ಆ ಯುವ ಅಧಿಕಾರಿಯ ಪ್ರಾಮಾಣಿಕ ಪ್ರಯತ್ನದಿಂದ ರಾಯಚೂರಿನಲ್ಲಿ ಒಂದಷ್ಟು ಹಿರಿಯ ಜೀವಗಳಿಗೆ ನೆಮ್ಮದಿ ಬದುಕು ವಾಪಸ್ ಸಿಕ್ಕಿದೆ!

| Updated By: ಸಾಧು ಶ್ರೀನಾಥ್​

Updated on: Feb 06, 2023 | 11:05 AM

ಇತ್ತೀಚೆಗೆ ಹಿರಿಯ ನಾಗರಿಕರ ಮೇಲಿನ ದಬ್ಬಾಳಿಕೆ, ದರ್ಪದಂತಹ ಕೃತ್ಯಗಳು ಹೆಚ್ಚಾಗ್ತಿವೆ. ಹೆತ್ತ ಮಕ್ಕಳು, ಸೊಸೆಯಂದಿರಿಂದಲೇ ಹಿರಿಯ ಜೀವಗಳು ನರಳುತ್ತಿವೆ. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿಯೂ ನಿತ್ಯ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದಂತಹ ಕೇಸ್​ಗಳ ಸಂಖ್ಯೆಯೂ ಹೆಚ್ಚಾಗ್ತಿವೆ.

ಆ ಯುವ ಅಧಿಕಾರಿಯ ಪ್ರಾಮಾಣಿಕ ಪ್ರಯತ್ನದಿಂದ ರಾಯಚೂರಿನಲ್ಲಿ ಒಂದಷ್ಟು ಹಿರಿಯ ಜೀವಗಳಿಗೆ ನೆಮ್ಮದಿ ಬದುಕು ವಾಪಸ್ ಸಿಕ್ಕಿದೆ!
ಸೊಸೆ ಕಿತ್ತಾಟ, ಮಕ್ಕಳ ಆರ್ಭಟಕ್ಕೆ ಮನೆ ಹಿರಿಯರ ಆಸ್ತಿಪಾಸ್ತಿಯೂ ಉಡೀಸ್
Follow us on

ಅದು ಹಿಂದುಳಿದ ಜಿಲ್ಲೆ.. ಅಲ್ಲಿ ಕೌಟುಂಬಿಕ ಕಲಹದಂತಹ (family dispute) ಕೇಸ್​ಗಳು ಮಿತಿ ಮೀರಿವೆ.. ಮಕ್ಕಳಿಂದ ಟಾರ್ಚರ್, ಸೊಸೆಯಂದಿರಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದ ಹಿರಿಯ ನಾಗರಿಕರು ನಿತ್ಯ ಒಂದಲ್ಲ ಒಂದು ಕುಕೃತ್ಯಕ್ಕೆ (torture) ಬಲಿಯಾಗಿ ಆಸ್ತಿಪಾಸ್ತಿ (property) ಕಳೆದುಕೊಂಡು ಬೀದಿಗೆ ಬೀಳ್ತಿದ್ದಾರೆ. ಹೀಗೆ ಹಿರಿಯ ನಾಗರಿಕರು (senior citizens) ಕಾಲಲ್ಲಿ ಹಾಕಿಕೊಳ್ಳಲು ಚಪ್ಪಲಿಯಿಲ್ಲದೆ.. ಕೆಲವರು ಹಾಕಿದ ಚಪ್ಪಲಿ ಸವೆಯುತ್ತಿದ್ದರೂ ನ್ಯಾಯ ಮಾತ್ರ ಸಿಗ್ತಿಲ್ಲ.. ಇನ್ನು ಹಲವರು ನಿತ್ಯ ನ್ಯಾಯಕ್ಕಾಗಿ ಪರಿತಪಿಸುತ್ತಾ ಅಧಿಕಾರಿಗಳ ಕಚೇರಿ ಎದುರು ಗಂಟೆಗಟ್ಟಲೇ ಕೂತು ಕಣ್ಣೀರಿಡ್ತಿದ್ದಾರೆ. ಅಷ್ಟಕ್ಕೂ ಹೀಗೆ ಹಿರಿಯ ನಾಗರಿಕರು ಕಣ್ಣೀರಿಡ್ತಿರೋದು ಬಿಸಿಲುನಾಡು ರಾಯಚೂರಿನಲ್ಲಿ (raichur).

