ಬೆಂಗಳೂರಿನಲ್ಲಿ ಯುವತಿ ಮಿಸ್ಸಿಂಗ್, ರಾಯಚೂರಿನಲ್ಲಿ ಪ್ರೀತಿಸಿದ ಯುವಕನ ಜೊತೆ ಮದುವೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 01, 2023 | 2:33 PM

ಬೆಂಗಳೂರು ಪೊಲೀಸರ ತಲೆ ಬಿಸಿ ಮಾಡಿದ್ದ ಕೇಸ್, ಯುವತಿಯೊಬ್ಬಳು ಮಿಸ್ಸಿಂಗ್ ಆಗಿರೊ ಪ್ರಕರಣದ ಬಗ್ಗೆ ಸಿಲಿಕಾನ್ ಸಿಟಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇದೀಗ ಯುವತಿ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿದ್ದು ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಿದ್ದಾಳೆ.

ಬೆಂಗಳೂರಿನಲ್ಲಿ ಯುವತಿ ಮಿಸ್ಸಿಂಗ್, ರಾಯಚೂರಿನಲ್ಲಿ ಪ್ರೀತಿಸಿದ ಯುವಕನ ಜೊತೆ ಮದುವೆ
ಮದುವೆಯಾದ ಪ್ರೇಮಿಗಳು
Follow us on

ರಾಯಚೂರು: ಬೆಂಗಳೂರಿನಿಂದ ರಾಯಚೂರಿಗೆ ಹಾರಿ ಬಂದಿರೊ ಪ್ರಣಯ ಪಕ್ಷಿಗಳು, ಈ ಯುವಕನ ಹೆಸರು ಹುಲಿಗೇಶ್ ಹಾಗೂ ಯುವತಿ ಹೆಸರು ಆಫ್ರಿನಾ ಈತ ಮೂಲತಃ ರಾಯಚೂರಿನವ, ಆಕೆ ಮೂಲತಃ ಆಂಧ್ರದವಳು. ಹುಲಿಗೇಶ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಎಕ್ಸ್​ಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು. ಮೂಲತಃ ಆಂದ್ರಪ್ರದೇಶದವರಾಗಿದ್ದ ಆಫ್ರಿನಾ ಕೂಡ ಹುಲಿಗೇಶ್ ಕೆಲಸ ಮಾಡ್ತಿದ್ದ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕಳೆದ ಎರಡು ವರ್ಷಗಳಿಂದ ಇಬ್ಬರು ಜಾತಿ ಬೇಧ ಭಾವ ಮರೆತು ಒಬ್ಬರಿಗೊಬ್ಬರು ಹೆಚ್ಚಾಗೇ ಹಚ್ಚಿಕೊಂಡಿದ್ದರು. ಈ ಪ್ರೀತಿ ಕೊನೆಗೆ ಮದುವೆ ಹಂತಕ್ಕೆ ಬಂದಿತ್ತು. ಆದರೆ ಯುವತಿ ಪೋಷಕರು ಇದಕ್ಕೆ ಒಪ್ಪಿರ್ಲಿಲ್ಲ. ಹುಲಿಗೇಶ್ ಹಾಗೂ ಆಫ್ರಿನಾ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಆಗ ಅದೊಂದು ದಿನ ಆಫ್ರಿನಾ ಏಕಾಏಕಿ ಓಡಿಬಂದಿದ್ದಳು. ನಂತರ ಆಕೆ ಪೋಷಕರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದರು. ನಂತರ ಈ ಕೇಸ್ ಪೊಲೀಸರಿಗೆ ತಲೆಬೀಸಿ ಮಾಡಿತ್ತು.

ಅತ್ತ ಮಿಸ್ಸಿಂಗ್ ಕೇಸ್ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ನಡೆಸಿದ್ರು. ಇತ್ತ ಬಿಸಿಲುನಾಡು ರಾಯಚೂರಿನ ಪಶ್ಚಿಮ ಪೊಲೀಸರಿಗೆ ಅದೊಂದು ಫೋನ್ ಕಾಲ್ ಬಂದಿತ್ತು. ಯಾರೋ ಇಬ್ಬರು ಯುವಕ, ಯುವತಿ ಮಂತ್ರಾಲಯದ ರಸ್ತೆಯಲ್ಲಿರೊ ನಂದೀಶ್ವರ ದೇವಸ್ಥಾನದಲ್ಲಿ ಮದುವೆಯಾಗ್ತಿರೊ ಬಗ್ಗೆ. ಆಗ ಪೊಲೀಸರು ನಂದೀಶ್ವರ್ ದೇವಸ್ಥಾನಕ್ಕೆ ಬರೋವಷ್ಟರಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ನಂತರ ಪೊಲೀಸರು ಇಬ್ಬರನ್ನ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ರು. ಆಗ ಅವರಿಬ್ಬರೂ ಬೆಂಗಳೂರಿನಿಂದ ಬಂದಿದ್ದಾಗಿ ಮಾಹಿತಿ ನೀಡಿದ್ರು. ಈ ವೇಳೆ ಬೆಂಗಳೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿರೊ ಬಗ್ಗೆ ಮಾಹಿತಿ ಕೂಡ ರಾಯಚೂರು ಪೊಲೀಸರಿಗೆ ಸಿಕ್ಕಿತ್ತು. ಆಗ ಪೊಲೀಸರು ಹುಲಿಗೇಶ್ ಹಾಗೂ ಆಫ್ರಿನಾ ಮದುವೆಯಾಗಿರೊ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ರು. ನಂತರ ನಾವಿಬ್ರು ನಂದೀಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿ ಹೇಳಿಕೆ ಕೊಟ್ಟರು. ಎರಡು ವರ್ಷದಿಂದ ಪರಸ್ಪರ ಪ್ರೀತಿ ಮಾಡ್ತಿದ್ವಿ. ಆದರೆ ನಮ್ಮ ಮನೆಯಲ್ಲಿ ಒಪ್ಪಿರ್ಲಿಲ್ಲ. ಹೀಗಾಗಿ ರಾಯಚೂರಿಗೆ ಬಂದು ಮದುವೆಯಾಗಿದ್ದಿವಿ ಎಂದು ಯುವತಿ ಪ್ರತಿಕ್ರಿಯಿಸಿದ್ದಾಳೆ.

ಹೀಗೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್ ರಾಯಚೂರಿನಲ್ಲಿ ಸುಖಾಂತ್ಯವಾಗಿದೆ. ಆದರೆ ಪ್ರಕರಣ ದಾಖಲಾಗಿರೊ ಹಿನ್ನೆಲೆ ಬೆಂಗಳೂರು ಪೊಲೀಸರು ಈ ಬಗ್ಗೆ ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Wed, 1 February 23