush Badoni: ಮಹಿಳೆಯ ತಲೆಗೆ ಬಡಿದ ಜೂ. ಎಬಿಡಿ ಬದೋನಿ ಸಿಡಿಸಿದ ಸಿಕ್ಸ್: ಮುಂದೇನಾಯಿತು ನೋಡಿ
ಇದನ್ನು ಓದಿ:
ಸಮಂತಾಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