ಹೌದು.. ಇತ್ತೀಚೆಗೆ ಹಿರಿಯ ನಾಗರಿಕರ ಮೇಲಿನ ದಬ್ಬಾಳಿಕೆ, ದರ್ಪದಂತಹ ಕೃತ್ಯಗಳು ಹೆಚ್ಚಾಗ್ತಿವೆ. ಹೆತ್ತ ಮಕ್ಕಳು, ಸೊಸೆಯಂದಿರಿಂದಲೇ ಹಿರಿಯ ಜೀವಗಳು ನರಳುತ್ತಿವೆ. ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿಯೂ ನಿತ್ಯ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದಂತಹ ಕೇಸ್​ಗಳ ಸಂಖ್ಯೆಯೂ ಹೆಚ್ಚಾಗ್ತಿವೆ. ಪಿತ್ರಾರ್ಜಿತ ಆಸ್ತಿ ಸೇರಿ ಇನ್ನಿತರ ಆಸ್ತಿ ಮೇಲೆ ಸೊಸೆಯಂದಿರು, ಗಂಡು ಮಕ್ಕಳ ದಬ್ಬಾಳಿಕೆ ಹೆಚ್ಚಾಗ್ತಿವೆ. ಬಲವಂತವಾಗಿ ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಿಕೊಂಡು ಆಸ್ತಿ ಕಿತ್ತುಕೊಳ್ತಿದ್ದಾರೆ.

ಒಂದು ವೇಳೆ ಆಸ್ತಿ ಬರೆದು ಕೊಡದೇ ಇದ್ದರೇ ಕಿರುಕುಳ ನೀಡ್ತಾರೆ. ಒಂದು ಪುಸಲಾಯಿಸುತ್ತಾರೆ ಇಲ್ಲವೇ, ಬಲವಂತವಾಗಿ ಆಸ್ತಿ ಕಿತ್ತುಕೊಂಡ ಬಳಿಕ, ಹೆತ್ತ ತಂದೆ ತಾಯಿಯರನ್ನ ಬೀದಿಗೆ ತಳ್ಳುತ್ತಿದ್ದಾರೆ. ಇತ್ತ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದ ಬಳಿಕ ಬದುಕಲೂ ಆಗದೇ ಸಾಯಲೂ ಆಗದೇ ಅದೆಷ್ಟೋ ಹಿರಿಯ ಜೀವಗಳು ಕೊರಗುತ್ತಿವೆ. ಇಂಥವರಿಗೆ ಮುಂದೇನು ಮಾಡ್ಬೇಕು ? ಎಲ್ಲಿ ನ್ಯಾಯ ಕೇಳೋದು ಅನ್ನೋದೇ ಎಷ್ಟೋ ಜನಕ್ಕೆ ಗೊತ್ತಿಲ್ಲ. ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವ ಹಿರಿಯ ನಾಗರಿಕರ ಸಹಾಯಕ್ಕೆಂದೇ ಅದೊಂದು ವಿಂಗ್ ಹಗಲಿರುಳೂ ಶ್ರಮಿಸುತ್ತಿದೆ.

ಹೀಗೆ ಮಕ್ಕಳು, ಸೊಸೆಯಂದಿರು ಅಷ್ಟೇ ಅಲ್ಲದೇ ಕುಟುಂಬಸ್ಥರಿಂದ ಅನ್ಯಾಯಕ್ಕೊಳಗಾದ ಅದೆಷ್ಟೋ ವೃದ್ಧರು ಹಿರಿಯ ನಾಗರಿಕರ ಕೇಂದ್ರ ಬಾಗಿಲು ತಟ್ಟುತ್ತಿದ್ದಾರೆ. ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ಶಾಂತಮ್ಮ ಅನ್ನೋರ ಇಬ್ಬರ ಮಕ್ಕಳು ತಾಯಿ ಹೆಸರಿನ 4 ಎಕರೆ ಜಮೀನನ್ನ ಲಪಟಾಯಿಸಿದ್ದರು. ನಂತರ ತಾಯಿ ಶಾಂತಮ್ಮರನ್ನ ಮಕ್ಕಳು ನೋಡಿಕೊಳ್ತಿರ್ಲಿಲ್ಲ. ಶಾಂತಮ್ಮ ದೂರಿನನ್ವಯ ಸಹಾಯಕ ಆಯುಕ್ತರಿಂದ ಆ ವೃದ್ಧೆ ಶಾಂತಮ್ಮಗೆ ನ್ಯಾಯಸಿಕ್ಕಿದ್ದು ಆಸ್ತಿ ಹಿಂದಿರುಗಿಸಲಾಗಿದೆ.

ರಾಯಚೂರು ತಾಲ್ಲೂಕಿನ ನಾಗನಗೌಡ ಅನ್ನೋರ ಆಸ್ತಿಯನ್ನ ಮಗ ಕಿತ್ತುಕೊಂಡು ಹಿಂಸಿಸುತ್ತಿದ್ದ. ಸದ್ಯ ಅವರಿಗೂ ನ್ಯಾಯ ಸಿಕ್ಕಿದೆ. ಇತ್ತ ಪತ್ನಿ ಸಾಜಿದಾ ಬೇಗಂ ಅನ್ನೋರನ್ನ ಪತಿ ಖಾಜಾ ಹುಸೇನ್ ಬೀದಿಗೆ ತಳ್ಳಿದ್ದ. ಆ ಮಹಿಳೆ ಪಟ್ಟ ಕಷ್ಟ ಅಷ್ಟಿಷ್ವಲ್ಲ. ಹಗಲು-ರಾತ್ರಿ ತುತ್ತು ಅನ್ನಕ್ಕಾಗಿ ಪರಿತಪಿಸಿದ್ದರು. ಈಕೆ ನೀಡಿದ ದೂರಿನನ್ವಯ ಸದ್ಯ ಆಕೆಗೆ ಪತಿಯಿಂದ ಆತನ ತಿಂಗಳ ಸಂಬಳದಲ್ಲಿ ಶೇಕಡಾ 25 ರಷ್ಟು ಪತ್ನಿ ಸಾಜಿದಾ ಬೇಗಂಗೆ ನೀಡಬೇಕು ಅಂತ ಆದೇಶಿಸಿಲಾಗಿದೆ.

ನ್ಯಾಯ ಸಿಕ್ಕಿದ್ದೇ ತಡ ಭಾವೋದ್ವೇಗಗೊಂಡ ಆ ಸಾಜಿದಾ ಬೇಗಂ ಅಧಿಕಾರಿಗಳ ಎದುರು ಗಳಗಳನೇ ಕಣ್ಣೀರಿಟ್ಟ ಘಟನೆ ನಡೆದಿದೆ. ಇದಷ್ಟೇ ಅಲ್ಲದೇ ಮೇರಮ್ಮ ಅನ್ನೋ ಮಹಿಳೆಗೆ ಸೊಸೆ ನಿತ್ಯ ಕಿರಕುಳ ಕೊಡ್ತಿದ್ಲು.. ಮನೆಯಲ್ಲಿರಲು ಬಿಡ್ತಿರ್ಲಿಲ್ಲ.. ಮತ್ತೊಂದೆಡೆ ಭೀಮಮ್ಮ ಅನ್ನೋ ವೃದ್ಧೆ ಹೆಸರಿನಲ್ಲಿ 6 ಎಕರೆ ಜಮೀನನ್ನ ಮಕ್ಕಳು ಕಿತ್ತುಕೊಂಡು ಹಿಂಸಿಸುತ್ತಿದ್ರು.. ನಂತರ ಆಕೆಗೆ ನ್ಯಾಯ ಕೊಡಿಸಿ ಆಕೆ ಮೇಲೆ ದಬ್ಬಾಳಿಕೆ ನಡೆಸದಂತೆ ಸ್ಥಳೀಯ ಪೊಲೀಸರಿಂದ ಭದ್ರತೆ ಕೊಡಲಾಗಿದೆ.

ಹೀಗೆ ಸಾಲು ಸಾಲು ಹಿರಿಯ ನಾಗರಿಕರ ಮೇಲಿನ ಕಿರಕುಳ ಪ್ರಕರಣಗಳು ದಾಖಲಾಗ್ತಿದೆ.. ಬೆರಳೆಣಿಕೆಯಷ್ಟು ವೃದ್ಧರು ಹಗಲಿರುಳು ಓಡಾಡಿ ಕಷ್ಟುಪಟ್ಟು ನ್ಯಾಯಕ್ಕಾಗಿ ಹಪಹಪಿಸುತ್ತಿದ್ದರೇ, ಅದೇಷ್ಟೋ ಜನ ಕಿರುಕುಳ ಕೊಡ್ತಿರೋದು ಮಕ್ಕಳು, ಸೊಸೆಯಂದಿರೇ ಅಲ್ವಾ ಅಂತ ಸುಮ್ಮನಾಗ್ತಿದ್ದಾರೆ. ಏನೇ ಆಗಲಿ ಹೀಗೆ ಹಿರಿಯ ಜೀವಗಳು ಬೀದಿಗೆ ಬೀಳ್ತಿರೋದು ದುರಂತವೇ.

ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು